ರೇಶನ್ ಕಾರ್ಡ್‌ನಲ್ಲಿ ಶ್ರೀಂಕಾತಿ ದತ್ತಾ ಬದಲು ಶ್ರೀಕಾಂತಿ ಕುತ್ತಾ ಎಂದು ತಪ್ಪಾಗಿ ಪ್ರಿಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ನಡು ರಸ್ತೆಯಲ್ಲಿ ಅಧಿಕಾರಿ ಕಾರು ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾನೆ. ನಾಯಿಯಂತೆ ಬೊಗಳಿ ಆಕ್ರೋಶ ಹೊರಹಾಕಿದ ವಿಡಿಯೋ ವೈರಲ್ ಆಗಿದೆ.
ಕೋಲ್ಕತಾ (ಜು.04) ಸರ್ಕಾರಿ ದಾಖಲೆಗಳಲ್ಲಿ ಹೆಸರು, ಸರ್ನೇಮ್, ವಿಳಾಸ, ಪೋಷಕರು ಹೆಸರು ತಪ್ಪಾಗಿ ಪ್ರಿಂಟ್ ಆಗುವುದು ಹೊಸ ವಿಚಾರವಲ್ಲ. ಸರ್ಕಾರಿ ದಾಖಲೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದ್ದರೆ ಅಚ್ಚರಿ ಅನ್ನೋ ಮಟ್ಟದಲ್ಲಿದೆ. ಹೀಗೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಶ್ರೀಕಾಂತಿ ದತ್ತಾ ಹೆಸರು ರೇಶನ್ ಕಾರ್ಡ್‌ನಲ್ಲಿ ಶ್ರೀಕಾಂತಿ ಕುತ್ತಾ ಎಂದು ಪ್ರಿಂಟ್ ಮಾಡಿದ್ದಾರೆ. ತಪ್ಪು ಸರಿಪಡಿಸುವಂತೆ ಮನವಿ ಮಾಡಿ, ಅರ್ಜಿ ಸಲ್ಲಿಸಿದರೂ ಹೆಸರು ಮಾತ್ರ ಹಾಗೇ ಉಳಿದಿತ್ತು. ರೋಸಿ ಹೋದ ಶ್ರೀಕಾಂತಿ ದತ್ತಾ, ಅಧಿಕಾರಿಯನ್ನು ನಡು ರಸ್ತೆಯಲ್ಲೇ ಅಡ್ಡಗಟ್ಟಿ, ನಾಯಿ ರೀತಿ ಬೊಗಳಿದ್ದಾನೆ. ತನ್ನ ಹೆಸರು ತೋರಿಸಿ ಮತ್ತೆ ಮತ್ತೆ ನಾಯಿ ರೀತಿ ಬೊಗಳಿ ವಿನೂತವನಾಗಿ ಪ್ರತಿಭಟನೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಶ್ರೀಕಾಂತಿ ದತ್ತಾ ವಿಡಿಯೋ ಸಂಚಲನ
ಶ್ರೀಕಾಂತಿ ದತ್ತಾ ಅಧಿಕಾರಿಯನ್ನು ಅಡ್ಡಗಟ್ಟಿ ಈಗಲೇ ಹೆಸರು ಸರಿಪಡಿಸುವಂತೆ ಗುಡುಗಿದ ವಿಡಿಯೋ 2022ರಲ್ಲಿ ನಡೆದ ಘಟನೆ. ಇದೀಗ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಶ್ರೀಕಾಂತಿ ದತ್ತಾ ರೇಶನ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿ ಪ್ರಿಂಟ್ ಮಾಡಿದ್ದಾರೆ. ತನ್ನ ಎಲ್ಲಾ ದಾಖಲೆಗಳಲ್ಲಿ ಶ್ರೀಕಾಂತಿ ದತ್ತಾ ಎಂದು ದಾಖಲಾಗಿದೆ. ಆದರೆ ರೇಶನ್ ಕಾರ್ಡ್ ಸಿಬ್ಬಂದಿಗಳು ಕಾರ್ಡ್ ದಾಖಲೆಯಲ್ಲಿ ದತ್ತಾ ಬದಲು ಕುತ್ತಾ ಎಂದು ದಾಖಲಿಸಿದ್ದಾರೆ. ಬಳಿಕ ರೇಶನ್ ಕಾರ್ಡ್ ಪ್ರಿಂಟ್ ಮಾಡುವಾಗಲೂ ಇದೇ ರೀತಿ ಶ್ರೀಕಾಂತಿ ಕುತ್ತಾ ಎಂದು ದಾಖಲಿಸಿ ನೀಡಿದ್ದಾರೆ.
