ಕೋಲ್ಕತಾ(ಫೆ.7): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಯಕ್ತ ಬಿಜೆಪಿ ಭರ್ಜರಿ ರ್ಯಾಲಿ ಆಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಲ್ಡಿಯಾದಲ್ಲಿ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಂಗಾಳ ಕೋಟೆಯಲ್ಲಿ ಮೊಳಗಿತು ಜೈ ಶ್ರೀರಾಮ್ ಘೋಷಣೆ, ರೊಚ್ಚಿಗೆದ್ದ ದೀದಿ, ವೇದಿಕೆಯಲ್ಲಿ ಹೈಡ್ರಾಮಾ

ಮಮತಾ ಬ್ಯಾನರ್ಜಿ ಇದುವರೆಗೆ ಪಶ್ಚಿಮ ಬಂಗಾಳದ ರೈತರ ಅಂಕಿ ಅಂಶ ನೀಡಿಲ್ಲ. ಕೇಂದ್ರದ ಸೌಲಭ್ಯಗಳು ಪಶ್ಚಿಮ ಬಂಗಾಳದ ರೈತರಿಗೆ ಸಿಗದ ರೀತಿಯಲ್ಲಿ ಮಾಡಿ ಅವರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಇನ್ನು ಜೈಶ್ರೀರಾಮ್ ಘೋಷಣೆ ಕೇಳಿದಾಗ ಉರಿದು ಬಿದ್ದ ಸಿಎಂ ಮಮತಾ ಬ್ಯಾನರ್ಜಿ, ದೇಶದ ವಿರೋಧಿ ಚಟುವಟಿಕೆ, ಪಿತೂರಿಗೆ ಒಂದು ಶಬ್ದ ಆಡದೆ ಮೌನವಾಗಿದ್ದಾರೆ. ಇದು ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ನಿಲುವನ್ನು ಜನತೆ ಮುಂದೆ ತೆರೆದಿಟ್ಟಿದೆ ಎಂದುು ಮೋದಿ ಹೇಳಿದರು.

ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಷಣ ಮಾಡಲು ಎದ್ದಾಗ, ಜೈ ಶ್ರೀರಾಮ್ ಘೋಷಣೆ ಕೂಗಲಾಗಿತ್ತು. ಪ್ರಧಾನಿ ಮೋದಿ ಕೂಡ ವೇದಿಕೆಯಲ್ಲಿದ್ದರು. ಜೈ ಶ್ರೀರಾಮ್ ಘೋಷಣೆಯಿಂದ ಕೆರಳಿದ ಮಮತಾ, ಕಾರ್ಯಕ್ರಮಕ್ಕೆ ಆಹ್ವಾನಿಸಿ ನನಗೆ ಅಮವಾನ ಮಾಡಲಾಗಿದೆ. ನಾನು ಭಾಷಣ ಮಾಡುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದರು.