ಲಾಕ್‌ಡೌನ್‌ ಲೆಕ್ಕಿಸದೆ ಪಶ್ಚಿಮ ಬಂಗಾಳಕ್ಕೆ ಹೋಗಿ ಲವ್ ಮಾಡಿದ್ದ ಹುಡುಗಿಯೊಂದಿಗೆ ಮದುವೆ| ಪ್ರೀತಿಗಾಗಿ ಸಾಹಸವನ್ನೇ ಮಾಡಿದ್ದ ಯುವಕನಿಗೆ ಕೊರೋನಾ| ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕನ ಪ್ರೇಮ ಕಹಾನಿ

ಕೋಲ್ಕತ್ತಾ(ಮೇ.16): ಒಡಿಶಾದ ಯುವಕನೊಬ್ಬ ಕೊರೋನಾ ವೈರಸ್‌ನ ಅಪಾಯ ಹಾಗೂ ಲಾಕ್‌ಡೌನ್‌ ಲೆಕ್ಕಿಸದೆ ಪಶ್ಚಿಮ ಬಂಗಾಳಕ್ಕೆ ಹೋಗಿ ತಾನು ಪ್ರೀತಿಸಿದ ಹುಡುಗಿಯನ್ನು ಸಿನಿಮಾ ರೀತಿ ಮದುವೆಯಾಗಿದ್ದಾನೆ.

ಆದರೆ, ಪ್ರೀತಿಗಾಗಿ ಸಾಹಸವನ್ನೇ ಮಾಡಿದ್ದ ಯುವಕ ಈಗ ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದಾನೆ. ಇದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕನ ಪ್ರೇಮ ಕಹಾನಿ.

ಮದುವೆಗೆ ಬಂದವರ ಎಡವಟ್ಟು: ಈಗ ನವದಂಪತಿ ಕ್ವಾರಂಟೈನ್‌ಗೆ!

ಲಾಕ್‌ಡೌನ್‌ ಘೋಷಣೆಗೂ ಮುನ್ನ ತನ್ನ ಊರಿಗೆ ಹೋಗಿದ್ದ ಆತನಿಗೆ ಪ್ರೀತಿಸಿದ ಯುವತಿಯ ಜತೆ ಏ.17ರಂದು ಮದುವೆ ನಿಗದಿಯಾಗಿತ್ತು. ಲಾಕ್‌ಡೌನ್‌ ಅಡ್ಡಿಯ ನಡುವೆಯೂ ಮದುವೆಯಾಗಿ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆದರೆ, ಮದುವೆ ಆದ 3 ವಾರದ ಬಳಿಕ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ.