18 ಪ್ರಸಿದ್ಧ ದೇವಸ್ಥಾನದಲ್ಲಿ ಡ್ರೆಸ್ ಕೋಡ್; ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ನಿಷೇಧ!
18 ಪ್ರಸಿದ್ಧ ದೇವಸ್ಥಾನದಲ್ಲಿ ಇದೀಗ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಹಾಕಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ಈ ರೀತಿಯ ಉಡುಪುಗಳಿಗೆ ನಿಷೇಧ ಹೇರಲಾಗಿದೆ.

ಮುಂಬೈ(ಜೂ.03): ಪವಿತ್ರ ದೇವಸ್ಥಾನ ಪ್ರವೇಶಿಕ್ಕೆ ವಸ್ತ್ರಸಂಹಿತೆ ಜಾರಿಯಾಗಿದೆ. ಬೇಕಾಬಿಟ್ಟಿ ಉಡುಪು ಧರಿಸಿ ದೇವಸ್ಥಾನ ಪ್ರವೇಶಿಸಲು ಇನ್ನು ಸಾಧ್ಯವಿಲ್ಲ. ಕಾರಣ ಪ್ರಸಿದ್ಧ 18 ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದ ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಸಂಘಟನೆ ಈ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಮಹಾರಾಷ್ಟ್ರದ 18 ದೇವಸ್ಥಾನಗಳಲ್ಲಿ ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಹಾಕಿ ಪ್ರವೇಶಿಸುವಂತಿಲ್ಲ. ಇಂತಹ ಉಡುಪುಗಳಿಗೆ ನಿಷೇಧ ಹೇರಲಾಗಿದೆ.
ಮೊದಲ ಹಂತದಲ್ಲಿ 18 ದೇವಸ್ಥಾನದಲ್ಲಿ ಈ ಡ್ರೆಸ್ ಕೋಡ್ ಜಾರಿಯಾಗಿದೆ. ಮಹಾರಾಷ್ಟ್ರದ ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಘಟಕ ಜಂಟಿಯಾಗಿ ಮಹತ್ವದ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಇದೇ ವೇಳೆ ಶೀಘ್ರದಲ್ಲೇ ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳಾದ ಶಿರಡಿ ಸೇರಿದಂತೆ ಇತರ ಪ್ರಸಿದ್ಧ ಮಂದಿರಗಳಲ್ಲೂ ಡ್ರೇಸ್ ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದೆ. ಇತ್ತ ಸರ್ಕಾರ ಕೂಡ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿ: ಲೆಗ್ಗಿಂಗ್ಸ್ , ಟೀಶರ್ಟ್, ಜೀನ್ಸ್ ನಿಷೇಧ
ಈಗಾಗಲೇ ನಾಗ್ಪುರದ ನಾಲ್ಕು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಇದರ ಮುಂದವರಿದ ಭಾಗವಾಗಿ 18 ಮಂದಿರಗಳಲ್ಲಿ ಇದೀಗ ವಸ್ತ್ರಸಂಹಿತೆ ಜಾರಿಯಾಗುತ್ತಿದೆ. ಶೀಘ್ರದಲ್ಲೆ ಮಹಾರಾಷ್ಟ್ರದ ಬಹುತೇಕ ಎಲ್ಲಾ ಹಿಂದೂ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಲಿದೆ.
ಇತ್ತೀಚೆಗೆ ಹರ್ಯಾಣ ಸರ್ಕಾರ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದೆ. ಆದರೆ ಡ್ರೆಸ್ ಕೋಡ್ ಜಾರಿ ಮಾಡಿರುವುದು ದೇವಸ್ಥಾನದಲ್ಲಿ ಅಲ್ಲ, ಬದಲಾಗಿ ಆಸ್ಪತ್ರೆಯಲ್ಲಿ. ಹರ್ಯಾಣ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ದಕ್ಕೆ ಉಗುರು ಬಿಡುವುದು, ಸ್ಕರ್ಚ್/ಶಾಟ್ಸ್‌ರ್/ಜೀನ್ಸ್/ಪಾರದರ್ಶಕ ಉಡುಪುಗಳನ್ನು ನಿಷೇಧಿಸಲಾಗಿದೆ.
Mysuru: ವಸ್ತ್ರಸಂಹಿತೆ ಜಾರಿಗಿಂತ, ತಾವೇ ಸೂಕ್ತ ವಸ್ತ್ರಧರಿಸುವುದು ಒಳ್ಳೆಯದು: ಪ್ರತಾಪ್ ಸಿಂಹ
ಖಾಸಗಿ ಆಸ್ಪತ್ರೆಗೆ ಹೋದರೆ ವೈದ್ಯ ಸಿಬ್ಬಂದಿ ಶಿಸ್ತಾಗಿ ಸಮವಸ್ತ್ರದಲ್ಲಿ ಬಂದಿರುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಸಿಬ್ಬಂದಿ ಯಾರು, ರೋಗಿ ಯಾರು ಎಂದೇ ಗೊತ್ತಾಗದು. ಹೀಗಾಗಿ ಸಿಬ್ಬಂದಿಯಲ್ಲಿ ಶಿಸ್ತು ಹಾಗೂ ಸಮಾನತೆ ಕಾಪಡಿಕೊಳ್ಳಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಆಸ್ಪತ್ರೆಗಳಿಗೆ ಒಂದು ಉತ್ತಮ ಇಮೇಜ್ ಬರಲಿದೆ’ ಎಂದು ಇವುಗಳನ್ನು ಪ್ರಕಟಿಸಿದ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದರು.
ಸರ್ಕಾರಿ ಆಸ್ಪತ್ರೆಗಳ ಕ್ಲಿನಿಕಲ್ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಸಾರಿಗೆ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಬಾಣಸಿಗರು, ವೈದ್ಯರು, ದಾದಿಯರಿಗೆ ಇದು ಅನ್ವಯವಾಗುತ್ತದೆ. ಇವರು ಕರ್ತವ್ಯದ ಅವಧಿಯಲ್ಲಿ ಅಚ್ಚುಕಟ್ಟಾಗಿ ನಿಗದಿಪಡಿಸಿದ ಸಮವಸ್ತ್ರದಲ್ಲಿ ಬರಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಇಂಥವರನ್ನು ಆ ದಿನದ ಕರ್ತವ್ಯಕ್ಕೆ ಗೈರುಹಾಜರು ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದರು.