Asianet Suvarna News Asianet Suvarna News

ವಯನಾಡ್‌ ಸಂತ್ರಸ್ತರಿಗೆ 3 ಕೋಟಿ ಘೋಷಿಸಿದ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ ಲಾಲ್

ಭಾರತೀಯ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಆಗಿರುವ ನಟ ಮೋಹನ್‌ ಲಾಲ್ ಭೂಕುಸಿತದಿಂದ ನಲುಗಿರುವ ವಯನಾಡಿಗೆ ಸೇನಾ ಸಮವಸ್ತ್ರದಲ್ಲಿ ಭೇಟಿ ನೀಡಿದ್ದಾರೆ, ಈ ವೇಳೆಯಲ್ಲಿ ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಟ, ವಿಪತ್ತು ಪೀಡಿತ ಪ್ರದೇಶದ ದುರಸ್ತಿ ಕಾರ್ಯಕ್ಕೆ 3 ಕೋಟಿ ರು. ಪರಿಹಾರ ಘೋಷಿಸಿದ್ದಾರೆ.

Malayalam superstar actor mohan lal visits Wayanad landslides donate 3crore rehabilitation rav
Author
First Published Aug 4, 2024, 11:29 AM IST | Last Updated Aug 5, 2024, 10:44 AM IST

ವಯನಾಡು (ಆ.4): ಭಾರತೀಯ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಆಗಿರುವ ನಟ ಮೋಹನ್‌ ಲಾಲ್ ಭೂಕುಸಿತದಿಂದ ನಲುಗಿರುವ ವಯನಾಡಿಗೆ ಸೇನಾ ಸಮವಸ್ತ್ರದಲ್ಲಿ ಭೇಟಿ ನೀಡಿದ್ದಾರೆ, ಈ ವೇಳೆಯಲ್ಲಿ ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಟ, ವಿಪತ್ತು ಪೀಡಿತ ಪ್ರದೇಶದ ದುರಸ್ತಿ ಕಾರ್ಯಕ್ಕೆ 3 ಕೋಟಿ ರು. ಪರಿಹಾರ ಘೋಷಿಸಿದ್ದಾರೆ.

ಮೆಪ್ಪಾಡಿಯಲ್ಲಿರುವ ಸೇನಾ ಶಿಬಿರಕ್ಕೆ ಭೇಟಿ ನೀಡಿದ ಮೋಹನ್ ಲಾಲ್‌ ರಕ್ಷಣಾ ಕಾರ್ಯಾಚರಣೆಯ ಕುರಿತು ಅಧಿಕಾರಿಗಳ ಜೊತೆಗೆ ಕೆಲ ಕಾಲ ಚರ್ಚಿಸಿದರು. ಬಳಿಕ ಚೂರಲ್‌ಮಲ, ಮುಂಡಕ್ಕೈ, ಪುಂಚಿರಿಮಟ್ಟಂ ಸೇರಿದಂತೆ ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದರು. ಈ ವೇಳೆಯಲ್ಲಿ ರಕ್ಷಣಾ ಪಡೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮೋಹನ್ ಲಾಲ್ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಗುರುತಿಸಿ, ಸರ್ಕಾರ 2009ರಲ್ಲಿ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಆಗಿ ನೇಮಿಸಿತ್ತು. 

ಕೇರಳದಲ್ಲಿ ಗೋಹತ್ಯೆ ನಡೆಸಿದ್ದರಿಂದಲೇ ವಯನಾಡಿನಲ್ಲಿ ಭೂಕುಸಿತ : ಬಿಜೆಪಿ ನಾಯಕ ವಿವಾದ

ಸೇನಾ ಸಮವಸ್ತ್ರದಲ್ಲಿ ವಯನಾಡಿಗೆ ಭೇಟಿ:

ಮೋಹನ್‌ಲಾಲ್ ಅವರು ತಮ್ಮ ಭಾರತೀಯ ಪ್ರಾದೇಶಿಕ ಸೇನಾ ಸಮವಸ್ತ್ರವನ್ನು ಧರಿಸಿ, ವಯನಾಡಿನಲ್ಲಿ ಭೂಕುಸಿತದ ವಿನಾಶಕಾರಿ ಪರಿಣಾಮವನ್ನು ನಿರ್ಣಯಿಸಲು ಮೆಪ್ಪಾಡಿಯ ಸೇನಾ ಶಿಬಿರಕ್ಕೆ ಆಗಮಿಸಿದರು. ಬಳಿಕ ಸೇನಾ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಂತ ಸ್ಥಳಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲಿಂದ ಅವರು ಚೂರಲ್ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಸೇರಿದಂತೆ ವಿವಿಧ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಭೂಕುಸಿತಕ್ಕೆ ಅರಣ್ಯ ನಾಶವೇ ಕಾರಣ, ಅಕ್ರಮ ಹೋಂ ಸ್ಟೇ, ರೆಸಾರ್ಟ್‌, ಲೇಔಟ್ ತೆರವಿಗೆ ಖಂಡ್ರೆ ತಾಕೀತು

ದುರಂತದ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ನಟ ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರೊಂದಿಗೆ ನೇರವಾಗಿ ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಸಂತ್ರಸ್ತರ ಸ್ಥಿತಿ ಕಂಡು ಭಾವುಕರಾದರು ಅಲ್ಲದೆ ಈ ಘೋರ ದುರಂತವನ್ನು ಸ್ಥಳದಲ್ಲೇ ನಿಂತು ನೋಡಿದಾಗ ಮಾತ್ರ ಅರ್ಥವಾಗುತ್ತದೆ ಎಂದರು. ಸೇನೆ, ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ರಕ್ಷಣಾ, ಇತರ ಸಂಸ್ಥೆಗಳು, ಸ್ಥಳೀಯರು ಮುಂತಾದವರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಪ್ರಾಣ ಪಣಕ್ಕಿಟ್ಟ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios