ಬೆಂಗಳೂರು(ಅ. 16)  ಬೆನ್ನು ತುರಿಕೆಯಾದರೆ ಸಾಮಾನ್ಯವಾಗಿ ಏನು ಮಾಡುತ್ತೇವೆ? ಕೈಯಿಂದ ಕರೆದುಕೊಳ್ಳುತ್ತೇವೆ.. ಅದು ಸಾಧ್ಯವಾಗಿಲ್ಲ ಅಂದ್ರೆ ಯಾರಾದರೂ ಹೆಲ್ಪ್ ಮಾಡ್ರಪ್ಪಾ ಎಂದು ದುಂಬಾಲು ಬೀಳುತ್ತೇವೆ. ಆದರೆ ಈ ಅಸಾಮಿ  ಎಲ್ಲವನ್ನು ಮೀರಿಸಿದ್ದಾನೆ.

ಈತ ಅಂತಿಂಥ ವ್ಯಕ್ತಿ ಅಲ್ಲ ಬಿಡಿ. ಜೆಸಿಬಿಯನ್ನೇ ಬಳಸಿ ಬೆನ್ನು ಕೆರೆತ ನಿವಾರಣೆ ಮಾಡಿಕೊಂಡಿದ್ದಾನೆ.  ಸೋಶಿಯಲ್ ಮೀಡಿಯಾದಲ್ಲಿ ಈ 'ಬೆನ್ನು ಕೆರೆತ' ವಿಡಿಯೋ ಭಾರೀ ವೈರಲ್ ಆಗುತ್ತಿದ್ದು ಭಿನ್ನ ಭಿನ್ನ ಪ್ರತಿಕ್ರಿಯೆ  ಬಂದಿದೆ.

ಜೆಸಿಬಿಯಿಂದ ಟ್ರಕ್ ಇಳಿದ ಮಹಿಳೆಯರ ಚಮತ್ಕಾರ

ಕಾಮಗಾರಿ ನಡೆಯುವ ಜಾಗದಲ್ಲಿ ಈ ವ್ಯಕ್ತಿ ಜೆಸಿಬಿ ಮುಂದೆ ನಿಂತುಕೊಂಡು ಬೆನ್ನು ಕೆರೆಯಲು ಹೇಳುತ್ತಾನೆ. ಅದೆ ರೀತಿ ಜೆಸಿಬಿ ಚಾಲಕ ಸಹ ಮಾಡಿದ್ದಾನೆ. ಮೇಲು ನೋಟಕ್ಕೆ ತಮಾಷೆ ವಿಡಿಯೋ ಅನಿಸಿದರೂ ಇದರ ಹಿಂದಿನ ಅಪಾಯವೂ ಅಷ್ಟೆ ಇದೆ ಬಿಡಿ.

ಮೊದಲಿಗೆ ಕೈಯಲ್ಲಿದ್ದ ಟವೆಲ್ ನಿಂದ ಬೆನ್ನು ಕೆರೆದುಕೊಳ್ಳುತ್ತಿದ್ದವನಿಗೆ ಸಮಾಧಾನಾ ಆಗಿಲ್ಲ. ಹಾಗಾಗಿ ಆತ ಸೀದಾ ಹೋಗಿ ನಿಂತಿದ್ದು ಜೆಸಿಬಿ ಎದುರಿಗೆ. ಸೋಶಿಯಲ್ ಮೀಡಿಯಾದಲ್ಲಿ ಎರಡು ಲಕ್ಷಕ್ಕೂ ಅಧೀಕ ವೀವ್ಸ್ ಕಂಡಿದೆ.  ಕಳೆದ ಫೆಬ್ರವರಿಯಲ್ಲಿ ಹೆಂಗಳೆಯರ ತಂಡವೊಂದು ಜೆಸಿಬಿ ಬಳಸಿ ಲಾರಿಯಿಂದ ಕೆಳಗೆ ಇಳಿದಿದ್ದು ವೈರಲ್ ಆಗಿತ್ತು.