ವೈರಲ್‌ ಆಯ್ತು ಬಾಲಕನ ನಗು ತಿನಿಸು ನೀಡಿದ ವ್ಯಕ್ತಿಗೆ ಕೃತಜ್ಞತೆಯ ನಗು

ಪುಟ್ಟ ಬಾಲಕನಿಗೆ ವ್ಯಕ್ತಿಯೊಬ್ಬರು ಮೊಮೊಸ್ ನೀಡಿದ್ದು, ಇದನ್ನು ತಿಂದು ಬಾಲಕ ಕೃತಜ್ಞತಾ ಭಾವದಿಂದ ನಗು ಬೀರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಚಿಕ್ಕ ಹುಡುಗನಿಗೆ ಒಂದು ಪ್ಲೇಟ್‌ ಮೊಮೊಸ್ ಖರೀದಿಸಿ ನೀಡಿದ್ದಾರೆ. ಹುಡುಗನ ಈ ಪ್ರತಿಕ್ರಿಯೆ ಈಗ ನೆಟ್ಟಿಗರ ಹೃದಯ ಗೆದ್ದಿದೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಚಟೋರ್ ಬ್ರದರ್ಸ್ (Chatore Broothers) ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಚಿಕ್ಕ ವೀಡಿಯೊದಲ್ಲಿ, ಚಿಕ್ಕ ಹುಡುಗನೊಬ್ಬ ಮೊಮೊಸ್ ಮಾರಾಟ ಮಾಡುವ ಅಂಗಡಿಯತ್ತ ಕೈ ತೋರಿಸಿ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಾರೆ. ಬಳಿಕ ಅಲ್ಲಿದ್ದ ಮೆನುವಿನಲ್ಲಿ ಪನೀರ್ ಮೊಮೊಸ್ ಬೇಕು ಎನ್ನುವುದಾಗಿ ಆ ಕಡೆಗೆ ಕೈ ತೋರಿಸುತ್ತಾನೆ. ಬಳಿಕ ವ್ಯಕ್ತಿಯೊಬ್ಬರು ಬಾಲಕನಿಗೆ ಒಂದು ಪ್ಲೇಟ್ ಮೊಮೊಸ್‌ ತೆಗೆದು ಕೊಟ್ಟಿದ್ದು, ಈ ವೇಳೆ ಬಾಲಕನ ಖುಷಿ ಹೇಳ ತೀರದಾಗಿತ್ತು. ಆನ್‌ಲೈನ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋವನ್ನು 1.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 

ನೀ ಅನಾಥನಲ್ಲ ನಿನಗೆ ನಾನು ನನಗೆ ನೀನು.... ನಿರ್ಗತಿಕನಿಗೆ ಜೊತೆಯಾದ ಶ್ವಾನ

ಒಳ್ಳೆಯ ಕಾರ್ಯವನ್ನು ಮಾಡಿದ ನಂತರ ಆ ಬೆಚ್ಚಗಿನ, ಅಸ್ಪಷ್ಟ ಭಾವನೆಗೆ ಬೇರೆ ಹೋಲಿಕೆ ಇರದು, ಅಲ್ಲವೇ ಇದೇ ಕಾರಣಕ್ಕೆ ವ್ಯಕ್ತಿಯೊಬ್ಬ ಚಿಕ್ಕ ಹುಡುಗನಿಗೆ ಮೊಮೊಸ್ ಖರೀದಿಸಿದ ವಿಡಿಯೋ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಜೊತೆಗೆ ಹುಡುಗನ ಪ್ರತಿಕ್ರಿಯೆಯು ಆನ್‌ಲೈನ್‌ನಲ್ಲಿ ಎಲ್ಲರ ಹೃದಯಗಳನ್ನು ಗೆದ್ದಿದೆ ಮತ್ತು ಖಂಡಿತವಾಗಿಯೂ ನಿಮ್ಮ ಮುಖದಲ್ಲೂ ಇದು ನಗುವನ್ನು ಮೂಡಿಸುತ್ತದೆ.

