ರಾಜ್ಯಪಾಲರ ವಿಶ್ವಾಸಮತ ಆದೇಶ ಪ್ರಶ್ನಿಸಿದ್ದ ಸಿಎಂ ಉದ್ದವ್ ಠಾಕ್ರೆವಿಶ್ವಾಸ ಮತ ಯಾಚನೆಗೆ ತಡೆ ನೀಡಲು ಸುಪ್ರೀಂ ನಕಾರಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಹಿನ್ನಡೆ
ನವದೆಹಲಿ(ಜೂ.29): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಿಂದ ಪಾರಾಗಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಸಿಎಂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ರಾಜ್ಯಪಾಲರು ನೀಡಿದ್ದ ವಿಶ್ವಾಸಮತ ಯಾಚನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಠಾಕ್ರೆಗೆ ಶಾಕ್ ಎದುರಾಗಿದೆ. ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಉದ್ಧವ್ ಠಾಕ್ರೆ ಅರ್ಜಿ ತರಿಸ್ಕರಿಸಿದ ಸುಪ್ರೀಂ ಕೋರ್ಟ್ ವಿಶ್ವಾಸಮತ ಯಾಚನೆಗೆ ತಡೆ ನೀಡಲು ನಿರಾಕರಿಸಿದೆ. ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ಮುಗಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಇದರ ಜೊತೆಗೆ ಜೈಲಿನಲ್ಲಿರುವ ಮೈತ್ರಿ ಸರ್ಕಾರದ ಇಬ್ಬರು ಸಚಿವರಿಗೆ ವಿಶ್ವಾಸಮತ ಯಾಚನೆಯಲ್ಲಿ ಮತ ಹಾಕಲು ಕೋರ್ಟ್ ಅವಕಾಶ ನೀಡಿದೆ.
ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!
ಇಡಿ ಕಸ್ಟಡಿಯಲ್ಲಿರುವ ನವಾಬ್ ಮಲಿಕ್ ಹಾಗೂ ಅನಿಲ್ ದೇಶ್‌ಮುಖ್‌ಗೆ ಮತ ಚಲಾಯಿಸಲು ಅವಕಾಶ ನೀಡಿದೆ. ಮತಚಲಾವಣೆ ಬಳಿಕ ಮತ್ತೆ ಇಡಿ ಕಸ್ಟಡಿಗೆ ತೆರಳಬೇಕು ಎಂದು ಸೂಚಿಸಲಾಗಿದೆ.
ಹೀಗಾಗಿ ನಾಳೆ ಉದ್ಧವ್ ಠಾಕ್ರೆ ಸರ್ಕಾರ ವಿಶ್ವಾಸಮತ ಯಾಚನೆ ಮಾಡಬೇಕಿದೆ. ಈಗಾಗಲೇ ಬಹುಮತ ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಸರ್ಕಾರ ವಿಶ್ವಾಸಮತ ಯಾಚನೆ ಮಾಡಿದರೆ ಸರ್ಕಾರ ಪತನ ಬಹುತೇಕ ಖಚಿತವಾಗಿದೆ. ಹೀಗಾಗಿ ಈ ಮುಖಭಂಗ ತಪ್ಪಿಸಲು ಇಂದು ರಾಜೀನಾಮೆ ನೀಡಲು ಉದ್ಧವ್ ಠಾಕ್ರೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಭಾವನಾತ್ಮಕ ಭಾಷಣದ ಮೂಲಕ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಹೊಸ ದಾಳ ಉರುಳಿಸಿದ ಠಾಕ್ರೆ-ಪವಾರ್, ಬಂಡಾಯ ನಾಯಕ ಶಿಂಧೆಗೆ ಸಿಎಂ ಹುದ್ದೆ ಆಫರ್!
ಮೈತ್ರಿ ಪಕ್ಷದ ಭಾಗವಾಗಿದ್ದ ಶಿವಸೇನೆ ನಾಯಕ ಏಕನಾಥ್ ಶಿಂದೆ ಬಂಡಾಯದ ಬಾವುಟ ಹಾರಿಸಿದ್ದರು. ಮತ್ತಷ್ಟು ಬಂಡಾಯ ಶಾಸಕರ ಜೊತೆಗೂಡಿ ಅಸ್ಸಾಂನ ಗುವಹಾಟಿಗೆ ತೆರಳಿ ರಾಜಕೀಯ ಸಂಚಲನ ಸೃಷ್ಟಿಸಿದರು. ಇತ್ತ ಸರ್ಕಾರಕ್ಕೆ ಬಹುಮತ ಕಳೆದುಕೊಂಡಿದೆ ಎಂದು ಘೋಷಿಸಿದ್ದರು. ಇತ್ತ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಭೇಟಿಯಾಗಿ ವಿಶ್ವಾಸಮತ ಯಾಚನೆಗೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ರಾಜ್ಯಾಪಲರು ಜೂನ್ 30ಕ್ಕೆ ವಿಶ್ವಾಸಮತ ಯಾಚನೆ ಮಾಡಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದ್ದರು. ವಿಶ್ವಾಸ ಮತಯಾಚನೆ ಮಾಡಿದರೆ ಸರ್ಕಾರ ಪತನವಾಗಲಿದೆ ಎಂಬದು ಅರಿತ ಉದ್ದವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯಪಾಲ ವಿಶ್ವಾಸಮತ ಯಾಚನೆ ಆದೇಶ ಅಸಂವಿಧಾನಿಕ ಎಂದು ಕೋರ್ಟ್‌ನಲ್ಲಿ ವಾದಿಸಲಾಗಿತ್ತು. ಆದರೆ ಈ ವಾದವನ್ನು ಕೋರ್ಟ್ ಮಾನ್ಯ ಮಾಡಿಲ್ಲ. ಸರ್ಕಾರ ವಿಶ್ವಾಸ ಕಳೆದುಕೊಂಡಿರುವ ಕಾರಣ ಜೂನ್ 30ರ ಸಂಜೆ 5 ಗಂಟೆ ಒಳಗೆ ವಿಶ್ವಾಸಮತ ಯಾಚನೆಗೆ ಸೂಚಿಸಿದೆ
