Asianet Suvarna News Asianet Suvarna News

ಒಂದೂವರೆ ವರ್ಷದಿಂದ ಪತ್ನಿಯನ್ನು ಶೌಚಾಲಯದಲ್ಲೇ ಇಟ್ಟ ಭೂಪ!

ದುಷ್ಟ ವ್ಯಕ್ತಿಯೋರ್ವ ಒಂದು ವರ್ಷಕ್ಕೂ ಅಧಿಕ ಸಮಯ ಪತ್ನಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಘಟನೆ ಬೆಳಕಿಗೆ ಬಂದಿದೆ. 

Man locks up wife inside toilet for over a year in Haryana snr
Author
Bengaluru, First Published Oct 16, 2020, 10:45 AM IST
  • Facebook
  • Twitter
  • Whatsapp

 ಪಾಣಿಪತ್‌ (ಅ.16): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಒಂದೂವರೆ ವರ್ಷದಿಂದ ಶೌಚಾಲಯದಲ್ಲೇ ಕೂಡಿಟ್ಟಅಮಾನವೀಯ ಘಟನೆಯೊಂದು ಹರ್ಯಾಣದ ರಿಶಿಪುರ್‌ನಲ್ಲಿ ನಡೆದಿದೆ. 

ಈ ಶೌಚಬಂಧನ ಕುರಿತು ಮಾಹಿತಿ ಪಡೆದ ಮಹಿಳಾ ರಕ್ಷಣಾ ಇಲಾಖೆಯ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ ವಿಷಯ ಬೆಳಕಿಗೆ ಬಂದಿದೆ. 3 ಮಕ್ಕಳ ತಾಯಿಯಾಗಿರುವ ಪತ್ನಿ ಮಾನಸಿಕ ಅಸ್ವಸ್ಥೆಯಾದ ಕಾರಣ ಆಕೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಅದರಿಂದ ಏನೂ ಪ್ರಯೋಜವಾಗಲಿಲ್ಲ. 

ಪಬ್‌ಜಿ ಫ್ರೆಂಡ್ಸ್ ಮಾಡಿದ ಪುಂಡಾಟ; ಗ್ಯಾಂಗ್‌ರೇಪ್‌ನಿಂದ ಅಪ್ರಾಪ್ತೆ ಗರ್ಭಿಣಿ ..

ಹೀಗಾಗಿ ಮನೆಯಲ್ಲಿ ಅಥವಾ ಮನೆ ಮುಂದೆ ಸುಮ್ಮನೇ ಕೂರದ ಹುಚ್ಚುಚ್ಚಾಗಿ ಆಡುತ್ತಿದ್ದ ಕಾರಣಕ್ಕೆ ಆಕೆಯನ್ನು ಬಾತ್‌ರೂಮ್‌ಗೆ ಸೀಮಿತಗೊಳಿಸಲಾಗಿತ್ತು ಎಂದು ಪತಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾನೆ. ಆದರೆ, ಮಹಿಳೆ ಮಾನಸಿಕ ಅಸ್ವಸ್ಥೆ ರೀತಿ ಕಂಡುಬರುತ್ತಿಲ್ಲ. ಆಕೆಗೆ ಸರಿಯಾದ ಊಟ ಮತ್ತು ನೀರನ್ನೂ ನೀಡದೇ ತುಂಬಾ ತುಚ್ಛವಾಗಿ ನಡೆಸಿಕೊಂಡಿರುವುದು ಕಂಡುಬಂದಿದೆ. 

ಶೌಚ ಬಂಧನದಿಂದ ರಕ್ಷಿಸಿ ಸ್ನಾನ ಮಾಡಿಸಿದ ಬಳಿಕ ಸಂತ್ರಸ್ತೆ 8 ಚಪಾತಿ ಸೇವಿಸಿದರು. ಸದ್ಯಕ್ಕೆ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇದೀಗ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ರಜನಿ ಗುಪ್ತಾ ಹೇಳಿದ್ದಾರೆ.

Follow Us:
Download App:
  • android
  • ios