ಸರ್ಕಾರಿ ಬಸ್ ಹೈಜಾಕ್: ಪ್ರಯಾಣಿಕರಿಂದ ಟಿಕೆಟ್ ಹಣ ಪಡೆದು ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎಸ್ಕೇಪ್
ಈ ಪ್ರಪಂಚದಲ್ಲಿ ಎಂತೆಂಥಾ ಕಿಲಾಡಿಗಳಿರ್ತಾರೆ ನೋಡಿ, ನೀವು ಕಾರು ಬೈಕ್ ಆಟೋ ಮುಂತಾದ ವಾಹನಗಳನ್ನು ಕದಿಯುವುದನ್ನು ನೋಡಿರಬಹುದು. ಆದರೆ ನೆರೆಯ ತೆಲಂಗಾಣದಲ್ಲಿ ಓರ್ವ ಸರ್ಕಾರಿ ಬಸ್ಸನೇ ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೈದರಾಬಾದ್: ಈ ಪ್ರಪಂಚದಲ್ಲಿ ಎಂತೆಂಥಾ ಕಿಲಾಡಿಗಳಿರ್ತಾರೆ ನೋಡಿ, ನೀವು ಕಾರು ಬೈಕ್ ಆಟೋ ಮುಂತಾದ ವಾಹನಗಳನ್ನು ಕದಿಯುವುದನ್ನು ನೋಡಿರಬಹುದು. ಆದರೆ ನೆರೆಯ ತೆಲಂಗಾಣದಲ್ಲಿ ಓರ್ವ ಸರ್ಕಾರಿ ಬಸ್ಸನೇ ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ತೆಲಂಗಾಣದ ಹೈದರಾಬಾದ್‌ನ ಸಿದ್ದಿಪೇಟ್ ಬಳಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಕಳ್ಳ ಮಾಡಿದ್ದೇನು?
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ (TSRTC) ಇಲಾಖೆಗೆ ಸೇರಿದ ಸಿಬ್ಬಂದಿಯಂತೆ ವರ್ತಿಸಿದ ಈತನಿಗೆ ವಾಹನ ಚಾಲನೆ ಕೌಶಲ್ಯ ತಿಳಿದಿತ್ತು. ಹೀಗಾಗಿ ಈತ ಸಿದ್ದಿಪೇಟೆ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಿಬ್ಬಂದಿ ನಿಲ್ಲಿಸಿ ಹೋಗಿದ್ದ ಬಸ್ಸನ್ನು ಅಲ್ಲಿಂದ ಎಗ್ಗರಿಸಿದ್ದಾನೆ. ನಂತರ ಆತ ಅದನ್ನು ಚಾಲನೆ ಮಾಡಿಕೊಂಡು ರಸ್ತೆಯಲ್ಲಿ ಹೋಗಿದ್ದು, ಬಸ್‌ಗೆ ಹತ್ತಿದವರಿಂದೆಲ್ಲಾ ಹಣ ವಸೂಲಿ ಮಾಡಿದ್ದಾನೆ. ಆದರೆ ಮಾರ್ಗಮಧ್ಯೆ ಡೀಸೆಲ್ ಖಾಲಿ ಆಗಿ ಬಸ್ ನಿಂತು ಹೋಗಿದ್ದು, ಈ ವೇಳೆ ಬಸ್‌ನ್ನು ಅದರಲ್ಲಿದ್ದ ಪ್ರಯಾಣಿಕರನ್ನು (Passengers) ಮಾರ್ಗಮಧ್ಯೆಯೇ ಬಿಟ್ಟು ಈತ ಪರಾರಿಯಾಗಿದ್ದಾನೆ.
ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ ಗಾಡಿ ಹೈಜಾಕ್!
