ಕೋಲ್ಕತ್ತಾ(ನ. 02) ಪಶ್ಚಿಮ ಬಂಗಾಳ ಸಿಎಮ ಮಮತಾ ಬ್ಯಾನರ್ಜಿ ಬಾಲಿವುಡ್ ನಟ ಶಾರುಖ್ ಖಾನ್ ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

'ಜನ್ಮದಿನದ ಶುಭಾಶಯಗಳು, ನಿಮ್ಮ ಮುಂದಿನ ಹಾದಿಯಲ್ಲಿ ಯಶಸ್ಸು ಇರಲಿ ಸಹೋದರ'   ಎಂದು ಶುಭಕೋರಿದ್ದಾರೆ. ಪಶ್ಚಿಮ ಬಂಗಾಳದ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಶಾರುರ್ಖ ಖಾನ್ ಗುರುತಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಅಪಾರ ಅಭಿಮಾನಿ ವರ್ಗ ಹೊಂದಿದ್ದಾರೆ.

ಐಫೆಲ್ ಟವರ್ ತೋರಿಸ್ತೀನಿ ಅಂಥ ಗೌರಿನ ಫೂಲ್ ಮಾಡಿದ್ದ ಖಾನ್

ಶಾರುಖ್ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ್ದು ಕೋವಿಡ್ ಕಿಟ್ ಗಳನ್ನು ಸಿದ್ಧ ಮಾಡಿ ಅಗತ್ಯ ಇರುವವರಿಗೆ ನೀಡಿದ್ದಾರೆ.  ಶಾರುಖ್ ಖಾನ್ ಗೆ ನವೆಂಬರ್ 2  ಜನ್ಮದಿನದ ಸಂಭ್ರಮ. ಬಾಲಿವುಡ್ ನಾಯಕ ತಮ್ಮ 55  ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಕಿರುತೆರೆ ಮೂಲಕ ರಂಗ ಪ್ರವೇಶ ಮಾಡಿದ ನಟನಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಕೆಲವೊಂದು ಹೇಳಿಕೆಗಳಿಂದ ವಿವಾದವೂ ಖಾನ್ ಸುತ್ತಿಕೊಂಡಿತ್ತು.