Asianet Suvarna News Asianet Suvarna News

ಹಸಿವು ತಾಳಲಾಗದೆ ಬೆಕ್ಕನ್ನು ಸಾಯಿಸಿ ಹಸಿ ಮಾಂಸ ತಿಂದ ಯುವಕ!

ಹಸಿವಿನಿಂದ ಬಳಲುತ್ತಿದ್ದ ಅಸ್ಸಾಂನ ವ್ಯಕ್ತಿಯೊಬ್ಬ ಕೇರಳ ಬಸ್ ನಿಲ್ದಾಣದಲ್ಲಿ ಹಸಿ ಬೆಕ್ಕಿನ ಮಾಂಸವನ್ನು ತಿನ್ನುತ್ತಿದ್ದುದನ್ನು ಕಂಡು ಆತನನ್ನು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸಲಾದ ಘಟನೆ ನಡೆದಿದೆ. 

Man eats raw cat meat shifted to Kozhikode govt mental hospital skr
Author
First Published Feb 5, 2024, 2:48 PM IST

ಮಲಪ್ಪುರಂ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಕೇರಳ ಜಿಲ್ಲೆಯ ಕುಟ್ಟಿಪ್ಪುರಂನಲ್ಲಿ ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಬಹಳ ದಿನದ ಕಾಲ ಆಹಾರ ಸಿಗದೆ, ಕಡೆಗೆ ಹಸಿವು ನೀಗಿಸಲು ಬೆಕ್ಕನ್ನು ಸಾಯಿಸಿ ಅದರ ಹಸಿ ಮಾಂಸವನ್ನು ಸೇವಿಸುತ್ತಿದ್ದುದು ಕಂಡುಬಂದಿದೆ. ಕೂಡಲೇ ಆ ವ್ಯಕ್ತಿಯನ್ನು ಕೋಝಿಕ್ಕೋಡ್ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ನಂತರ, ವ್ಯಕ್ತಿಯನ್ನು ನೆರೆಯ ತ್ರಿಶೂರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ವ್ಯಕ್ತಿಗೆ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿಲ್ಲ ಎಂದು ತೋರುತ್ತಿದೆ ಮತ್ತು ಆತನ ಸಂಬಂಧಿಕರು ಇಲ್ಲಿಗೆ ಬಂದ ನಂತರ ಅವರಿಗೆ ಆತನನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

27 ವರ್ಷದ ವ್ಯಕ್ತಿ ಅಸ್ಸಾಂನ ಧುಬ್ರಿ ಜಿಲ್ಲೆಯವನಾಗಿದ್ದು, ಕುಟ್ಟಿಪ್ಪುರಂನ ಜನನಿಬಿಡ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಆತ ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ಕುಳಿತು ಸತ್ತ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿರುವುದನ್ನು ಸ್ಥಳೀಯ ಜನರು ಕಂಡಿದ್ದಾರೆ. ಅದೇನು ಎಂದು ಕೇಳಿದ ಅವರು ಆತನಿಗೆ ಬೆಕ್ಕಿನ ಮಾಂಸ ತಿನ್ನುವುದನ್ನು ನಿಲ್ಲಿಸಲು ಹೇಳಿದ್ದಾರೆ, ಆದರೆ ಯುವಕ ಕಿವಿಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಿನ್ನುತ್ತಿದ್ದ. ಕಡೆಗೆ ಆತನಿಗೆ ಆಹಾರ ತರಿಸಿಕೊಡಲಾಯಿತು. ಅದನ್ನೂ ತೆಗೆದುಕೊಂಡ. ಬಳಿಕ ಸ್ಥಳೀಯರು ಯುವಕನ ಬಗ್ಗೆ ಪೋಲೀಸರಿಗೆ ತಿಳಿಸಿದ್ದಾರೆ. 

'ಮದುವೆ ಆಗ್ಲಾ?' ಹೀಗೆ ನಟಿ ಶ್ರದ್ಧಾ ಕಪೂರ್ ಕೇಳಿದ್ದು ಯಾರನ್ನು?

'ಮಾಹಿತಿ ನಂತರ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಅವನನ್ನು ವಿಚಾರಿಸಿದಾಗ ಅವನು ಕಳೆದ ಐದು ದಿನಗಳಿಂದ ಯಾವುದೇ ಆಹಾರವನ್ನು ಸೇವಿಸಿಲ್ಲ ಎಂದು ಹೇಳಿದ' ಎಂದು ಪೋಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾಗಿ ವರದಿಯಾಗಿದೆ. 

ಯುವಕನು ಈಶಾನ್ಯ ರಾಜ್ಯದ ಕಾಲೇಜು ವಿದ್ಯಾರ್ಥಿಯಾಗಿದ್ದು, ಡಿಸೆಂಬರ್‌ನಲ್ಲಿ ತನ್ನ ಕುಟುಂಬಕ್ಕೆ ತಿಳಿಸದೆ ರೈಲಿನಲ್ಲಿ ಕೇರಳ ತಲುಪಿದ್ದಾನೆ. ಅವನು ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ಅವನ ಸಹೋದರನ ಮೊಬೈಲ್ ಸಂಖ್ಯೆಯನ್ನು ಪೋಲೀಸರಿಗೆ ನೀಡಿದ್ದಾನೆ. ಬಳಿಕ ಆತನ ಸಹೋದರನನ್ನು ಸಂಪರ್ಕಿಸಿ ಮಾಹಿತಿ ಸರಿಯಾಗಿದೆ ಎಂದು ಪೋಲೀಸರು ಖಚಿತಪಡಿಸಿಕೊಂಡಿದ್ದಾರೆ. 

Follow Us:
Download App:
  • android
  • ios