Asianet Suvarna News Asianet Suvarna News

ಮಹಾತ್ಮ ಗಾಂಧಿ ಮೊಮ್ಮಗ ಇನ್ನಿಲ್ಲ: ಅನಾರೋಗ್ಯದಿಂದ ನಿಧನರಾದ ಅರುಣ್ ಗಾಂಧಿ

89 ವರ್ಷದ ಲೇಖಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರೂ ಆಗಿದ್ದ ಅರುಣ್‌ ಗಾಂಧಿ ಅವರ ಅಂತ್ಯಕ್ರಿಯೆಯನ್ನು ಇಂದೇ  ಕೊಲ್ಲಾಪುರದಲ್ಲಿ ನಡೆಸಲಾಗುವುದು ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.

mahatma gandhi s grandson arun gandhi passes away at 89 ash
Author
First Published May 2, 2023, 1:49 PM IST | Last Updated May 2, 2023, 1:49 PM IST

ಹೊಸದೆಹಲಿ (ಮೇ 2, 2023): ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ಅವರು ಮೇ 2 ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮೃತಪಟ್ಟಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ 89 ವರ್ಷ ವಯಸ್ಸಿನ ಅರುಣ್‌ ಮನಿಲಾ ಗಾಂಧಿ ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
89 ವರ್ಷದ ಲೇಖಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರೂ ಆಗಿದ್ದ ಅರುಣ್‌ ಗಾಂಧಿ  ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಅಂದರೆ ಇಂದೇ  ಕೊಲ್ಲಾಪುರದಲ್ಲಿ ನಡೆಸಲಾಗುವುದು ಎಂದು ಅವರ ಪುತ್ರ ತುಷಾರ್ ಗಾಂಧಿ ಪಿಟಿಐಗೆ ತಿಳಿಸಿದ್ದಾರೆ. ಏಪ್ರಿಲ್ 14, 1934 ರಂದು ದಕ್ಷಿಣ ಆಫ್ರಿಕಾದದ ಡರ್ಬನ್‌ನಲ್ಲಿ  ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದ ಅರುಣ್ ಗಾಂಧಿ, ಕಾರ್ಯಕರ್ತನಾಗಿ ತಮ್ಮ ತಾತ ಮಹಾತ್ಮ ಗಾಂಧಿ ಅವರ ಹೆಜ್ಜೆಗಳನ್ನು ಅನುಸರಿಸಿದರು. 

ಕಳೆದ 24 ವರ್ಷಗಳಿಂದ ಕಾರ್ಯಕರ್ತೆ ಅನುರಾಧಾ ಭೋಸಲೆ ನಡೆಸುತ್ತಿರುವ ಅವನಿ ಸಂಸ್ಥಾ ಎಂಬ ಎನ್‌ಜಿಒಗೆ ಅರುಣ್‌ ಗಾಂಧಿ ಭೇಟಿ ನೀಡುತ್ತಿದ್ದರಂತೆ. ಯುವತಿಯರು, ಮಹಿಳೆಯರು, ಪ್ರಾಥಮಿಕವಾಗಿ ನಿರಾಶ್ರಿತ ಮಹಿಳೆಯರಿಗೆ ಸಹಾಯ ಮಾಡಲು  ಅವನಿ ಸಂಸ್ಥಾ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್‌ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!

ಒಮ್ಮೆ ಅವರು ಅವನಿ ಸಂಸ್ಥಾ ದಿಂದ ಹೊರಡುವ ಕೆಲ ಸಮಯ ಮೊದಲು ಅವರು ಅನಾರೋಗ್ಯಕ್ಕೆ ಒಳಗಾದರು. ಅವರಿಗೆ ಸಾಮಾನ್ಯ ಜ್ವರ ತರಹದ ಪರಿಸ್ಥಿತಿ ಇತ್ತು. ನಾವು ಅವರನ್ನು ಆಸ್ಟರ್ ಆಧಾರ್ ಆಸ್ಪತ್ರೆಗೆ ಸೇರಿಸಿದ್ದೇವೆ. ಅವರು ಗುಣಮುಖರಾಗಿ ಮತ್ತೆ ಅವನಿ ಸಂಸ್ಥಾಗೆ ಮರಳಿದ್ದರು. ಇನ್ನು, ವೈದ್ಯರು ಅವರಿಗೆ ಪ್ರಯಾಣ ಬೇಡವೆಂದು ಹೇಳಿದ್ದ ಕಾರಣ ಅವರು ಅಲ್ಲಿಯೇ ಇದ್ದರು.  ಸೋಮವಾರ ಸಂಜೆ ನಾವು ಮಹಾರಾಷ್ಟ್ರ ದಿನವನ್ನು ಆಚರಿಸಿದ್ದೆವು. ಈ ವೇಳೆ ಅವರು ತಮ್ಮ ರಾಜ್ಯ ಮತ್ತು ದೇಶವನ್ನು ಇತರ ಯಾವುದೇ ವಿಷಯಗಳಲ್ಲಿ ಅತ್ಯಂತ ಪ್ರಿಯವಾಗಿ ಕಾಣುವಂತೆ ಯುವತಿಯರಿಗೆ ಹೇಳಿದ್ದರು. ಇನ್ನು, ಅರುಣ್ ಗಾಂಧಿ ತಡರಾತ್ರಿಯವರೆಗೆ ಬರೆಯುತ್ತಲೇ ಇದ್ದರು ಮತ್ತು ಅವರು ಬೆಳಗ್ಗೆ ತಮ್ಮ ಹಾಸಿಗೆಯ ಮೇಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಅನುರಾಧಾ ಭೋಸಲೆ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. 

