ಬರೇಲಿ(ಮೇ.18): ಲಾಕ್‌ಡೌನ್‌ನಿಂದ ಸಿಕ್ಕಾಕ್ಕೊಂಡು ಸಂಕಷ್ಟಕ್ಕೀಡಾದ ಘಟನೆಗಳು ವರದಿಯಾಗುತ್ತಲೇ ಇವೆ. ಆದರೀಗ ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದ ಘಟನೆ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಯಾಕೆಂದರೆ ಇಲ್ಲೊಬ್ಬ ಹೆಣ್ಮಗಳು ತನ್ನ ತವರು ಮನೆಯಲ್ಲಿ ಬಾಕಿಯಾಗಿದ್ದು, ಇತ್ತ ಕಾಯಲಾಗದ ಗಂಡ ತನ್ನ ಸೋದರ ಸಂಬಂಧಿಯನ್ನೇ ಮದುವೆಯಾಗಿದ್ದಾನೆ. ಪತ್ನಿ ನಸೀಂ ಈಗ ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವೀ ತಂಗಿ ಫರ್ಹತ್ ನಕ್ವೀ ನಡೆಸುತ್ತಿರುವ ಎನ್‌ಜಿಒ ಮೊರೆ ಹೋಗಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿದಿರುವ ಫರ್ಹತ್ ನಕ್ವೀ ಅತಿ ಶೀಘ್ರದಲ್ಲೇ ಪೊಲೀಸರಿಗೆ ಈ ಸಂಬಂಧ ದೂರು ನೀಡಲಿದ್ದು, ಸಂತ್ರಸ್ತ ಮಹಿಳೆ ನಸೀಂಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು 2013ರಲ್ಲಿ ನಯೀಂ ಒಪ್ಪಿಗೆ ಮೇರೆಗೆ ನಸೀಂ ವಿವಾಹವಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೀಗಿರುವಾಗ ಮಾರ್ಚ್ 19 ರಂದು ನಸೀಂ ತನ್ನ ತಂದೆ ತಾಯಿಯನ್ನು ನೋಡಲು ತವರು ಮನೆಗೆ ತೆರಳಿದ್ದರು. ಆದರೆ ಲಾಕ್‌ಡೌನ್ ಘೋಷಣೆಯಿಂದಾಗಿ ಅಲ್ಲೇ ಉಳಿದುಕೊಳ್ಳಬೇಕಾಯಿತು.

ಲಾಕ್‌ಡೌನ್‌ ಲೆಕ್ಕಿಸದೇ ಮದುವೆ ಆದವನಿಗೆ ಬಂತು ಕೊರೋನಾ!

ಇಬ್ಬರೂ ಪತ್ನಿಯನ್ನು ಇಟ್ಟುಕೊಳ್ಳುತ್ತೇನೆಂದ ಪತಿರಾಯ

ನಸೀಂಗೆ ಇತ್ತೀಚೆಗಷ್ಟೇ ತನ್ನ ಗಂಡ ಸೋದರ ಸಂಬಂಧ ಜೊತೆ ಮದುವೆಯಾಗಿದ್ದು, ಆಕೆಯೊಂದಿಗೇ ಉಳಿದುಕೊಂಡಿದ್ದಾನೆಂಬ ವಿಚಾರ ತಿಳಿದಿದೆ. ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಅದೇಗೋ ಸಾಹಸ ಮಾಡಿ ಆಕೆ ಗಂಡನ ಮನೆ ತಲುಪಿದ್ದು, ಈ ಸಂಬಂಧ ಚಕಾರವೆತ್ತಿದ್ದಾಳೆ. ಈ ವೇಳೆ ಪತಿರಾಯಯಯ ತಾನು ಇಬ್ಬರನ್ನೂ ಇಟ್ಟುಕೊಳ್ಳಲು ಸಿದ್ಧ ಎಂದಿದ್ದಾನೆ. ಇದರಿಂದ ಕೋಪಗೊಂಡ ನಸೀಂ ಎನ್‌ಜಿಒ ಮೊರೆ ಹೋಗಿದ್ದಾರೆ.