ರಾಜ್ಯಪಾಲರೊಂದಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಂಘರ್ಷಕ್ಕೆ ಇಳಿದಿರುವ ವಿಪಕ್ಷಗಳ ಆಡಳಿತದ ಮುಖ್ಯಮಂತ್ರಿಗಳು ಶೀಘ್ರದಲ್ಲೇ ದಿಲ್ಲಿಯಲ್ಲಿ ಸಭೆ ಸೇರುವ ಸಾಧ್ಯತೆ ಇದೆ.
ಚೆನ್ನೈ (ಫೆ.14): ರಾಜ್ಯಪಾಲರೊಂದಿಗೆ (Governor) ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಂಘರ್ಷಕ್ಕೆ ಇಳಿದಿರುವ ವಿಪಕ್ಷಗಳ ಆಡಳಿತದ ಮುಖ್ಯಮಂತ್ರಿಗಳು ಶೀಘ್ರದಲ್ಲೇ ದಿಲ್ಲಿಯಲ್ಲಿ ಸಭೆ ಸೇರುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ನಡುವೆ ಭಾನುವಾರ ಫೋನ್‌ನಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ಸಭೆಯ ನಿರ್ಧಾರಕ್ಕೆ ಬರಲಾಗಿದೆ.
‘ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರದ ಆಡಳಿತಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ಮಮತಾ ನನಗೆ ಫೋನ್ ಮಾಡಿ ದಿಲ್ಲಿಯಲ್ಲಿ ಬಿಜೆಪಿಯೇತರ ರಾಜ್ಯಗಳ ಸಭೆ ನಡೆಸೋಣ ಎಂದರು. ಇದಕ್ಕೆ ನಾನು ಒಪ್ಪಿಕೊಂಡೆ. ರಾಜ್ಯಗಳ ಸ್ವಾಯತ್ತೆ ಎತ್ತಿಹಿಡಿಯುವ ಅಗತ್ಯವಿದೆ’ ಎಂದು ಸ್ಟಾಲಿನ್ ಟ್ವೀಟ್ (Tweet) ಮಾಡಿದ್ದಾರೆ.
ಬಂಗಾಳ ರಾಜ್ಯಪಾಲ ಧನಕರ್ ಅವರು ಪ.ಬಂಗಾಳ ವಿಧಾನಸಭೆಯನ್ನು ಮಮತಾ ಅನುಮೋದನೆ ಇಲ್ಲದೇ ಮುಂದೂಡಿದ್ದರು. ತಮಿಳುನಾಡು ರಾಜ್ಯಪಾಲ ರವಿ ಅವರು ನೀಟ್ ವಿರೋಧಿ ಮಸೂದೆ ತಿರಸ್ಕರಿಸಿದ್ದರು. ಹೀಗಾಗಿ ಎರಡೂ ರಾಜ್ಯಗಳು ರಾಜ್ಯಪಾಲರೊಂದಿಗೆ ಸಂಘರ್ಷಕ್ಕೆ ಇಳಿದಿವೆ.
West Bengal Politics: ಮಮತಾ, ಪ್ರಶಾಂತ್ ಕಿಶೋರ್ ಸಂಬಂಧದಲ್ಲಿ ಬಿರುಕು, ಎಮರ್ಜೆನ್ಸಿ ಮೀಟಿಂಗ್
ಬಿಜೆಪಿ ವಿರುದ್ಧ ಒಗ್ಗಟ್ಟಿಗೆ ದೀದಿ, ಸ್ಟಾಲಿನ್ ಕರೆ: 2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ವಿಪಕ್ಷಗಳ ರಂಗ ರಚನೆಗೆ ತಯಾರಿ ಆರಂಭವಾಗಿದೆ. ಬಿಜೆಪಿ ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಬೇಕು ಎಂದು ಬುಧವಾರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ಟಿಎಂಸಿ ಅಧ್ಯಕ್ಷೆಯಾಗಿ ಪುನರಾಯ್ಕೆಯಾದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, 2024 ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ, ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂದು ಅವರು ಕರೆ ನೀಡಿದರು.
