ಹಬ್ಬದ ತಿನ್ನುವ ಸ್ಪರ್ಧೆ ಗೆಲ್ಲಲು ಹೋದ ವ್ಯಕ್ತಿ 3 ಇಡ್ಲಿ ಗಬಕ್ಕನೆ ನುಂಗಿ ಸಾವು!
ಹೆಚ್ಚು ಇಡ್ಲಿ ತಿನ್ನುವ ಸ್ಪರ್ಧೆ. ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿ ಪ್ರಶಸ್ತಿ ಗೆಲ್ಲಲು ಒಂದೇ ಸಮಯಕ್ಕೆ 3 ಇಡ್ಲಿ ಗಬಕ್ಕನೆ ಬಾಯಿಗೆ ಹಾಕಿದ್ದಾನೆ. ಇಷ್ಟೇ ನೋಡಿ, ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಮೃತಪಟ್ಟ ದುರಂತ ಘಟನೆ ನಡೆದಿದೆ.
ತಿರುವನಂತಪುರಂ(ಸೆ.15) ಕೇರಳಿಗರು ಇಂದು ಓಣಂ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಕೇರಳಿಗರು ಹಬ್ಬವನ್ನು ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಹಲವು ಕಾರ್ಯಕ್ರಮಗಳು, ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪೈಕಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ದುರಂತವೇ ನಡೆದು ಹೋಗಿದೆ. ಗರಿಷ್ಠ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡ ವ್ಯಕ್ತಿ ಬಹುಮಾನ ಗೆಲ್ಲಲು ಒಂದೆ ಬಾರಿಗೆ 3 ಇಡ್ಲಿ ತೆಗೆದು ಬಾಯಿಗೆ ಹಾಕಿ ನುಂಗಿದ್ದಾನೆ. ಆದರೆ ಇಡ್ಲಿ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿ ಮೃತಪಟ್ಟ ಘಟನೆ ಕೇರಳದ ವಲಯಾರ್‌ನಲ್ಲಿ ನಡೆದಿದೆ.
ವಲಯಾರ್ ಸ್ಥಳೀಯ ಕ್ಲಬ್ ಓಣಂ ಹಬ್ಬದ ಪ್ರಯುಕ್ತ ಹಲವು ಸಾಂಸ್ಕೃತಿ ಕಾರ್ಯಕ್ರಮ, ಕ್ರೀಡೆ, ರಂಗೋಲಿ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು. ಹಲವರು ಕುಟುಂಬ ಸಮೇತ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗರಿಷ್ಠ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಾಲ್ವರು ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರೆ, ಹಲವು ಪ್ರೇಕ್ಷಕರಾಗಿ ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸಿದ್ದಾರೆ. ಈ ಸ್ಪರ್ಧೆಗಳ ಬೈಕಿ 49 ವರ್ಷದ ಸುರೇಶ್ ಇದೀಗ ಮೃತ ದುರ್ದೈವಿ.
ಓಣಂ ಸ್ಪೆಷಲ್ ಕಾರ್ ಡ್ರೈವ್ ಮೇಳದಲ್ಲಿ 2.5 ಕೆ.ಜಿ. ಓರಿಸ್ಸಾ ಗೋಲ್ಡ್ ಸಾಗಾಟ!
