ಕೋಲ್ಕತ್ತಾ(ಫೆ.19): ಜನಪ್ರಿಯ ಬಂಗಾಳಿ ನಟ ಹಾಗೂ ಟಿಎಂಸಿ ನಾಯಕ ತಪಸ್ ಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಲ್, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.

ಆದರೆ ತಪಸ್ ಪಾಲ್ ನಿಧನಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ವಿಚಿತ್ರ ಆರೋಪ ಹೊರಿಸಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಚಿಟ್ ಫಂಡ್ ಹಗರಣದ ತನಿಖೆಯ ಹೆಸರಲ್ಲಿ ತಪಸ್ ಪಾಲ್ ಅವರಿಗೆ ಕೇಂದ್ರ ಸರ್ಕಾರ ನಿರಂತರ ಕಿರುಕುಳ ಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಪಸ್ ಪಾಲ್ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ತಪಸ್ ಪಾಲ್ ಅವರನ್ನು ಹಲವು ಬಾರಿ ವಿಚಾರಣೆ ನಡೆಸಿದ್ದವು.

ಇದು ಮಮತೆಯ ತಿರುವು: ಸಿಎಎ ವಿರೋಧಿಗಳಿಂದ ದೂರದ ಕುರುಹು!

ಕೇಂದ್ರ ಸರ್ಕಾರ ನೀಡಿದ ಕಿರುಕುಳದಿಂದಾಗಿಯೇ ತಪಸ್ ಪಾಲ್ ಸಾವನ್ನಪ್ಪಿದ್ದಾರೆ ಎಂದಿರುವ ಮಮತಾ, ರಾಜಕೀಯ ವಿರೋಧಿಗಳನ್ನು ಮುಗಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.