37 ವಿಪಕ್ಷಗಳಿಗೆ ಪತ್ರ ಬರೆದಿರುವ ಸ್ಟಾಲಿನ್, ದೇಶದಲ್ಲಿ ಬಹುಸಂಸ್ಕೃತಿ ಹಾಗೂ ಕೋಮುಸಾಮರಸ್ಯಕ್ಕೆ ಧಕ್ಕೆ ಇದೆ. ತುಳಿತಕ್ಕೆ ಒಳಗಾದವರ ಪರವಾಗಿ ಎಲ್ಲ ವಿಪಕ್ಷಗಳೂ ಒಂದಾಗಬೇಕು ಎಂದು ಕಾಂಗ್ರೆಸ್, ವೈರಿ ಪಕ್ಷ ಎಐಎಡಿಎಂಕೆ, ಆರ್‌ಜೆಡಿ ಹಾಗೂ ಎಡರಂಗ ಸೇರಿ 37 ಪಕ್ಷಗಳಿಗೆ ಮನವಿ ಮಾಡಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಕೂಡ ಬಿಜೆಪಿ ವಿರೋಧಿಗಳಾದ ಶಿವಸೇನೆ ಸೇರಿ ಹಲವು ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಟಿಎಂಸಿಯಲ್ಲಿ ಹೊಸ ಕಾರ್ಯಕಾರಿ ಸಮಿತಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ನಡುವೆ, ಶನಿವಾರ ಮುಖ್ಯಮಂತ್ರಿಗಳ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೂ ಉಪಸ್ಥಿತರಿದ್ದರು ಮುಖ್ಯಮಂತ್ರಿಗಳ ಕಾಲಿಘಾಟ್ ನಿವಾಸದಲ್ಲಿ ನಡೆದ ಸಭೆಯ ನಂತರ ಮಮತಾ ಬ್ಯಾನರ್ಜಿ ಅವರು ಕಾರ್ಯಕಾರಿ ಸಮಿತಿ ಸದಸ್ಯರ ಹೆಸರನ್ನು ನಂತರ ಪ್ರಕಟಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಪಾರ್ಥ ಚಟರ್ಜಿ ಹೇಳಿದ್ದಾರೆ.
I-PAC VS TMC: ಮಮತಾ, ಪ್ರಶಾಂತ್ ಕಿಶೋರ್ ನಡುವೆ ಬಿರುಕು? ಕಚ್ಚಾಟಕ್ಕೆ ಇದೇನಾ ಕಾರಣ?
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿಯನ್ನು ನಿಯಂತ್ರಿಸುವುದರೊಂದಿಗೆ ಹೊಸ ಮತ್ತು ಹಳೆಯ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ತಡೆಯುವ ಪ್ರಯತ್ನವಾಗಿ ಈ ಕಾರ್ಯ ಮಾಡಲಾಗುತ್ತಿದೆ. ಅಭಿಷೇಕ್ ಬ್ಯಾನರ್ಜಿ ಪಕ್ಷದಲ್ಲಿ ಒಬ್ಬ ವ್ಯಕ್ತಿ-ಒಂದು ಹುದ್ದೆ ಎಂಬ ನಿಯಮವನ್ನು ಮುಂದಿಡುವ ಕಸರತ್ತಿಗೆ ಸಂಬಂಧಿಸಿದಂತೆ ಈ ಸಭೆ ನಡೆದಿದೆ ಎಂದು ಹೇಳಲಾಗಿದ್ದು, ಈ ಬಗ್ಗೆಯೂ ಕೆಲವು ಅಸಮಾಧಾನವಿದೆ. ಅನೇಕ ಹಿರಿಯ ನಾಯಕರು ಹಲವು ಸ್ಥಾನಗಳನ್ನು ಹೊಂದಿದ್ದಾರೆ.