ಇದಕ್ಕೂ ಮೊದಲು ಆತ ಬಸ್‌ನ್ನು ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು, ಅಲ್ಲಿದ್ದ ಕೆಲ ಪ್ರಯಾಣಿಕರಿಗೆ ಈ ಬಸ್ ಹೈದರಾಬಾದ್‌ಗೆ ತೆರಳುತ್ತಿರುವುದಾಗಿ ಹೇಳಿದ್ದಾನೆ. ಹೀಗಾಗಿ ಹೈದರಾಬಾದ್ ತೆರಳುವುದಕ್ಕಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದವರೆಲ್ಲಾ ಈ ಬಸ್ಸನ್ನು ಏರಿದ್ದಾರೆ. ನಂತರ ಈತನೂ ಬಸ್ ಏರಿದ್ದು, ಬಸ್ ಸ್ಟಾರ್ಟ್ ಮಾಡಿದ್ದಾನೆ. ಈ ವೇಳೆ ಕೆಲವು ಪ್ರಯಾಣಿಕರು ಕಂಡೆಕ್ಟರ್ ಎಲ್ಲಿ ಎಂದು ಕೇಳಿದ್ದಾರೆ. ಈ ವೇಳೆ ಆತ ಪ್ರಯಾಣದ ಮಧ್ಯೆ ಕಂಡಕ್ಟರ್ ಬಂದು ಸೇರಿಕೊಳ್ಳಲಿದ್ದಾನೆ ಎಂದು ಹೇಳಿದ್ದಾನೆ. ಆದರೆ ಚಾಲಕನ ಎರ್ರಾಬಿರಿ ಚಾಲನೆಯಿಂದಾಗಿ ಪ್ರಯಾಣಿಕರಿಗೆ ಆತನ ಮೇಲೆ ಮತ್ತಷ್ಟು ಅನುಮಾನ ಹೆಚ್ಚಾಗಿದೆ. .
ಈ ಮಧ್ಯೆ ಬಸ್ ಸಿರ್ಸಿಲ್ಲಾ ಜಿಲ್ಲೆಯ ಜಿಲ್ಲೆಲ್ಲಾ ಕ್ರಾಸ್ ರೋಡ್ ತಲುಪಿದ್ದು, ಅಷ್ಟರಲ್ಲಿ ಬಸ್‌ನ ಇಂಧನ ಖಾಲಿಯಾಗಿ ಬಸ್ ಮಧ್ಯದಲ್ಲೇ ನಿಲುಗಡೆಯಾಗಿದೆ. ಈ ವೇಳೆ ಪ್ರಯಾಣಿಕರು ಏನಾಯಿತು ಎಂದು ಅರಿಯುವ ಮೊದಲೇ ಆತ ಬಸ್‌ನಿಂದ ಇಳಿದು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಮಧ್ಯೆ ವಿಚಾರ ತಿಳಿದ ಸಿದ್ದಿಪೇಟೆ (Siddipet) ಟಿಆರ್‌ಟಿಎಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದ ಫೋಟೋ ವೀಡಿಯೋ ಆಧರಿಸಿ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಿಜೆಪಿ ವಿಷ ಸರ್ಪವಿದ್ದಂತೆ, ಅದನ್ನು ರಾಜ್ಯದಿಂದ ಅಟ್ಟಾಡಿಸಿ ಓಡಿಸಬೇಕು: ಉದಯನಿಧಿ
ಬಸ್ ಚಾಲಕ ಊಟಕ್ಕಾಗಿ ಬಸ್ ನಿಲ್ಲಿಸಿ ಹೋಗಿದ್ದಾಗ ಅವಾಂತರ
ಸಿರ್ಸಿಲ್ಲಾದಿಂದ ಜುಬಿಲಿ ಬಸ್ ನಿಲ್ದಾಣಕ್ಕೆ ಹೊರಟಿದ್ದ ಟಿಎಸ್‌ಆರ್‌ಟಿಸಿ ಬಸ್ ಚಾಲಕ, ಸಿದ್ದಿಪೇಟೆ ಬಸ್ ನಿಲ್ದಾಣ ತಲುಪಿ ಅಲ್ಲಿ ಭೋಜನಕ್ಕೆ ಬಸ್ ನಿಲ್ಲಿಸಿ ಊಟಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ನಿಲ್ಲಿಸಿದ ಬಸ್ ಏರಿದ ಅಪರಿಚಿತ ಚಾಲಕನ ಸೀಟಲ್ಲಿ ಕುಳಿತು ಪ್ರಯಾಣ ಆರಂಭಿಸಿದ್ದಾನೆ. ಆದರೆ ಇತ್ತ ಊಟಕ್ಕೆ ಹೋಗಿದ್ದ ಬಸ್ ಚಾಲಕ ಮರಳಿ ಬಂದಾಗ ಬಸ್ ಅಲ್ಲಿರಲಿಲ್ಲ, ಇದರಿಂದ ಗಾಬರಿಗೊಂಡ ಚಾಲಕ ತಕ್ಷಣ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಪ್ರಯಾಣಿಕರ ಸಮೇತ ಬಸ್ ನಾಪತ್ತೆಯಾದ ವಿಚಾರ ತಿಳಿಸಿದ್ದಾನೆ. ಇದಾಗಿ ಸ್ವಲ್ಪ ಹೊತ್ತಿನ ನಂತರ ಬಸ್ ಆತ ಜಿಲ್ಲೆಲಾ ಕ್ರಾಸ್‌ರೋಡ್ ಬಳಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.