ಕೋಲ್ಕತ್ತಾ(ಜ.25): ಗೃಹ ಬಂಧನದಲ್ಲಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರ ಫೋಟೋವೊಂದು, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕಣ್ಣೀರಿಡುವಂತೆ ಮಾಡಿದೆ.

ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಅವರಲ್ಲಿ ಓಮರ್ ಅಬ್ದುಲ್ಲಾ ಕೂಡ ಒಬ್ಬರು.

ಓಮರ್ ಅವರ ಇತ್ತೀಚಿನ ಫೋಟೋವೊಂದು ಭಾರೀ ವೈರಲ್ ಆಗಿದ್ದು, ಓಮರ್ ಬಿಳಿ ದಾಡಿ ಮತ್ತು ಮೀಸೆ ಬೆಳೆಸಿರುವುದು ಕಾಣುತ್ತದೆ. ಸಾಮಾನ್ಯವಾಗಿ ಓಮರ್ ಮೀಸೆ ಮತ್ತು ದಾಡಿ ಬೆಳೆಸುವುದಿಲ್ಲ.

ಈ ಫೋಟೋ ಕುರಿತು ಟ್ವೀಟ್ ಮಾಡಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಓಮರ್ ಅವರನ್ನು ಹೀಗೆ ನೋಡಲು ಸಂಕಟವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ರಾಜಕೀಯ ನಾಯಕರನ್ನು ಹೀಗೆ ನಡೆಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

370ನೇ ವಿಧಿ ಜಾರಿ ಬೆನ್ನಲ್ಲೇ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ, ಅಬ್ದುಲ್ಲಾ ಸೆರೆ!

ಇದಕ್ಕೆಲ್ಲಾ ಬೇಗ ತೆರೆ ಬಿದ್ದು, ಓಮರ್ ಸೇರಿದಂತೆ ಗೃಹ ಬಂಧನದಲ್ಲಿರುವ ಎಲ್ಲ ರಾಜಕೀಯ ನಾಯಕರನ್ನು ಕೇಂದ್ರರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.