ಸಿಎಎ ವಿರೋಧಿ ಹೋರಾಟಗಾರರ ಮೇಲೆ ಗುಂಡಿನ ದಾಳಿ| ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ಘಟನೆ| ಸಿಎಎ ವಿರೋಧಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ ಆಗುಂತಕ| ಏ ಲೋ ಆಜಾದಿ..'(ಸ್ವಾತಂತ್ರ್ಯ ತೋಗೊಳ್ಳಿ) ಅರಚಿ ಗುಂಡು ಹಾರಿಸಿದ ಆಗುಂತಕ| ಪ್ರದರ್ಶನಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು|

ನವದೆಹಲಿ(ಜ.30): ಸಿಎಎ ವಿರೋಧಿ ಪ್ರದರ್ಶನಕಾರರತ್ತ ಆಗುಂತಕನೋರ್ವ ಗುಂಡು ಹಾರಿಸಿದ ಘಟನೆ ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ನಡೆದಿದೆ.

"

ಸಿಎಎ ವಿರೋಧಿ ಪ್ರತಿಭಟನಾಕಾರರು ಮೆರವಣಿಗೆ ಹೊರಟಿದ್ದಾಗ ಏಕಾಏಕಿ ನುಗ್ಗಿದ ಆಗುಂತಕ, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪ್ರದರ್ಶನಕಾರರತ್ತ ಗುಂಡು ಹಾರಿಸಿದ್ದಾನೆ.

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ಏಕಾಏಕಿ ಪಿಸ್ತೂಲನ್ನು ಹೊರತೆಗೆದ ಆಗುಮತಕ, 'ಏ ಲೋ ಆಜಾದಿ..'(ಸ್ವಾತಂತ್ರ್ಯ ತೋಗೊಳ್ಳಿ)ಎಂದು ಅರಚುತ್ತಾ ಪ್ರದರ್ಶನಕಾರರತ್ತ ಗುಂಡು ಹಾರಿಸಿದ್ದಾನೆ.

Scroll to load tweet…

ಈ ವೇಳೆ ಸಿಎಎ ವಿರೋಧಿ ಪ್ರತಿಭಟನಾಕಾರನೋರ್ವನಿಗೆ ಗುಂಡು ತಗುಲಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಗುಂಡು ಹಾರಿಸಿದ ಆಗುಂತಕನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಪಿಸ್ತೂಲನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