View post on Instagram

ಇತ್ತೀಚೆಗೆ ಪುಟ್ಟು ಮಗುವೊಂದು ಕೊಕಾಕೋಲಾವನ್ನು ಮೊದಲ ಬಾರಿಗೆ ತಿಂದು ನೀಡಿದ ಪ್ರತಿಕ್ರಿಯೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಲುಗಲ್ಲದ ಪುಟ್ಟ ಮಗುವಿಗೆ ಮೊದಲ ಬಾರಿಗೆ ತಿನ್ನಿಸುವ ಪ್ರತಿಯೊಂದು ವಸ್ತುವೂ ಮಗುವಿಗೆ ಹೊಸದೇ ಆಗಿರುವುದು. ಇದಕ್ಕೆ ಮಗು ಪ್ರತಿಕ್ರಿಯಿಸುವ ರೀತಿ ತುಂಬಾ ವಿಭಿನ್ನ ಹಾಗೂ ಮುದ್ದಾಗಿರುವುದು. ಇದೇ ರೀತಿ ಇಲ್ಲಿ ಮಗುವೊಂದು ಮೊದಲ ಬಾರಿಗೆ ಕೊಕಾಕೋಲಾದ ರುಚಿ ನೋಡಿದ್ದು, ಇದಕ್ಕೆ ಮಗು ಪ್ರತಿಕ್ರಿಯಿಸಿದ ರೀತಿ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿರುವ ಮಗು ವಿದೇಶಿ ಆಗಿದ್ದು, ವಿದೇಶದಲ್ಲಿ ಚಿತ್ರೀಕರಣಗೊಂಡ ವಿಡಿಯೋ ಇದಾಗಿದೆ. ತನ್ನ ಪೋಷಕರೊಂದಿಗೆ ಮ್ಯಾಕ್‌ ಡೊನಾಲ್ಡ್‌ ಶಾಪ್‌ಗೆ ತೆರಳುವ ಮಗುವಿಗೆ ಮೊದಲ ಬಾರಿಗೆ ಕೊಕಾಕೋಲಾ ನೀಡಲಾಗುತ್ತದೆ. ಅದುವರೆಗೆ ಕೊಕಾಕೋಲಾದ ರುಚಿ ನೋಡಿರದ ಮಗು ಕೊಕಾಕೋಲಾವನ್ನು ಒಂದು ಸಿಪ್‌ ಕುಡಿದು ಮುಖ ಕಿವುಚಿ ಕೊಳ್ಳುತ್ತದೆ. ಮಗುವಿನ ಆ ಪ್ರತಿಕ್ರಿಯೆ ತುಂಬಾ ಮುದ್ದಾಗಿದೆ. 

ಮೊದಲ ಬಾರಿ ಕೊಕಾಕೋಲಾದ ರುಚಿ ನೋಡಿದ ಕಂದನ ರಿಯಾಕ್ಷನ್‌ ನೋಡಿ

ಸ್ಟ್ರಾ ಸಹಾಯದಿಂದ ಲೋಟದಿಂದ ಒಂದು ಗುಟುಕು ಕೊಕಾಕೋಲಾ ಕುಡಿದ ಆಕೆ ಒಮ್ಮೆಗೆ ಗಾಬರಿಯಾಗುತ್ತಾಳೆ. ನಂತರ ಪಾನೀಯದ ಜುಮ್ಮೆನಿಸುವಿಕೆಯಿಂದ ಅವಳು ಆಶ್ಚರ್ಯಚಕಿತಳಾಗುತ್ತಾಳೆ. ಮತ್ತು ಆ ರುಚಿಯನ್ನು ವಿಶ್ಲೇಷಿಸಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾಳೆ. ನಂತರ ಮುಗುಳ್ನಕ್ಕು ಮತ್ತೊಂದು ಸಿಪ್‌ ಕುಡಿಯುತ್ತಾಳೆ ಈ ಮೂಲಕ ಕೊನೆಗೂ ಆ ಪಾನೀಯವನ್ನು ಆಕೆ ನಿಜವಾಗಿಯೂ ಇಷ್ಟಪಟ್ಟಿದ್ದಾಳೆ ಎಂಬುದನ್ನು ಸಾಬೀತುಪಡಿಸುತ್ತಾಳೆ. ಇದಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ವಿಡಿಯೋ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದರೆ ಮತ್ತೂ ಕೆಲವರು ಇದು ಮಕ್ಕಳಿಗೆ ಕೊಡುವಂತಹ ಪಾನೀಯ ಅಲ್ಲ. ಸಣ್ಣ ಮಕ್ಕಳು ಈ ಕೊಕಾಕೋಲಾ ಪಾನೀಯವನ್ನು ಕುಡಿಯಬಾರದು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.