ಹಾಗೂ,  ಅರುಣ್ ಗಾಂಧಿ ಅವರೊಂದಿಗೆ ನನಗೆ ಕಳೆದ ಎರಡೂವರೆ ದಶಕಗಳಿಂದ ಒಡನಾಟವಿದೆ, ಅವರು ಪ್ರತಿ ಬಾರಿ ಭೇಟಿ ನೀಡಿದಾಗ ಅವರು ನಮ್ಮೊಂದಿಗೆ ಇರುತ್ತಿದ್ದರು, ಅವರು ಮಹಾತ್ಮಾ ಗಾಂಧಿಯವರ ನೆನಪುಗಳ ಮ್ಯೂಸಿಯಂ ಅನ್ನು ಸ್ಥಾಪಿಸಲು ಬಯಸಿದ್ದರು. ಇದರಲ್ಲಿ ಅವರು ಸಂರಕ್ಷಿಸಿದ ಚಿತ್ರಗಳನ್ನು ಇಡಬೇಕೆಂದೂ ಅಂದುಕೊಂಡಿದ್ರು. ಅರುಣ್‌ ಗಾಂಧಿ ಅವರು ಎರಡು ವರ್ಷಗಳ ಆರಂಭಿಕ ಜೀವನದಲ್ಲಿ ಮಹಾತ್ಮರೊಂದಿಗೆ ಇರುವ ಅದೃಷ್ಟವನ್ನು ಹೊಂದಿದ್ದರು. ಈಗ ಅವರು ಮೃತಪಟ್ಟಿದ್ದು, ಈ ಹಿನ್ನೆಲೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಅವರ ಕನಸನ್ನು ನಾವು ಈಡೇರಿಸುತ್ತೇವೆ. ಮಹಾತ್ಮ ಗಾಂಧಿ ಮಿಷನ್‌ನ ಭೂಮಿ ಲಭ್ಯವಿರುವ ವಾಶಿ ನಂದ್ವಾಲ್‌ನಲ್ಲಿ ಈ ಮ್ಯೂಸಿಯಂ ಸ್ಥಾಪಿಸುತ್ತೇವೆ ಎಂದೂ  ಅನುರಾಧಾ ಭೋಸಲೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Rahul Gandhi Disqualification: ಕೈ ಪ್ರತಿಭಟನೆಯಲ್ಲಿ ಜಗದೀಶ್ ಟೈಟ್ಲರ್ ಭಾಗಿ; ಗಾಂಧಿಗೆ ಅವಮಾನ ಎಂದು ನೆಟ್ಟಿಗರ ಟೀಕೆ

ಈ ಮಧ್ಯೆ, ತುಷಾರ್ ಗಾಂಧಿಯವರು ತಮ್ಮ ತಂದೆಯ ಅಂತಿಮ ಸಂಸ್ಕಾರದ ಸಮಯದಲ್ಲಿ ಭಾಗಿಯಾಗಲು ಕೊಲ್ಲಾಪುರಕ್ಕೆ ಪ್ರಯಾಣಿಸುತ್ತಿದ್ದು, ವಾಶಿ ನಂದ್ವಾಲ್‌ನಲ್ಲೇ ಈ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಸತ್ಯ’ ಬದಲು ‘ಸತ್ತಾ’ ಎಂದ ರಾಹುಲ್‌ ಗಾಂಧಿ: ಬಿಜೆಪಿ ಅಣಕ

Latest Videos
Follow Us:
Download App:
  • android
  • ios