ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾಗೆ ಗೃಹ ಬಂಧನ ಲಾಂಬಾ ಮನಗೆ ದಿಢೀರ್ ಆಗಮಿಸಿದ ದೆಹಲಿ ಪೊಲೀಸ್  ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪೆ? ಎಂದು ನಾಯಕಿ ಪ್ರಶ್ನೆ

ನವದೆಹಲಿ(ಜು.26): ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಮಹಿಳಾ ಕಿಸಾನ್ ಸಂಸದ್( ರೈತ ಮಹಿಳೆ ಪ್ರತಭಟನೆ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾಗೆ ದೆಹಲಿ ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಗೆ ತೆರೆಳುವ ಮುನ್ನವೆ ಅಲ್ಕಾ ಲಾಂಬಾ ಮನೆಗೆ ದಿಢೀರ್ ಆಗಮಿಸಿದ ಪೊಲೀಸರು ಅಲ್ಕಾ ಲಾಂಬಾರನ್ನು ಗೃಹ ಬಂಧನಲ್ಲಿರಿಸಿದ್ದಾರೆ. ಈ ಕುರಿತು ಸ್ವತ ಅಲ್ಕಾ ಲಾಂಬಾ ಟ್ವಿಟರ್ ಮೂಲಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಟ್ರಾಕ್ಟರ್‌ ಓಡಿಸಿ ಕೃಷಿ ಕಾಯ್ದೆ ವಿರೋಧಿಸಿದ ರಾಹುಲ್ ಗಾಂಧಿ

ಈ ಕುರಿತು ದೆಹಲಿ ಪೊಲೀಸರು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಅಲ್ಕಾ ಲಾಂಬಾ ಜೊತೆಗೆ ಮಾಜಿ ಆಪ್ ಪಕ್ಷದ ಮುಖಂಡರೊಬ್ಬರು ಅಲ್ಕಾ ಲಾಂಬಾ ಗೃಹ ಬಂಧನ ಕುರಿತು ಮಾಹಿತಿ ನೀಡಿದ್ದು, ಬಂಧನವನ್ನು ಖಂಡಿಸಿದ್ದಾರೆ. ಇದೇ ವೇಳೆ ಟ್ವಿಟರ್ ಮೂಲಕ ದೆಹಲಿ ಪೊಲೀಸರ ನಡೆಯನ್ನು ಅಲ್ಕಾ ಲಾಂಬಾ ಪ್ರಶ್ನಿಸಿದ್ದಾರೆ.

तान-शाह के आदेश पर दिल्ली पुलिस ने मुझे मेरे ही घर में बन्दी बना रखा है , पुलिस का कहना है कि मैं जंतर मंतर महिला किसान संसद में हिस्सा लेने, किसानों की मांगों को अपना समर्थन देने नही जा सकती.क्या यह लोकतंत्र की हत्या नही है ??@RahulGandhi@INCIndia#FarmersProtest@OfficialBKUpic.twitter.com/zMq1gmxEHs

— Alka Lamba (@LambaAlka) July 26, 2021

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುಮ ಮಹಿಳಾ ಕಿಸಾನ್ ಸಂಸದ್‌ನಲ್ಲಿ ನಾನು ಪಾಲ್ಗೊಂಡರೆ ಕಾನೂನು ಸುವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ? ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಲು ನಾನು ಮಹಿಲಾ ಕಿಸಾನ್ ಸಂಸಾದ್‌ಗೆ ಭೇಟಿ ನೀಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

मेरे घर की घेरेबंदी .. #HouseArrest#RahulGandhiWithFarmers 👍 pic.twitter.com/G2ZylpYhnW

— Alka Lamba (@LambaAlka) July 26, 2021

ಈ ಕುರಿತು ವಿಡಿಯೋ ಕೂಡಾ ಹರಿಬಿಟ್ಟಿದ್ದಾರೆ. ಕಾನೂನು ಗೌರವಿಸು ನಾನು ಜಂತರ್ ಮಂತರ್‌ನಲ್ಲಿ ಪಾಲ್ಗೊಂಡರೆ ತಪ್ಪೇನು ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. 

Scroll to load tweet…