ಇಲ್ಲಿ ಎಲ್ಲವೂ ನಕಲಿ/ ನಕಲಿ ಸೇನಾ ಗುರುತಿನ ಚೀಟಿ/ ನಕಲಿ ಎಂ ಟೆಕ್ ಪ್ರಮಾಣ ಪತ್ರ ನಕಲಿ ಮದುವೆ/ ಮದುವೆಯಾಗುತ್ತೇನೆ ಎಂದು ನಂಬಿಸಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಅಸಾಮಿ ಬಲೆಗೆ

ಹೈದರಾಬಾದ್ (ನ. 23) ಭಾರತೀಯ ಸೇನೆಯಲ್ಲಿ ತಾನು ಮೇಜರ್ ಎಂದು ಪೋಸು ಕಟ್ಟು ಜನರನ್ನು ನಂಬಿಸಿ ಬರೋಬ್ಬರಿ 17 ಮಹಿಳೆಯರಿಗೆ ವಂಚಿಸಿದ ಚಾಆಲಾಕಿಯ ಕತೆ ಹೇಳುತ್ತೇವೆ ಕೇಳಿ. 

ನಿಮ್ಮನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ 17 ಮಹಿಳೆಯರಿಗೆ 6.6 ಕೋಟಿ ರೂ. ವಂಚಿಸಿದ್ದಾನೆ ಈ ಅಸಾಮಿ. ವರದಕ್ಷಿಣೆ ಹಣದಲ್ಲಿಯೇ ಐಷರಾಮಿ ಜೀವನ ನಡೆಸುತ್ತಿದ್ದವನನ್ನು ಆತನ ಮನೆಯಿಂದಲೇ ಅರೆಸ್ಟ್ ಮಾಡಲಾಗಿದೆ. ವರದಕ್ಷಿಣೆ ದುಡ್ಡಿನಲ್ಲೇ ಬಂಗಲೆ ಕಟ್ಟಿಸಿಕೊಂಡು ಬೆಂಝ್ ಸೇರಿದಂತೆ ಮೂರು ಐಷಾರಾಮಿ ಕಾರು ಇಟ್ಟುಕೊಂಡಿದ್ದ.

ಆಂಧ್ರದ ಪ್ರಕಾಸಮ್ ಜಿಲ್ಲೆಯ ಎಂ ಶ್ರೀನಿ ನಾಯ್ಕ ವಂಚಕ. ಗುಂಟೂರಿನ ಸುಪರಿಟೆಂಡೆಂಟ್ ಒಬ್ಬರನ್ನು 2002 ರಲ್ಲಿ ಮದುವೆಯಾಗಿ ನಂತರ ಅಲ್ಲಿಂದ ಹೈದರಾವಾದ್ ಗೆ ಬಂದಿದ್ದ ಎಂದು ಕಮಿಷನರ್ ಅಂಜನಿ ಕುಮಾರ್ ಆರೋಪಿಯ ಜಾತಕ ತಿಳಿಸಿದ್ದಾರೆ.

ಜನ್ಮ ದಾಖಲೆಯನ್ನು ಸುಳ್ಳಾಗಿ ತಿದ್ದಿದ ಆಸಾಮಿ ಮೊದಲಿಗೆ ತನ್ನ ಕುಟುಂಬಕ್ಕೆ ಸೇನೆಯಲ್ಲಿ ನಾನು ಮೇಜರ್ ಆಗಿದ್ದೇನೆ ಎಂದು ತಿಳಿಸಿದ್ದಾನೆ. ಎಂಎಸ್ ಚೌಹಾಣ್ ಎಂಬ ಹೆಸರಿನಲ್ಲಿ ನಕಲಿ ಸೇನಾ ಐಡಿ ಸಿದ್ಧಮಾಡಿಕೊಂಡಿದ್ದಾನೆ. ಸೇನೆಯ ಸಮವಸ್ತ್ರ, ಕ್ಯಾಪ್, ಶೂ, ಪೀಸ್ತೂಲ್ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡಿಕೊಂಡಿದ್ದಾನೆ. ಮಿಲಿಟರಿ ಶಿಸ್ತಿನಲ್ಲಿ ಪೋಟೋ ತೆಗೆಸಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದಾನೆ.

ಇಷ್ಟೆ ಅಲ್ಲದು ಎಂದು ಮೇಘಾಲಯ ಯುನಿವರ್ಸಿಟಿಯಿಂದ ಎಂ ಟೆಕ್ ಆಗಿದೆ ಎಂಬ ನಕಲಿ ಪ್ರಮಾಣ ಪತ್ರವನ್ನು ಅಸಲಿಗೆ ಕಡಿಮೆ ಇಲ್ಲದಂತೆ ಮಾಡಿಸಿಕೊಂಡಿದ್ದಾನೆ. ಮದುವೆ ದಲ್ಲಾಳಿಗಳ ಬಳಿ ಹುಡುಗಿಯರ ಮಾಹಿತಿ ಪಡೆದುಕೊಂಡು ಅವರಿಗೆ ಬಲೆ ಬೀಸಲು ಆರಂಭಿಸಿದ್ದಾನೆ.

ಹದಿನೇಳು ಕುಟುಂಬಗಳನ್ನು ಭೇಟಿ ಮಾಡಿ ನಾನು ಸೇನೆಯಲ್ಲಿ ಮೇಜರ್, ಮದುವೆಯಾಗುತ್ತೇನೆ ಎಂದು ಹೇಳಿಕೊಂಡು ಅದು ಹೇಗೋ ಸಾಕಷ್ಟು ಹಣ ಪಡೆದುಕೊಂಡಿದ್ದಾನೆ. ಇವನಿಂದ ವಂಚನೆಗೆ ಒಳಗಾದ ಒಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಂಧನ ಮಾಡಿದಾಗ ಜಾತಕ ಬಟಾಬಯಲಾಗಿದೆ.