* ಕೊರೋ​ನಾ ಸೋಂಕು ನಿಯಂತ್ರ​ಣಕ್ಕೆ ಹೇರ​ಲಾದ ಲಾಕ್‌​ಡೌನ್‌* 5 ಹಂತಗಳಲ್ಲಿ ಮಹಾ​ ಅನ್‌​ಲಾಕ್‌?* ರಾಜ್ಯದ 36 ಜಿಲ್ಲೆಗಳು 5 ವಿಭಾಗಗಳಾಗಿ ವಿಂಗಡನೆ

ಮುಂಬೈ(ಜೂ.05): ಕೊರೋ​ನಾ ಸೋಂಕು ನಿಯಂತ್ರ​ಣಕ್ಕೆ ಹೇರ​ಲಾದ ಲಾಕ್‌​ಡೌನ್‌ ಅನ್ನು 5 ಹಂತ​ಗ​ಳಲ್ಲಿ ತೆರವು ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಅತೀ ಕಡಿಮೆ ಕೇಸ್‌, ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳ ಆಧಾರದ ಮೇಲೆ, ಅವುಗಳನ್ನು ಹಂತಹಂತವಾಗಿ ಅನ್‌ಲಾಕ್‌ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಹಂತದ ಅನ್‌ಲಾಕ್‌ ಶುಕ್ರವಾರದಿಂದಲೇ ಆರಂಭವಾಗಲಿದೆ ಎಂದು ಸಚಿವ ವಿಜಯ್‌ ವಾಡೆಟ್ಟಿವಾರ್‌ ಹೇಳಿದ್ದಾದರೂ, ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ, ಇಂಥ ಪ್ರಸ್ತಾವನೆ ಸರ್ಕಾರದ ಚಿಂತನೆ ಹಂತದಲ್ಲಿದೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ.

ಮೊದಲ ಹಂತ

ಶೇ.5ಕ್ಕಿಂತ ಕಡಿಮೆ ಪಾಸಿ​ಟಿ​ವಿಟಿ ದರ ಹಾಗೂ ಆಮ್ಲ​ಜ​ನಕ ವ್ಯವ​ಸ್ಥೆಯ ಹಾಸಿ​ಗೆ​ಗಳ ಬೇಡಿಕೆ ಶೇ.25ಕ್ಕಿಂತ ಕಡಿಮೆ ಇರುವ ಜಿಲ್ಲೆ​ಗ​ಳಲ್ಲಿ ಲಾಕ್‌​ಡೌನ್‌ ಪೂರ್ತಿ ತೆರ​ವು. ಇಲ್ಲಿ ರೆಸ್ಟೋ​ರೆಂಟ್‌​, ಮಾಲ್‌​, ಸ್ಥಳೀಯ ರೈಲು, ಸಾರ್ವ​ಜ​ನಿಕ ಸ್ಥಳ​, ಪ್ರವಾಸಿ ತಾಣ​, ​ಥಿ​ಯೇ​ಟ​ರ್‌​, ಶೂಟಿಂಗ್‌, ಸಾಮಾ​ಜಿಕ ಮನೋ​ರಂಜನೆ, ಮದುವೆ, ಜಿಮ್‌, ಸಲೂನ್‌, ಬ್ಯೂಟಿ ಪಾರ್ಲ​ರ್‌​ಗ​ಳಿಗೆ ಅನುಮತಿ.

ಎರಡನೇ ಹಂತ

ಸಾಮಾನ್ಯ ಪ್ರಮಾ​ಣ​ದ​ಲ್ಲಿ ಸೋಂಕು ಇರುವ ಜಿಲ್ಲೆ​ಗ​ಳಲ್ಲಿ ಅಥವಾ ನಗ​ರ​ಗ​ಳಲ್ಲಿ ಜಿಮ್‌, ಸಲೂನ್‌, ಬ್ಯೂಟಿ ಪಾರ್ಲ​ರ್‌​ಗಳ ಕಾರಾರ‍ಯ​ರಂಭಕ್ಕೆ ಅನು​ಮತಿ. ಆದರೆ ಶೇ.50ರಷ್ಟುಜನರ ಪ್ರವೇ​ಶಕ್ಕೆ ಮಾತ್ರ ಅವ​ಕಾಶ. ಮದುವೆ ಸೇರಿ ಇನ್ನಿ​ತರ ಕಾರ್ಯ​ಕ್ರ​ಮ​ಗ​ಳಲ್ಲಿ ಇಂತಿಷ್ಟೇ ಜನ ಭಾಗಿ​ಯಾ​ಗಿ​ರ​ಬೇ​ಕೆಂಬ ನಿಯಮ. ಸೆಕ್ಷನ್‌ 144ರಡಿ ನಿಷೇ​ಧಾಜ್ಞೆ ಜಾರಿ​ಯ​ಲ್ಲಿ​ರ​ಲಿದೆ.

ಮೂರನೇ ಹಂತ

ಸಾಮಾ​ನ್ಯ​ಕ್ಕಿಂತ ಹೆಚ್ಚಿನ ಪ್ರಕರಣ ಇರುವ ಜಿಲ್ಲೆ​ಗ​ಳಲ್ಲಿ ಈ ಅನ್‌​ಲಾಕ್‌ ಪ್ರಕ್ರಿಯೆ ಜಾರಿ​ಯಾ​ಗು​ತ್ತದೆ. ಈ ಹಂತ​ದ ವ್ಯಾಪ್ತಿಯ ಜಿಲ್ಲೆ​ಗ​ಳಲ್ಲಿ ಕೆಲವು ನಿರ್ಬಂಧ​ಗಳು ಮುಂದು​ವ​ರಿ​ಯ​ಲಿವೆ.

ನಾಲ್ಕನೇ ಹಂತ

ಪುಣೆ ಮತ್ತು ರಾಯ್‌​ಗಢ ಜಿಲ್ಲೆ​ಗ​ಳಲ್ಲಿ 4ನೇ ಹಂತದ ಅನ್‌​ಲಾಕ್‌ ಕ್ರಮ ಜಾರಿ​ಗೊ​ಳಿ​ಸ​ಲಾ​ಗು​ತ್ತದೆ.

ಐದನೇ ಹಂತ

ಈ ಹಂತದ ವ್ಯಾಪ್ತಿಗೆ ಬರುವ ನಗರ ಮತ್ತು ಜಿಲ್ಲೆ​ಗ​ಳಲ್ಲಿ ಹೆಚ್ಚು ಸೋಂಕು ಇರುವ ಕಾರಣ ಈ ಭಾಗ​ದ ಜನರ ಪ್ರಯಾ​ಣಕ್ಕೆ ಇ-ಪಾಸ್‌​ಗಳ ಅಗ​ತ್ಯ​ವಿ​ರ​ಲಿದೆ. ಆದರೆ ಅಂತ​ರ್‌​ರಾಜ್ಯ ಪ್ರಯಾ​ಣಕ್ಕೆ ಆರ್‌​ಟಿ​ಪಿ​ಸಿ​ಆರ್‌ ಪರೀ​ಕ್ಷೆಯ ಅಗ​ತ್ಯ​ವಿ​ರು​ವು​ದಿಲ್ಲ.