ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್‌ ರಫ್ತಿಗೆ ಕೇಂದ್ರ ಅನುಮತಿ!

(ಪಿಪಿಇ)ಗಳ ರಫ್ತಿಗೆ ನಿಷೇಧ ಹೇರಿದ್ದ ಕಠಿಣ ನಿಯಮ ಸಡಿಲಿಕೆ| ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್‌ ರಫ್ತಿಗೆ ಕೇಂದ್ರ ಅನುಮತಿ

Make in India Centre allows export of PPE kits caps monthly quota at 50 lakh

ನವದೆಹಲಿ(ಜೂ.30): ಕೊರೋನಾ ಸಂಕ್ರಮಣದಿಂದಾಗಿ ವೈಯಕ್ತಿಕ ರಕ್ಷಣಾ ಕಿಟ್‌ (ಪಿಪಿಇ)ಗಳ ರಫ್ತಿಗೆ ನಿಷೇಧ ಹೇರಿದ್ದ ಕಠಿಣ ನಿಯಮವನ್ನು ಕೇಂದ್ರ ಸರ್ಕಾರ ಕೊಂಚ ಸಡಿಲಿಕೆ ಮಾಡಿದ್ದು, ತಿಂಗಳಿಗೆ 50 ಲಕ್ಷ ಕಿಟ್‌ಗಳನ್ನು ರಫ್ತು ಮಾಡಲು ಅವಕಾಶ ಕೊಟ್ಟದೆ.

ಇದೇ ವೇಳೆ ಮಾಸ್ಕ್‌, ಫೇಸ್‌ ಶೀಲ್ಡ್‌, ಗ್ಲೌಸ್‌ ಮುಂತಾದ ರಕ್ಷಣಾ ಕಿಟ್‌ಗಳ ಮೇಲಿನ ನಿರ್ಬಂಧ ಮುಂದುವರಿದಿದೆ. ಪಿಪಿಇ ಕಿಟ್‌ ರಫ್ತು ಮಾಡುವ ಕಂಪನಿಗಳು ಇದಕ್ಕೆ ಪರವಾನಿಗೆ ಪಡೆದುಕೊಳ್ಳಬೇಕು. ಜ.31ಕ್ಕೆ ಪಿಪಿಇ ಕಿಟ್‌ ಸಹಿತ ಹಲವು ವೈದ್ಯಕೀಯ ಉಪಕರಣಗಳ ರಫ್ತಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು.

ಕೊರೋನಾ ಮೃತ ವ್ಯಕ್ತಿಯ ದಫನಕ್ಕೆ ಸ್ವತಃ ಗುಂಡಿ ತೋಡಿದ ಶಾಸಕ..!

ವಿಶೇಷವೆಂದರೆ ಕೊರೋನಾಕ್ಕಿಂತ ಮೊದಲು ಭಾರತದಲ್ಲಿ ಒಂದೆ ಒಂದು ಕೊರೋನಾ ಕಿಟ್‌ ಉತ್ಪಾದನೆಯಾಗುತ್ತಿರಲಿಲ್ಲ. ಸಂಪೂರ್ಣ ಆಮದು ಮಾಡಿಕೊಳ್ಳಲಾಗುತ್ತಿತ್ತು.

Latest Videos
Follow Us:
Download App:
  • android
  • ios