ಆಗ್ರಾ (ಮಾ.05): ಇಲ್ಲಿನ ತಾಜ್‌ಮಹಲ್‌ನಲ್ಲಿ ಬಾಂಬ್‌ ಇರುವುದಾಗಿ ಕಿಡಿಗೇಡಿಯೊಬ್ಬ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಭಾರೀ ಆತಂಕ ಸೃಷ್ಟಿಯಾದ ಘಟನೆ ಗುರುವಾರ ನಡೆದಿದೆ. 

ಬೆಳಿಗ್ಗೆ 9 ಗಂಟೆ ವೇಳೆಗೆ ಉತ್ತರ ಪ್ರದೇಶದ ಪೊಲೀಸರ ತುರ್ತು ಸ್ಪಂದಿಸುವ 112 ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಸ್ಮಾರಕದ ಒಳಗೆ ಬಾಂಬ್‌ ಇರುವುದಾಗಿ ಮಾಹಿತಿ ನೀಡಿದ್ದ. ಪೊಲೀಸರು ತತ್‌ಕ್ಷಣವೇ ಅಲ್ಲಿನ ಭದ್ರತಾ ಪಡೆಗೆ ಮಾಹಿತಿ ನೀಡಿ, ಕೂಡಲೇ ಪ್ರವಾಸಿಗರನ್ನೆಲ್ಲಾ ಆವರಣದಿಂದ ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು.

ಇದು ತಾಜ್ ಮಹಲ್ ಅಲ್ವೇ ಅಲ್ಲ, ಹೀಗಿದೆ ನೋಡಿ Microsoft ಹೊಸ ಆಫೀಸ್! ...

ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಆಗ್ರಾ ಪೊಲೀಸ್‌ ಮಹಾ ನಿರ್ದೇಶಕ ಸತೀಶ್‌ ಗಣೇಶ್‌ ತಿಳಿಸಿದ್ದಾರೆ. ಬಳಿಕ ಇದೊಂದು ಹುಸಿ ಕರೆ ಎಂದು ಖಚಿತಪಟ್ಟಿದ್ದು, ಈ ಸಂಬಂಧ ವಿಮಲ್‌ ಕುಮಾರ್‌ ಸಿಂಗ್‌ ಎಂಬಾತನನ್ನು ಬಂಧಿಸಲಾಯಿತು.