ನವದೆಹಲಿ(ಡಿ.29): 2020ರಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂದು ಬಹುಶಃ ಯಾರೂ ಈ ಹಿಂದೆ ಊಹಿಸಿರಲಿಕ್ಕಿಲ್ಲ. ಈ ವರ್ಷದ ಆರಂಭ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ರಾಜವಂಶದಿಂದ ಬೇರ್ಪಡುವ ಸುದ್ದಿಯಿಂದ ಆರಂಭವಾಗಿತ್ತು. ಇದಾಧ ಬಳಿಕ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಅಬ್ಬರ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಇದಾದ ಬಳಿಕ ಬಂದೆರಗಿತ್ತು ಮಹಾಮಾರಿ ಕೊರೋನಾ. 2020ನೇ ವರ್ಷ ಜಗತ್ತಿನಲ್ಲಿ ಜನರ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿದ ವರ್ಷವೆಂದೇ ಹೇಳಬಹುದು. ಸದ್ಯ ಶಾಲಾ ವಿದ್ಯಾರ್ಥಿಯೊಬ್ಬ 10 ವರ್ಷದ ಹಿಂದೆ 2020ರ ಕುರಿತಾಗಿ ಬರೆದಿದ್ದ ಭವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆತ ಬರೆದಿದ್ದೇನು? ನೀವೇ ನೋಡಿ

ಸದ್ಯ ಟ್ವಿಟರ್‌ನಲ್ಲಿ ಕೇವಿನ್ ಸಿಂಗ್ ಫುಲ್ ಫೇಮಸ್ ಆಗಿದ್ದಾನೆ. ಆತ ಹತ್ತು ವರ್ಷದ ಹಿಂದೆ 2020 ರ ಬಗ್ಗೆ ಭವಿಷ್ಯ ನುಡಿದಿದ್ದ. ಅದರಲ್ಲಿ ಆತ ಈ ವರ್ಷ ಪ್ರತಿಯೊಬ್ಬರು ಶಾಂತಿಯುತವಾಗಿ ಜೀವನ ಸಾಗಿಸಲಿದ್ದಾರೆ ಹಾಗೂ ಮಾನವೀಯತೆ 2020 ರಲ್ಲಿ ಪ್ರತಿಯೊಂದು ರೋಗಕ್ಕೂ ಚಿಕಿತ್ಸೆಯಾಗಲಿದೆ ಎಂದಿದ್ದರು. ಆದರೆ ಹೀಗಾಗಲೇ ಇಲ್ಲ.

ಕೆವಿನ್ ಸಿಂಗ್ ತಮ್ಮ ಶಾಲಾ ವಾರ್ಷಿಕ ಪುಸ್ತಕದಲ್ಲಿ ಈ ಭವಿಷ್ಯ ನುಡಿದಿದ್ದರು. ಸದ್ಯ ಈ ಪುಸ್ತಕದ ಆ ಪುಟದ ಫೋಟೋ ಎಲ್ಲರೂ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅನೇಕ ಮಂದಿ ಆ ಬಾಲಕನ ಮುಗ್ಧತೆಗೆ ತಲೆದೂಗಿದರೆ, ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಅದೇನಿದ್ದರೂ ಆ ಬಾಲಕ ನುಡಿದಿದ್ದ ಭವಿಷ್ಯ ನಿಜವಾಗಿರುತ್ತಿದ್ದರೆ, ಅದೆಷ್ಟು ಚೆನ್ನಾಗಿರುತ್ತಿತ್ತಲ್ಲಾ...!