ಮೇಡ್‌ ಇನ್‌ ಇಂಡಿಯಾ ಪ್ರಥಮ ವಿಮಾನ ಹಾರಾಟ, ಬೆಂಗಳೂರಿನಲ್ಲಿ ತಯಾರಾದ ಪ್ಲೇನ್!

* ಬೆಂಗಳೂರಿನಲ್ಲಿ ತಯಾರಾದ ಪ್ರಯಾಣಿಕ ವಿಮಾನ

* ಮೇಡ್‌ ಇನ್‌ ಇಂಡಿಯಾ ಪ್ರಥಮ ವಿಮಾನ ಹಾರಾಟ

* ಅಸ್ಸಾಂ-ಅರುಣಾಚಲ ಮಧ್ಯೆ ನಿಯಮಿತ ಸಂಚಾರ

Maiden commercial service by Made in India aircraft connects Assam and Arunachal pod

ದಿಬ್ರುಗಢ(ಏ.13): ಜಗತ್ತಿನಲ್ಲಿ ಈವರೆಗೆ ಬೋಯಿಂಗ್‌ ಹಾಗೂ ಏರ್‌ಬಸ್‌ನಂಥ ಜಾಗತಿಕ ಕಂಪನಿಗಳು ಮಾತ್ರ ಪ್ರಯಾಣಿಕ ವಿಮಾನಗಳನ್ನು ಉತ್ಪಾದನೆ ಮಾಡುತ್ತಿದ್ದವು. ಈ ಸಾಲಿಗೆ ಈಗ ಬೆಂಗಳೂರು ಮೂಲದ ಎಚ್‌ಎಎಲ್‌ ಕೂಡ ಸೇರಿದೆ. ಎಚ್‌ಎಎಲ್‌ ನಿರ್ಮಿತ ಮೊಟ್ಟಮೊದಲ ಸ್ವದೇಶಿ ನಿರ್ಮಿತ ಪ್ರಯಾಣಿಕ ವಾಣಿಜ್ಯ ವಿಮಾನವು ಮಂಗಳವಾರ ಅಸ್ಸಾಮಿನ ದಿಬ್ರುಗಢದಿಂದ ಅರುಣಾಚಲ ಪ್ರದೇಶದ ಪಾಸೀಘಾಟ್‌ಗೆ ಹಾರಾಟ ಆರಂಭಿಸಿದೆ.

ಈ ಮೂಲಕ ವಿಮಾನ ಉತ್ಪಾದನೆಯಲ್ಲಿ ಭಾರತ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಏರ್‌ ಇಂಡಿಯಾದ ಅಂಗಸಂಸ್ಥೆಯಾದ ಅಲಯನ್ಸ್‌ ಏರ್‌ ಸಂಸ್ಥೆಯು ಎಚ್‌ಎಎಲ್‌ನಿಂದ ಈ ವಿಮಾನ ಲೀಸ್‌ಗೆ ಪಡೆದುಕೊಂಡಿದೆ.

ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮೊದಲ ಮೇಡ್‌-ಇನ್‌-ಇಂಡಿಯಾ ‘ಡಾರ್ನಿಯರ್‌ 228’ ವಾಣಿಜ್ಯ ವಿಮಾನದ ಹಾರಾಟಕ್ಕೆ ಮಂಗಳವಾರ ಚಾಲನೆ ನೀಡಿದರು. ಸಿಂಧಿಯಾ, ಕೇಂದ್ರ ಸಚಿವ ಕಿರಣ್‌ ರಿಜಿಜು ಹಾಗೂ ಹಿರಿಯ ಅಧಿಕಾರಿಗಳು ವಿಮಾನದಲ್ಲಿ ಮಂಗಳವಾರ ಪ್ರಯಾಣಿಸಿದರು.

ಈ ವಿಮಾನವು 17 ಸೀಟುಗಳನ್ನು ಹೊಂದಿದ್ದು, ಹವಾನಿಯಂತ್ರಿತ ಕ್ಯಾಬಿನ್‌ ಹೊಂದಿದೆ. ವಿಮಾನವು ಹಗಲು ಮತ್ತು ರಾತ್ರಿ ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ. ಈ ವಿಮಾನ ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕವನ್ನು ಸುಗಮಗೊಳಿಸಲಿದೆ.

ಉಡಾನ್‌ ಯೋಜನೆ ಅಡಿ ಏ.18ರಿಂದ ನಿಯಮಿತ ವಿಮಾನದ ಕಾರ್ಯಾಚರಣೆಗಳು ಆರಂಭವಾಗಲಿವೆ. ನಂತರ ಈ ವಿಮಾನದ ಕಾರಾರ‍ಯಚರಣೆಯನ್ನು ಅರುಣಾಚಲದ ಇನ್ನಷ್ಟುಭಾಗಗಳಿಗೆ ವಿಸ್ತರಿಸಲಾಗುತ್ತದೆ.

ಸ್ವದೇಶಿ ವಿಮಾನ ಹಾರಿಸಿದ ಮೊದಲ ಕಂಪನಿ:

ಈವರೆಗೆ ಡಾರ್ನಿಯರ್‌ ವಿಮಾನವನ್ನು ಕೇವಲ ಸೇನಾಪಡೆಗಳು ಬಳಸುತ್ತಿದ್ದವು. ಮೊದಲ ಬಾರಿ ವಾಣಿಜ್ಯದ ಉದ್ದೇಶಕ್ಕಾಗಿ ಅಲಯನ್ಸ್‌ ಏರ್‌ ಕಂಪನಿಯು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ ಈಗ 2 ‘ಡಾರ್ನಿಯರ್‌ 228’ ವಿಮಾನಗಳನ್ನು ಗುತ್ತಿಗೆ ಪಡೆದುಕೊಂಡಿದೆ. ಈ ಪೈಕಿ ಮೊದಲ ವಿಮಾನವನ್ನು ಏ.7ರಂದು ಅಲಯನ್ಸ್‌ ಏರ್‌ಗೆ ಹಸ್ತಾಂತರಿಸಲಾಗಿತ್ತು. ಈ ಮೂಲಕ ಸ್ವದೇಶಿ ನಿರ್ಮಿತ ವಿಮಾನದ ಮೊದಲ ಹಾರಾಟ ಆರಂಭಿಸಿದ ಕಂಪನಿ ಎಂಬ ಖ್ಯಾತಿಗೆ ಅಲಯನ್ಸ್‌ ಏರ್‌ ಪಾತ್ರವಾಗಿದೆ.

Latest Videos
Follow Us:
Download App:
  • android
  • ios