ಮೂರು ಬಾರಿ ಅರ್ಜಿ ನೀಡಿದ್ದ ದತ್ತಾ
ರೇಶನ್ ಕಾರ್ಡ್‌ನಲ್ಲಿ ದತ್ತಾ ಬದಲು ಕುತ್ತಾ ಎಂದು ತಪ್ಪಾಗಿ ದಾಖಲಿಸಿದ ಕಾರಣದಿಂದ ತೀವ್ರ ಮನನೊಂದ ಶ್ರೀಕಾಂತಿ ದತ್ತಾ, ರೇಶನ್ ಕಾರ್ಡ್ ತಿದ್ದುಪಡಿ ಕೇಂದ್ರಕ್ಕೆ ತೆರಳಿ ಮನವಿ ಮಾಡಿದ್ದಾರೆ. ಒಂದಷ್ಟು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಇದರಂತೆ ಎಲ್ಲಾ ದಾಖಲೆ ಪತ್ರಗಳನ್ನು ನೀಡಿದ ಶ್ರೀಕಾಂತಿ ದತ್ತಾ ಹಲವು ದಿನ ಕಾದರೂ ಹೆಸರಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗೆ ಮೂರು ಬಾರಿ ಶ್ರೀಕಾಂತಿ ದತ್ತಾ ಹೆಸರು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.ಆದರೆ ಸಿಬ್ಬಂದಿಗಳು ಹೆಸರು ಸರಿ ಮಾಡಿಲ್ಲ.
ದತ್ತಾ ಬದಲು ಕುತ್ತಾ ಅನ್ನೋ ಪದ ಶ್ರೀಕಾಂತಿ ದತ್ತಾ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇಷ್ಟೇ ಅಲ್ಲ ಮಾನಸಿಕವಾಗಿಯೂ ಈ ಪದ ತೀವ್ರವಾಗಿ ನೋವುಂಟು ಮಾಡಿದೆ. ಹಲವು ದಿನಗಳಿಂದ ಕಚೇರಿಗೆ ತೆರಳಿ ಹೆಸರು ಸರಿಮಾಡುಂತೆ ಮನವಿ ಮಾಡಿ, ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಶ್ರೀಕಾಂತಿ ದತ್ತಾ ನಡು ರಸ್ತೆಯಲ್ಲಿ ಅಧಿಕಾರಿ ವಾಹನ ಅಡ್ಡ ಗಟ್ಟಿದ್ದಾರೆ. ರೇಶನ್ ಕಾರ್ಡ್ ಹಾಗೂ ಇತರ ದಾಖಲೆ ಹಿಡಿದು ತನ್ನ ಹೆಸರು ತಪ್ಪಾಗಿ ಪ್ರಿಂಟ್ ಮಾಡಿದ್ದಾರೆ. ಸರಿಪಡಿಸಲು ಮನವಿ ಮಾಡಿದರೂ ಮಾಡಿಲ್ಲ. ಈ ತಕ್ಷಣವೇ ಸರಿಮಾಡುವಂತೆ ನಾಯಿ ರೀತಿ ಬೊಗಳಿದ್ದಾನೆ.
ನಾಯಿಯಂತೆ ಬೊಗಳಿ ಪ್ರತಿಭಟನೆ
ಅಧಿಕಾರಿ ಅಡ್ಡಗಟ್ಟಿದ ಶ್ರೀಕಾಂತಿ ದತ್ತಾ ನಾಯಿಯಂತೆ ಬೊಗಳಿದ್ದಾನೆ. ಹೆಸರು ತೋರಿಸಿ ಮತ್ತೆ ಮತ್ತೆ ನಾಯಿಯ ಬೊಗಳಿದ ದತ್ತಾ ಹೆಸರು ಸರಿಪಡಿಸಲು ವಿನೂತನ ಪ್ರತಿಭಟನೆ ಮಾಡಿದ್ದಾನೆ. ಆದರೆ ಈತನ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿ ನೇರವಾಗಿ ತೆರಳಿದ್ದಾರೆ. ಹಳೇ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.
