ಸಾನಿಯಾ ಬೇಡ, ಸಿಂಧು ತೆಲಂಗಾಣ ರಾಯಭಾರಿ ಆಗಲಿ ಎಂದ BJP ಶಾಸಕ
- ಸಾನಿಯಾ ಮಿರ್ಝಾ ಬೇಡ, ಪಿವಿ ಸಿಂಧು ತೆಲಂಗಾಣ ರಾಯಭಾರಿಯಾಗಲಿ ಎಂದ ಬಿಜೆಪಿ ಸಚಿವ
- ಸಾನಿಯಾ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಡೋ ಶಾಸಕನಿಂದ ಮತ್ತೊಂದು ಹೇಳಿಕೆ
ನವದೆಹಲಿ(ಆ.06): ಟೆನ್ನಿಸ್ ತಾರೆ ಸಾನಿಯಾ ಮಿರ್ಝಾ ಅವರನ್ನು ತೆಗೆದು ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಪಿ.ವಿ. ಸಿಂಧು ಅವರನ್ನು ತೆಲಂಗಾಣದ ರಾಯಭಾರಿ ಮಾಡಬೇಕು ಎಂದು ಬಿಜೆಪಿ ಶಾಸಕ ಟಿ. ರಾಜಸಿಂಗ್ ಅವರು ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ಒತ್ತಾಯಿಸಿದ್ದಾರೆ. ಚಿಕ್ಕದೊಂದು ವಿಡಿಯೋ ರಿಲೀಸ್ ಮಾಡಿದ ಶಾಸಕ ಸಿಂಧು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಮಹಿಳೆ. ಈ ಮೂಲಕ ಅವರು ಭಾರತ ಮತ್ತು ತೆಲಂಗಾಣವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದಾರೆ. ಗೋಶಮಹಲ್ ಶಾಸಕ ರಾಜ ಸಿಂಗ್ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿದ್ದರು ಈ ಬಿಜೆಪಿ ಶಾಸಕ.
2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಮಿರ್ಜಾ ಅವರನ್ನು ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಸಿಂಗ್ ಹೇಳಿದ್ದರು. ಅವರು ಮಿರ್ಜಾ ಅವರನ್ನು 'ಪಾಕಿಸ್ತಾನದ ಸೊಸೆ' ಎಂದೂ ಕರೆದಿದ್ದರು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲು, ಮೇಜರ್ ಧ್ಯಾನ್ ಚಂದ್‌ಗೆ ಪ್ರಧಾನಿ ಮೋದಿ ಗೌರವ
ಆಂಧ್ರಪ್ರದೇಶ ಸರ್ಕಾರದಿಂದ ಸಿಂಧುಗೆ ವಿಜಯವಾಡದಲ್ಲಿ ಭವ್ಯ ಸ್ವಾಗತ ದೊರೆಯಿತು. ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಸೋಲಿಸಿದ ನಂತರ ಏಸ್ ಶಟ್ಲರ್ ಭಾನುವಾರ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಆಕೆಯ ಆಗಮನದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತವನ್ನು ನೀಡಲಾಯಿತು. ಆಕೆಗೆ ವಿಜಯವಾಡದಲ್ಲಿ ಭವ್ಯ ಸ್ವಾಗತ ದೊರೆಯಿತು.
ಭವ್ಯ ಸ್ವಾಗತಕ್ಕೆ ಧನ್ಯವಾದಗಳು. ನನಗೆ ತುಂಬಾ ಸಂತೋಷವಾಗಿದೆ. ನನ್ನ ಹೆತ್ತವರಿಗೆ ನಾನು ಕೃತಜ್ಞಳಾಗಿದ್ದೇನೆ, ಅವರು ತುಂಬಾ ಬೆಂಬಲ ನೀಡಿದ್ದಾರೆ. ಅವರೇ ವಾಲಿಬಾಲ್ ಆಟಗಾರರು. ಅವರನ್ನು ನನ್ನ ಹೆತ್ತವರನ್ನಾಗಿ ಹೊಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಸಿಂಧು ತಿಳಿಸಿದ್ದಾರೆ.
ಮಂಗಳವಾರ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಸಿಂಧು ಅವರನ್ನು ಭಾರತದ ಶ್ರೇಷ್ಠ ಒಲಿಂಪಿಯನ್‌ಗಳಲ್ಲಿ ಒಬ್ಬರು ಎಂದು ಅಭಿನಂದಿಸಿದರು.
"ಅವರು ಭಾರತದ ಐಕಾನ್, ಸ್ಫೂರ್ತಿ ಮತ್ತು ದೇಶಕ್ಕಾಗಿ ಆಡುವ ಕನಸು ಕಾಣುವ ಪ್ರತಿಯೊಬ್ಬ ಭಾರತೀಯನ ಕಲ್ಪನೆಯನ್ನು ಸೆಳೆದಿದ್ದಾರೆ. ಆಕೆಯ ನಂಬಲಾಗದ ಸಾಧನೆಯು ಒಂದು ಪೀಳಿಗೆಯ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ "ಎಂದು ಅವರು ಹೇಳಿದರು.
ಅಧಿಕೃತ ಪ್ರಕಟಣೆಯ ಪ್ರಕಾರ, ಸಿಂಧುಗೆ ಸರ್ಕಾರ ಕಳೆದ ಒಲಿಂಪಿಕ್ ಚಕ್ರದಲ್ಲಿ ಸುಮಾರು 4 ಕೋಟಿ ರೂಪಾಯಿಗಳಷ್ಟು ಹಣವನ್ನು ನೀಡಿತು. ಇದು ಹೈದರಾಬಾದ್‌ನಲ್ಲಿ ತರಬೇತಿ ಶಿಬಿರಗಳ ಜೊತೆಗೆ 52 ಅಂತರಾಷ್ಟ್ರೀಯ ಪಂದ್ಯಾವಳಿಗಳಿಗೆ ಪ್ರಯಾಣವನ್ನು ಒಳಗೊಂಡಿದೆ.