ಹಾರಿ ಹೋಗಿ ಸೈನ್ ಬೋರ್ಡ್‌‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿ ಬಹಿರಂಗವಾಗಿದೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಅಸಲಿ ಕತೆ ಇಲ್ಲಿದೆ. 

ದೆಹಲಿ (ಫೆ.19) ಮಹೀಂದ್ರ ಥಾರ್ ಕಾರು ಎತ್ತರದಲ್ಲಿರುವ ಸೈನ್ ಬೋರ್ಡ್‌ಗೆ ಡಿಕ್ಕಿಯಾಗಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದೆಹಲಿ, ಗುರುಗ್ರಾಂ, ಜೈಪುರ್ ಸೈನ್ ಬೋರ್ಡ್‌ ಎತ್ತರಕ್ಕೆ ಎಗರಿ ಡಿಕ್ಕಿಯಾಗಿರುವ ವಿಡಿಯೋ ಇದಾಗಿದೆ. ಹಲವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಆದರೆ ಇದು ಅಸಲಿ ವಿಡಿಯೋ ಅಲ್ಲ, ಎಐ ಸೃಷ್ಟಿಸಿದ ವಿಡಿಯೋ. ಆದರೆ ಅಸಲಿ ವಿಡಿಯೋದ ರೀತಿ ಸೃಷ್ಟಿಸಲಾಗಿದೆ. ನೈಜ ವಿಡಿಯೋದ ಮೇಲೆ ಎಐ ಮೂಲಕ ಈ ರೀತಿ ಮಾಡಲಾಗಿದೆ. ಇದೇ ಕಾರಣದಿಂದ ಮೊದಲ ನೋಟಕ್ಕೆ ಇದು ಫೇಕ್ ಎನಿಸಿದರೂ ವಿಡಿಯೋ ಸಂಪೂರ್ಣ ನೋಡಿದಾಗ ಅಸಲಿ ಇರಬಹುದೇನು ಎನಿಸದೆ ಇರದು. ಆದರೆ ಇದು ಎಐ ಕರಾಮತ್ತು.

ಎಐ ಮೂಲಕ ಹಲವು ವಿಡಿಯೋಗಳನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಮಾಡಲಾಗುತ್ತಿದೆ. ಹಲವರು ಇದೇ ವಿಡಿಯೋಗಳನ್ನು ನಿಜ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಹಲವು ಅಧಿಕೃತ ಖಾತೆಗಳು ಈ ರೀತಿ ನಕಲಿ ವಿಡಿಯೋ ಪೋಸ್ಟ್ ಮಾಡಿ ಸಂಕಷ್ಟ ಎದುರಿಸಿದೆ. ಇದೀಗ ಥಾರ್ ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಚಿತ್ರೀಕಿರಿಸಿದ ಅಥವಾ ಮೊಬೈಲ್ ಮೂಲಕ ಸೆರೆ ಹಿಡಿದ ನೈಜ ವಿಡಿಯೋದ ಮೇಲೆ ಎಐ ಮೂಲಕ ಈ ರೀತಿ ಸೃಷ್ಟಿ ಮಾಡಲಾಗಿದೆ. ಇದೇ ಕಾರಣದಿಂದ ಮೇಲ್ನೋಟಕ್ಕೆ ಇದು ನಿಜ ಆಗಿರಬಹುದು ಅನ್ನೋ ಗೊಂದಲ ಸೃಷ್ಟಿಯಾಗಲಿದೆ. ವಿಡಿಯೋ ಇತರ ಭಾಗಗಳು ನೈಜತೆಯಿಂದ ಕೂಡಿರುತ್ತದೆ. ಇದೀಗ ಈ ವಿಡಿಯೋ ಕುರಿತು ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ

ಮೀಮ್ಸ್‌ಗೆ ಈ ವಿಡಿಯೋ ಬಳಕೆ

ಇದೀಗ ಸೋಶಿಯಲ್ ಮೀಡಯಾದಲ್ಲಿ ಈ ಎಐ ವಿಡಿಯೋವನ್ನು ಮೀಮ್ಸ್‌ಗೆ ಬಳಕೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲಲ್ಲಿ ಮುಖಭಂಗಕ್ಕೀಡಾಗಿರುವ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಟೀಕಿಸಲು ಈ ಥಾರ್ ವಿಡಿಯೋ ಬಳಕೆ ಮಾಡುತ್ತಿದ್ದಾರೆ. ಗಲ್ಗೋಟಿಯಾ ವಿಶ್ವವಿದ್ಯಾಲ ಚೀನಾ ರೋಬೋಟ್ ಪ್ರದರ್ಶಿಸಿ ಇದು ವಿಶ್ವವಿದ್ಯಾಲಯದ ಉತ್ಪನ್ನ ಎಂದು ಕೊಚ್ಚಿಕೊಂಡಿತ್ತು. ಆದರೆ ಭಾರಿ ಟೀಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಕೇಳಿತ್ತು. ಇತ್ತ ಕೇಂದ್ರ ಸರ್ಕಾರ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಎಐ ಪ್ರದರ್ಶನ ಮಳಿಗೆಯನ್ನು ಮುಚ್ಚಿತ್ತು. ಇದೀಗ ಈ ಥಾರ್ ವಿಡಿಯೋ ಬಳಸಿ ಮೀಮ್ಸ್ ಮಾಡಲಾಗುತ್ತಿದೆ. ಗಲ್ಗೋಟಿಯಾಸ್ ವಿಶ್ವವಿದ್ಯಾಲದ ಡ್ರೈವಿಂಗ್ ಲೈಸೆನ್ಸ್ ತರಬೇತಿ ಪಡೆದ ಡ್ರೈವರ್ ಎಂದು ಮೀಮ್ಸ್ ಮಾಡಲಾಗುತ್ತಿದೆ. ಇನ್ನು ಕೆಲವರು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಡ್ರೈವಿಂಗ್ ಲೈಸೆನ್ಸ್ ವಿಭಾಗದ ಹೆಚ್ಒಡಿ ಕಾರು ಎಂದು ಮೀಮ್ಸ್ ಮಾಡುತ್ತಿದ್ದಾರೆ.

Scroll to load tweet…

Scroll to load tweet…