ನ್ಯಾನೋಕಾರನ್ನೇ ಹೆಲಿಕಾಪ್ಟರ್‌ನಂತೆ ಮಾಡಿ ಕಾಸು ಮಾಡುತ್ತಿರುವ ಮೆಕಾನಿಕ್
- ನ್ಯಾನೋ ಕಾರಿನಿಂದ ಮಾಡಿದ ಹೆಲಿಕಾಪ್ಟರ್‌ಗೆ ಭಾರಿ ಬೇಡಿಕೆ
- ಕಾರಿಗೆ ಎರಡು ಲಕ್ಷ ವೆಚ್ಚ ಮಾಡಿ ಹೆಲಿಕಾಪ್ಟರ್‌ನಂತೆ ಮಾಡಿದ ವ್ಯಕ್ತಿ
- ಮದುವೆಗಾಗಿ ಈ ಕಾರಿನ ಹೆಲಿಕಾಪ್ಟರ್ ಬಾಡಿಗೆ ಪಡೆಯುವ ಜನ
ಪಾಟ್ನಾ(ಫೆ.19): ಭಾರತೀಯರು ವಿಭಿನ್ನವಾಗಿ ಯೋಚಿಸುವುದರಲ್ಲಿ, ತಂತ್ರಜ್ಞಾನವನ್ನು ವಿಭಿನ್ನವಾಗಿ ಬಳಸುವುದರಲ್ಲಿ ಪರಿಣಿತರು. ಇದಕ್ಕೆ ಈಗಾಗಲೇ ನಮ್ಮಲ್ಲಿ ಬೇಕಾದಷ್ಟು ಸಾಕ್ಷ್ಯಗಳಿವೆ. ಈಗ ಬಿಹಾರ ಮೂಲದ ಮೆಕಾನಿಕ್ ಒಬ್ಬರು ತಮ್ಮ ನ್ಯಾನೋ ಕಾರಿಗೆ 2 ಲಕ್ಷ ರೂಪಾಯಿ ವೆಚ್ಚ ಮಾಡಿ ಹೆಲಿಕಾಪ್ಟರ್ ಆಗಿ ಅದನ್ನು ಪರಿವರ್ತಿಸಿದ್ದಾರೆ. ಇದು ಈಗ ಇವರಿಗೆ ಆದಾಯದ ಮೂಲವಾಗಿ ಪರಿಣಮಿಸಿದೆ.
ಹೇಳಿಕೇಳಿ ಭಾರತದಲ್ಲಿ ಈಗ ಮದುವೆಯ ಸೀಸನ್ ಆಗಿದ್ದು, ಬಹುತೇಕರು ತಮ್ಮ ಮದುವೆಯನ್ನು ಎಲ್ಲರಿಗಿಂತ ವಿಭಿನ್ನ ವಿಶೇಷವಾಗಿಸಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಏನೇನೋ ಸಾಹಸ ಮಾಡುತ್ತಾರೆ. ಕುದುರೆಯ ಮೇಲೆ ಬರುವುದು, ಬುಲ್ಡೋಜರ್‌ನಲ್ಲಿ ಬರುವುದು, ಎತ್ತಿನಗಾಡಿಯಲ್ಲಿ ಬರುವುದು ಡಾನ್ಸ್ ಮಾಡುತ್ತಾ ಬರುವುದು ಇವೆಲ್ಲವನ್ನು ಮಾಡುತ್ತಾರೆ. ವಧುವರರು ಮದುವೆ ಮನೆಗೆ ತೆರಳಲು ವಿಭಿನ್ನ ಮಾರ್ಗ ಹಿಡಿಯುವ ಈ ಟ್ರೆಂಡ್ ಈಗ ಇಲ್ಲಿ ಮೆಕಾನಿಕ್ ಒಬ್ಬರ ಜೇಬು ತುಂಬಿಸುತ್ತಿದೆ ಎಂದರೆ ತಪ್ಪಗಾಲಾರದು.
Used Cars sales ದೇಶದ ಸಣ್ಣ ನಗರ, ಪಟ್ಟಣಗಳಲ್ಲಿ ಬಳಸಿದ ಲಕ್ಷುರಿ ಕಾರುಗಳಿಗೆ ಭಾರಿ ಬೇಡಿಕೆ!
ಬಹುತೇಕರುವಧು ವರರರು ತಾವು ಹೆಲಿಕಾಪ್ಟರ್‌ನಲ್ಲಿ ಮದುವೆ ಮನೆಗೆ ಹೋಗಬೇಕೆಂದು ಬಯಸುತ್ತಾರೆ. ಆದರೆ ನಿಜವಾದ ಹೆಲಿಕಾಪ್ಟರ್‌ನ್ನು ಬಾಡಿಗೆ ಪಡೆಯಲು ಸಾಕಷ್ಟು ಹಣ ಬೇಕಾಗುವುದು. ಆದರೆ ಈ ಕಾರಿನಿಂದ ನಿರ್ಮಿಸಿದ ಹೆಲಿಕಾಪ್ಟರ್‌ಗೆ ಕೇವಲ 15 ಸಾವಿರ ರೂಪಾಯಿ ನೀಡಿದರೆ ಸಾಕು. ಈ ಹಿನ್ನೆಲೆಯಲ್ಲಿ ಅನೇಕರು ಈ ಮೆಕಾನಿಕ್ ಬಳಿ ಬಂದು ಅವರ ಈ ನ್ಯಾನೋ ಕಾರಿನ ಹೆಲಿಕಾಪ್ಟರ್‌ನ್ನು ಬಾಡಿಗೆ ಪಡೆಯುತ್ತಾರಂತೆ.
