ಕೋಲ್ಕತಾ(ಮಾ.09): ಪ್ರಧಾನಿ ನರೇಂದ್ರ ಮೋದಿ ಚಾಯ್‌ವಾಲಾ ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ ಇದೇ ಚಾಯ್‌ವಾಲಾ ಇಮೇಜ್ ಬಿಜೆಪಿ ಭಾರಿ ಯಶಸ್ಸು ತಂದುಕೊಟ್ಟಿದೆ.  ಇದೀಗ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಚಾಯ್‌ವಾಲಿ ಆಗಿ ಗಮನಸೆಳೆದಿದ್ದಾರೆ.

ಮಮತಾಗೆ ಮತ್ತೆ ಶಾಕ್‌: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ನಂದಿಗ್ರಾಮದಲ್ಲಿ ಮತದಾರರನ್ನು ಸೆಳೆಯಲು ಮಮತಾ ಭರ್ಜರಿ ಕಸರತ್ತು ಆರಂಭಿಸಿದ್ದಾರೆ. ನಂದಿಗ್ರಾಮದಲ್ಲಿ ರೋಡ್ ಶೋ, ಪ್ರಚಾರದ ಬಳಿಕ ಟಿ ಶಾಪ್‌ಗೆ ತೆರಳಿದ ಮಮತಾ, ಸ್ವತಃ ಚಹಾ ಮಾಡಿದ್ದಾರೆ.

 

ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ

ಮಮತಾ ಬ್ಯಾನರ್ಜಿ ಕೈಯಾರೆ ಚಹಾ ಮಾಡಿ ತಮ್ಮ ಬೆಂಬಲಿಗರು, ತಮ್ಮ ಜೊತೆ ಬಂದವರಿಗೆ ಹಂಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀದಿ ಸರ್ಕಸ್ ಇಲ್ಲಿಗೆ ಮುಗಿದಿಲ್ಲ, ದಿನಸಿ ಅಂಗಡಿಗೆ ತೆರಳಿದ ಮಮತಾ ಬ್ಯಾನರ್ಜಿ ಮಗುವನ್ನು ಎತ್ತಿ ಮುದ್ದಾಡಿದ್ದಾರೆ.

 

ಮಮತಾ ಬ್ಯಾನರ್ಜಿ ಈ ಕಸರತ್ತಿಗೆ ಜೈಕಾರ ಜೊತೆಗೆ ಟೀಕೆಗಳು ಬಂದಿದೆ. ಮೋದಿ ಹಾಗೆ ಚಾಯ್ ಪೇ ಚರ್ಚಾ, ಚಾಯ್‌ವಾಲಿ ಆಗೋ ಮೂಲಕ ಮತ ಸೆಳೆಯೋ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.