ಮಕ್ಕಳು ಸೇರಿ 70 ಪ್ರವಾಸಿಗರಿದ್ದ ಬಸ್ ಪ್ರಪಾತಕ್ಕುರುಳಿ ಭೀಕರ ಅಪಘಾತ!
ಮಕ್ಕಳು, ಮಹಿಳೆಯರು ಸೇರಿ 70 ಮಂದಿ ಪ್ರವಾಸಿಗರು ತೆರಳುತ್ತಿದ್ದ ಬಸ್ ಪ್ರಪಾತಕ್ಕುರುಳಿದೆ. ಪೊಲೀಸ್ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸಪುತರ(ಜು.07) ಭಾರಿ ಮಳೆ, ಗೋಡೆ ಕುಸಿತ, ಪ್ರವಾಹ ಸೇರಿದಂತೆ ಹಲವು ದುರ್ಘಟನೆಗಳ ನಡುವೆ ಇದೀಗ ಬಸ್ ದುರಂತ ವರದಿಯಾಗಿದೆ. ಮಕ್ಕಳು, ಮಹಿಳೆಯರು ಸೇರಿ 70 ಪ್ರವಾಸಿಗರಿದ್ದ ಬಸ್ ಪ್ರಪಾತಕ್ಕುರುಳಿದ ಘಟನೆ ಗುಜರಾತ್‌ನ ಸಪುತರದಲ್ಲಿ ನಡೆದಿದೆ. ಸೂರತ್‌ನಿಂದ ಘಾಟ್ ಮಾರ್ಗವಾಗಿ ಸಪುತರಾಗೆ ತೆರಳುತ್ತಿದ್ದ ಈ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್, 108 ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಬಸ್ ಅಡಿಯಲ್ಲಿ ಇದೀಗ ಇಬ್ಬರು ಮಕ್ಕಳು ಸಿಲುಕಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸಪುತರಾ ಜನಪ್ರಿಯ ಪ್ರವಾಸಿ ತಾಣವಾಗಿದೆ. ವಾರಾಂತ್ಯದಲ್ಲಿ ಹಲವು ಜಿಲ್ಲೆ, ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸುತ್ತಾರೆ. ಬೆಟ್ಟ ಗುಡ್ಡ, ನದಿ ಹಾಗೂ ಜಲಪಾತಗಳಿಂದ ಕೂಡಿದ ಈ ಪ್ರವಾಸಿ ತಾಣಕ್ಕೆ ಐಷಾರಾಮಿ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಬಸ್‌ನಲ್ಲಿ 70ಕ್ಕೂ ಹೆಚ್ಚಿನ ಪ್ರವಾಸಿಗರಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
ಡಿವೈಡರ್‌ಗೆ ಬೈಕ್ ಡಿಕ್ಕಿ: ರಾಜಕಾಲುವೆಗೆ ಬಿದ್ದ ಡೆಲಿವರಿ ಬಾಯ್ ನಾಪತ್ತೆ!
ಇತ್ತೀಚೆಗೆ ಕರ್ನಾಟಕದ ಹಾವೇರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಜನರನ್ನು ಬೆಚ್ಚಿ ಬೀಳಿಸಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ರಭಸಕ್ಕೆ 11 ಜನ ಸ್ಥಳದಲ್ಲೇ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಕ್ಕರೆ ತುಂಬಿದ್ದ ಲಾರಿ ಹೆದ್ದಾರಿಯ ಮೂರನೇ ಲೇನ್‌ನ ಸ್ವಲ್ಪ ಭಾಗ ಆಕ್ರಮಿಸಿ ಪಕ್ಕದಲ್ಲಿ ನಿಂತಿತ್ತು. ನಸುಕಿನ ನಿದ್ದೆಯ ಮಂಪರಿನ ಸಮಯ, ಆಗಾಗ ಬೀಳುತ್ತಿದ್ದ ತುಂತುರು ಮಳೆ, ಅತಿಯಾದ ವೇಗ ಹೀಗೆ ಯಾವುದೋ ಕಾರಣದಿಂದ ಟಿಟಿ ವಾಹನದ ಚಾಲಕ ಲಾರಿಗೆ ಗುದ್ದಿದ್ದಾನೆ. ದೇವರ ದರ್ಶನ ಪಡೆದು ಶುಕ್ರವಾರ ಸೂರ್ಯಹುಟ್ಟುವುದರೊಳಗೆ ಊರು ಸೇರಬೇಕಿದ್ದವರು ಮಸಣ ಸೇರಿದ್ದರು.
ರಸ್ತೆ ಅಪಘಾತದಲ್ಲಿ13 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ಎಮ್ಮೆಹಟ್ಟಿ ಗ್ರಾಮವೇ ಶೋಕದಲ್ಲಿ ಮುಳುಗಿತ್ತು. ಅಪಘಾತದಲ್ಲಿ ಮೃತರಾದ 13 ಜನರ ಮೃತದೇಹಗಳನ್ನು ಸಾರ್ವಜನಿಕರ ವೀಕ್ಷಣೆಗೆಂದು ಎಮ್ಮೆಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಮಿಯಾನ ಹಾಕಿಸಿ ಜನರ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.