ಮಾದರಿಯಾದ ಗ್ರಾಮ: 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಕೊಟ್ಟಾಯ್ತು..!
ಲಸಿಕೆ ಅಭಿಯಾನದಲ್ಲಿ ಸಕ್ಸಸ್ ಆದ ಗ್ರಾಮ | 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯ ಸುರಕ್ಷಾ ಕವಚ
ಮುಂಬೈ(ಮೇ.09): ಲಸಿಕೆ ಅಭಿಯಾನದ ವಿಚಾರದಲ್ಲಿ ಹಲವು ರಾಜ್ಯ, ಜಿಲ್ಲೆಗಳು ಬಹಳಷ್ಟು ಅಡೆತಡೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎಲ್ಲರಿಗೂ ಮಾದರಿಯಾಗಿ ಗ್ರಾಮವೊಂದು ಸಂಪೂರ್ಣ ಅಭಿಯಾನವನ್ನು ಸಕ್ಸಸ್‌ಫುಲ್ ಆಗಿ ಮುಗಿಸಿದೆ. ಔರಂಗಾಬಾದ್‌ನ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕೆಲಸ ಮುಗಿದಿದ್ದು, ಈ ಮೂಲಕ 100% ಲಸಿಕೆ ಸುರಕ್ಷತೆಯನ್ನು ಹೊಂದಿದ ಗ್ರಾಮವಾಗಿ ಮೂಡಿಬಂದಿದೆ.
ನಗರಗಳಿಂತ ಭಿನ್ನವಾಗಿ ಗ್ರಾಮ ಪ್ರದೇಶದಲ್ಲಿ ಲಸಿಕೆ ಕುರಿತ ಮೂಢನಂಬಿಕೆ, ಭೀತಿ, ಸುಳ್ಳುಸುದ್ದಿಗಳನ್ನು ಮೀರಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿರುವುದು ಸಾಧನೆಯೇ ಸರಿ. ಈ ಗ್ರಾಮದಲ್ಲಿ ಕೌನ್ಸಿಲ್ ಲಸಿಕೆಗಾಗಿ 45 ವರ್ಷ ಮೇಲ್ಪಟ್ಟವರಲ್ಲಿ ಆಧಾರ್ ಕಾರ್ಡ್ ಕೇಳಿದಾಗ ಬರೀ 5 ಜನರಷ್ಟೇ ಆಧಾರ್‌ಕಾರ್ಡ್ ತಂದುಕೊಟ್ಟಿದ್ದರು. ನಂತರ ಈ ಕುರಿತು ವಿಚಾರಿಸಿದಾಗ ಜನರ ಅಪನಂಬಿಕೆಯ ಬಗ್ಗೆ ತಿಳಿದಿದೆ.
ಆಸ್ಪತ್ರೆ ದಾಖಲಾತಿಗೆ ಕೋವಿಡ್ ವರದಿ ಕಡ್ಡಾಯವಲ್ಲ!
ಲಸಿಕೆ ತೆಗೆದು ಜನರು ಸತ್ತಿದ್ದಾರೆ ಎಂಬಂತಹ ಸುಳ್ಳು ವಿಡಿಯೋ ನೋಡಿದ ಜನರು ಭೀತಿಗೊಳಗಾಗಿದ್ದರು. ಇನ್ನೂ ಕೆಲವರಿಗೆ ಲಸಿಕೆ ತೆಗೆದುಕೊಂಡ ನಂತರ ತೋಳುಗಳಿಗೆ ಸಮಸ್ಯೆಯಾಗಿದೆ ಎನ್ನಲಾಗಿತ್ತು. ಕೆಲವು ಜನರು ಧಾರ್ಮಿಕ ಕಟ್ಟುಪಾಡುಗಳ ಕಾರಣ ಹೇಳಿದರೆ, ಮಹಿಳೆಯರು ಅವರದ್ದೇ ಆದ ಸಮಸ್ಯೆಗಳನ್ನು ಹೇಳಲಾರಂಭಿಸಿದ್ದರು.
ನಂತರದಲ್ಲಿ ಲಸಿಕೆ ಕುರಿತು ಜಾಗೃತಿ ಶಿಬಿರಗಳನ್ನು ನಡೆಸಲಾಯ್ತು. ಏಪ್ರಿಲ್ 27ರಂದು ಜನುಮ ಜಯಂತಿ ದಿನ ದೇವಾಲಯದ ಆವರಣದಲ್ಲಿ ಜನ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಗ್ರಾಮಸ್ಥರನ್ನು ಮನವರಿಕೆ ಮಾಡಲು ಬರೋಬ್ಬರಿ ಒಂದು ತಿಂಗಳು ಸಮಯ ಹಿಡಿದಿತ್ತು. ಆದರೆ ಈಗ ಗ್ರಾಮಸ್ಥರು ಹೆಮ್ಮೆ ಪಡುತ್ತಿದ್ದಾರೆ.