ದೈನಿಕ್ ಭಾಸ್ಕರ್ (Dainik Bhaskar) ವರದಿ ಪ್ರಕಾರ, ಬಾಗಹದ (Bagaha) ನಿವಾಸಿ ಗುಡ್ಡು ಶರ್ಮಾ(Guddu Sharma) ಅವರು 2 ಲಕ್ಷ ರೂಪಾಯಿ ಖರ್ಚು ಮಾಡಿ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಮಾಡಿದ್ದಾರೆ. ಇಡೀ ವಾಹನವನ್ನು ಸಿದ್ಧಪಡಿಸಲು ಗುಡ್ಡು, ಸಂವೇದಕಗಳನ್ನು (sensor) ಬಳಸಿದ್ದಾರೆ ಎಂದು ವರದಿಯಾಗಿದೆ. ಅವರ ಈ ಸೃಜನಶೀಲ ಆವಿಷ್ಕಾರವು ಈಗಾಗಲೇ ಜನಪ್ರಿಯ ಆಗಿದ್ದು, ಈಗಾಗಲೇ ಈ ಹೆಲಿಕಾಪ್ಟರ್‌ನ್ನು 19 ಜನರು ಅದನ್ನು ಬುಕ್ ಮಾಡಿದ್ದಾರಂತೆ. ಹೆಲಿಕಾಪ್ಟರ್ ಅನ್ನು 15,000 ರೂಪಾಯಿಗೆ ಮದುವೆಯಾಗುವ ವರರಿಗೆ ಬಾಡಿಗೆಗೆ ನೀಡಲಾಗುತ್ತದೆ.
ವೋಕ್ಸ್‌ವೇಗನ್ ಸೇರಿ ಹಲವು ಪ್ರತಿಷ್ಠಿತ ಸಂಸ್ಥೆಯ ಕಾರುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಸಮುದ್ರದ ಮಧ್ಯೆ ಬೆಂಕಿ
ಕಾರಿಗೆ ಹೆಲಿಕಾಪ್ಟರ್ ರೂಪ ನೀಡಿದ ಮೆಕ್ಯಾನಿಕ್ (mechanic) ಗುಡ್ಡು ಶರ್ಮಾ ಮಾತನಾಡಿ, ಡಿಜಿಟಲ್ ಇಂಡಿಯಾದ (Digital India)ಯುಗದಲ್ಲಿ ಈ ಆವಿಷ್ಕಾರ ಸ್ವಾವಲಂಬಿ ಭಾರತಕ್ಕೆ ಜೀವಂತ ಉದಾಹರಣೆಯಾಗಿದೆ. ಇಂತಹ ಹೆಲಿಕಾಪ್ಟರ್ ತಯಾರಿಸಲು ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ಬೇಕಾಗುತ್ತದೆ, ಆದರೆ ಹೈಟೆಕ್ ರೂಪ ನೀಡಲು ಎರಡು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತದೆ. ಇದರ ಬಾಡಿಗೆ 15,000 ರೂಪಾಯಿ ಎಂದು ಹೇಳಿದರು. ವರದಿಯ ಪ್ರಕಾರ, ಮದುವೆಯ ಈ ಸಂದರ್ಭದಲ್ಲಿ ಈ ಕಾರಿನ ಹೆಲಿಕಾಪ್ಟರ್‌ಗೆ ಭಾರಿ ಬೇಡಿಕೆ ಇದೆಯಂತೆ. ಏಕೆಂದರೆ ಅನೇಕ ಜನರು ತಮ್ಮ ವಧುವನ್ನು ಅಥವಾ ವರನನ್ನು ಮನೆಗೆ ಕರೆತರಲು ಈ ಹೆಲಿಕಾಪ್ಟರ್‌ನ್ನು ಬಯಸುತ್ತಾರಂತೆ.
ಮನುಷ್ಯನ ಉಗಮವಾದಾಗಿನಿಂದಲೂ ಹೊಸ ಹೊಸ ವಸ್ತುಗಳಿಗಾಗಿ, ಉಪಕರಣಗಳಿಗಾಗಿ ಆವಿಷ್ಕಾರ (Invention)ಗಳು ನಡೆಯುತ್ತಲೇ ಇವೆ. ಜೀವನಶೈಲಿಯನ್ನು ಸುಲಭವಾಗಿಸಲು ಮನುಷ್ಯ ಹಲವು ಯಂತ್ರಗಳನ್ನು, ವಸ್ತುಗಳನ್ನು ಆವಿಷ್ಕರಿಸುತ್ತಲೇ ಇದ್ದಾನೆ. ನಾವೀನ್ಯತೆಗಳಿಗೆ ಯಾವುದೇ ಮಿತಿಯಿಲ್ಲ. ಅದು ನಿಜ ಅನ್ನೋದು ಸಾಬೀತಾಗುತ್ತಲೇ ಇದೆ. ಪ್ರಪಂಚದಲ್ಲಿ ಹೊಸ ಹೊಸ ವಸ್ತುಗಳು ಆವಿಷ್ಕಾರವಾಗುತ್ತಲೇ ಇರುತ್ತವೆ. ಅದರಿಂದ ಒಳಿತುಗಳಿರುವಂತೆಯೇ ಕೆಡುಕುಗಳಿದ್ದರೂ ಮನುಷ್ಯ ಅವುಗಳನ್ನು ಬಳಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಅಪರೂಪದ ಆವಿಷ್ಕಾರಗಳು ವರ್ಲ್ಡ್ ರೆಕಾರ್ಡ್ (World Record)ನಲ್ಲೂ ದಾಖಲೆಯಾಗುತ್ತವೆ.