ಸ್ಪರ್ಧೆಯ ನಿಯಮಗಳು ಹೇಳಿದ ಬಳಿಕ ಸ್ಪರ್ಧೆ ಆರಂಭಿಸಲಾಗಿದೆ. ನಾಲ್ವರಿಗೂ ತಟ್ಟೆಯಲ್ಲಿ ಇಟ್ಲಿ ನೀಡಲಾಗಿದೆ. ಸ್ಪರ್ಧೆಯ ನಿಯಮದ ಪ್ರಕಾರ, ಇಡ್ಲಿಯನ್ನು ಯಾವುದೇ ಚಟ್ನಿ, ಸಾಂಬರ್, ನೀರು ಇಲ್ಲದೆ ತಿನ್ನಬೇಕು. ಸ್ಪರ್ಧೆ ಆರಂಭದ ವಿಸಿಲ್ ಹೊಡೆಯುತ್ತಿದ್ದಂತೆ ಸುರೇಶ್ ಒಂದೇ ಬಾರಿ 3 ಇಡ್ಲಿಯನ್ನು ಬಾಯಿಗೆ ಹಾಕಿ ನುಂಗಿದ್ದಾರೆ. ಆದರೆ ಇತರ ಯಾವುದೇ ಪದಾರ್ಥಗಳಿಲ್ಲದೆ ಇಡ್ಲಿ ತಿನ್ನಬೇಕಾಗಿರುವ ಕಾರಣ ಮೂರು ಇಡ್ಲಿ ಒಂದೇ ಬಾರಿ ಗಂಟಲಿನಲ್ಲಿ ಸಿಲುಕಿಕೊಂಡಿದೆ.
ಇನ್ನುಳಿದವರು ಒಂದೊಂದು ಇಡ್ಲಿ ತೆಗೆದುಕೊಂಡು ತಿನ್ನಲು ಆರಂಭಿಸಿದ್ದಾರೆ. ಆದರೆ ಸುರೇಶ್ ಬಾಯಿಗೆ ಹಾಕಿದ 3 ಇಡ್ಲಿ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಕೆಲವೇ ಕ್ಷಣದಲ್ಲಿ ಸುರೇಶ್ ಅಸ್ವಸ್ಥಗೊಂಡಿದ್ದಾನೆ. ಸ್ಪರ್ಧೆ ಆಯೋಜಕರು, ಸ್ಥಳೀಯರು ಆಗಮಿಸಿ ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಯಾವುದೂ ಪ್ರಯೋಜನವಾಗಿಲ್ಲ. ಇದೇ ವೇಲೆ ನೆರವಿಗೆ ಆಗಮಿಸಿದೆ ಸ್ಥಳೀಯ ಹಿರಿಯರೊಬ್ಬರು ಸಾಹಸ ಮಾಡಿ ಇಡ್ಲಿ ಹೊರತೆಗೆದು , ಅಸ್ವಸ್ಥಗೊಂಡ ಸುರೇಶನ ಸ್ಥಳೀಯ ಕ್ಲೀನಿಕ್‌ಗೆ ಕರೆದೊಯ್ದಿದ್ದಾರೆ.
ಆರೋಗ್ಯ ಪರಿಸ್ಥಿತಿ ನೋಡಿದ ಕ್ಲಿನಿಕ್ ವೈದ್ಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಆದರೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಅಷ್ಟರಲ್ಲೇ ಸುರೇಶ ಮೃತಪಟ್ಟಿದ್ದ. ತಪಾಸಣೆ ನಡೆಸಿದ ವೈದ್ಯರು ಸುರೇಶ್ ಮೃತಪಟ್ಟಿರುವುದಾಗಿ ದೃಢಪಟಿಸಿದ್ದಾರೆ.
ಸುರೇಶ್ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯವಾಗಿ ಪಾಲ್ಗೊಳ್ಳುವ ವ್ಯಕ್ತಿ. ಈಗಾಗಲೇ ಜ್ಯೂಸ್ ಕುಡಿಯುವ ಸ್ಪರ್ಧೆ ಸೇರಿದಂತೆ ಹಲವು ಆಹಾರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಸುರೇಶ್ ಇಡ್ಲಿ ತಿನ್ನಲು ಹೋಗಿ ದುರಂತ ಅಂತ್ಯಕಂಡಿದ್ದಾರೆ.
ಓಣಂ ಹಬ್ಬ: ಹುಬ್ಬಳ್ಳಿ-ಕೊಚುವೇಲಿ ನಡುವೆ ಓಡಲಿದೆ ವಿಶೇಷ ರೈಲು