ನವದೆಹಲಿ (ಮಾ.01): ಪಂಚರಾಜ್ಯ ಚುನಾವಣಾ ಪ್ರಚಾರ ಆರಂಭಗೊಳ್ಳುತ್ತಿದ್ದಂತೆಯೇ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಆರಂಭವಾಗಿದೆ. ಮಾಧ್ಯಮ ಸಂಸ್ಥೆಗಳು ಸಮೀಕ್ಷೆ ಪ್ರಕಟಿಸಿದ್ದು, ಬಿಜೆಪಿ ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಗೆಲ್ಲಲಿದೆ. ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌, ತಮಿಳುನಾಡಿನಲ್ಲಿ ಡಿಎಂಕೆ+ಕಾಂಗ್ರೆಸ್‌ ಕೂಟ ಹಾಗೂ ಕೇರಳದಲ್ಲಿ ಎಡರಂಗ ಮೈತ್ರಿಕೂಟ ಗೆಲ್ಲಲಿವೆ ಎಂದು ಅವು ಭವಿಷ್ಯ ನುಡಿದಿವೆ.

ಎಬಿಪಿ ನ್ಯೂಸ್‌-ಸಿ ವೋಟರ್‌ ಹಾಗೂ ಐಎಎನ್‌ಎಸ್‌ ಸುದ್ದಿಸಂಸ್ಥೆ ಪ್ರತ್ಯೇಕ ಸಮೀಕ್ಷೆ ನಡೆಸಿವೆ. ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಜಯಭೇರಿ ಬಾರಿಸಲಿದ್ದಾರೆ. ಆದರೆ ಸೋಲಿನಲ್ಲೂ ಬಿಜೆಪಿ ಮೊದಲ ಬಾರಿ ಶತಕದ ಗಡಿ ದಾಟಲಿದೆ ಎಂದು ಅವು ವಿವರಿಸಿವೆ.

ಬಂಗಾಳದಲ್ಲಿ 8 ಹಂತದ ಮತದಾನ: ಇದರ ಹಿಂದೆ ಮೋದಿ ಕೈವಾಡ ಎಂದ ಮಮತಾ?

ತಮಿಳುನಾಡಿನಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಅಣ್ಣಾಡಿಎಂಕೆ ಸೋಲಲಿದೆ. ಡಿಎಂಕೆ ಗದ್ದುಗೆ ಹಿಡಿಲಿದೆ. ಅಸ್ಸಾಂ ಹಾಗೂ ಕೇರಳದಲ್ಲಿ ಕ್ರಮವಾಗಿ ಬಿಜೆಪಿ ಹಾಗೂ ಎಡರಂಗ ಮತ್ತೆ ಅಧಿಕಾರಕ್ಕೆ ಬರಲಿವೆ. ಪುದುಚೇರಿಯಲ್ಲಿ ಮಿತ್ರರ ಜತೆಗೂಡಿ ಕಾಂಗ್ರೆಸ್‌ ಅನ್ನು ಮಣ್ಣುಮುಕ್ಕಿಸಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ವಿವರಿಸಿವೆ.


ಎಬಿಪಿ ನ್ಯೂಸ್‌ ಸಮೀಕ್ಷೆ

ಪ.ಬಂಗಾಳ (ಕ್ಷೇತ್ರ 294/ಬಹುಮತ 148)

ತೃಣಮೂಲ ಕಾಂಗ್ರೆಸ್‌ 148​-164

ಬಿಜೆಪಿ 92-108

ಎಡರಂಗ+ಕಾಂಗ್ರೆಸ್‌ 31-39

ಪುದುಚೇರಿ (ಕ್ಷೇತ್ರ 30/ ಬಹುಮತ 16)

ಬಿಜೆಪಿ+ 17-21

ಕಾಂಗ್ರೆಸ್‌+ 12

ಕೇರಳ (ಕ್ಷೇತ್ರ 140/ಬಹುಮತ 71)

ಎಲ್‌ಡಿಎಫ್‌ 83-91

ಯುಡಿಎಫ್‌ 47-55

ಬಿಜೆಪಿ 2

ಅಸ್ಸಾಂ (ಕ್ಷೇತ್ರ 126/ಬಹುಮತ 64)

ಬಿಜೆಪಿ 72

ಕಾಂಗ್ರೆಸ್‌ 47

ಇತರರು 7

ತಮಿಳುನಾಡು (ಕ್ಷೇತ್ರ 234/ಬಹುಮತ 118)

ಡಿಎಂಕೆ+ 154-162

ಅಣ್ಣಾಡಿಎಂಕೆ+ 58-66


ಐಎಎನ್‌ಎಸ್‌ ಸಮೀಕ್ಷೆ

ಪ.ಬಂಗಾಳ (ಕ್ಷೇತ್ರ 294/ಬಹುಮತ 148)

ತೃಣಮೂಲ ಕಾಂಗ್ರೆಸ್‌ 156

ಬಿಜೆಪಿ 100

ಎಡರಂಗ+ಕಾಂಗ್ರೆಸ್‌ 35


ಪುದುಚೇರಿ (ಕ್ಷೇತ್ರ 30/ ಬಹುಮತ 16)

ಬಿಜೆಪಿ+ 19

ಕಾಂಗ್ರೆಸ್‌+ 10


ಕೇರಳ (ಕ್ಷೇತ್ರ 140/ಬಹುಮತ 71)

ಎಲ್‌ಡಿಎಫ್‌ 87

ಯುಡಿಎಫ್‌ 51

ಬಿಜೆಪಿ 1


ಅಸ್ಸಾಂ (ಕ್ಷೇತ್ರ 126/ಬಹುಮತ 64)

ಬಿಜೆಪಿ 68​-76

ಕಾಂಗ್ರೆಸ್‌ 43-51

ಇತರರು 5-10

--

ತಮಿಳುನಾಡು (ಕ್ಷೇತ್ರ 234/ಬಹುಮತ 118)

ಡಿಎಂಕೆ+ 158

ಅಣ್ಣಾಡಿಎಂಕೆ+ 62