Asianet Suvarna News Asianet Suvarna News

ಗರಿಷ್ಠ ಕೊರೋನಾ ಕೇಸ್ ; ಇಲ್ಲಿದೆ ಅಪಾಯದಲ್ಲಿರುವ ರಾಜ್ಯದ ಲಿಸ್ಟ್!

ದೇಶದಲ್ಲಿ ಕೊರೋನಾ ಕೇಸ್ ಇದೀಗ ಪ್ರತಿ ದಿನ 4 ಲಕ್ಷ ದಾಟಿದೆ. ಈ ಮೂಲಕ ಒಟ್ಟು ಕೊರೋನಾ ಕೇಸ್ 2.14 ಕೋಟಿಗೆ ತಲುಪಿದೆ. ಪರಿಣಾಮ ಸೋಂಕಿತರ ಚಿಕಿತ್ಸೆ ಸೇರಿದಂತೆ ಇತರ ಸಮಸ್ಯೆಗಳ ಸರಮಾಲೆ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ಭಾರತದಲ್ಲಿ ಅಪಾಯದ ಮಟ್ಟದಲ್ಲಿರುವ ರಾಜ್ಯಗಳ ಕುರಿತ ವಿವರ ಇಲ್ಲಿದೆ.

Maharashtra to Karnataka coronavirus situation remains grim in India ckm
Author
Bengaluru, First Published May 7, 2021, 9:24 PM IST

ನವದೆಹಲಿ(ಮೇ.07): ಭಾರತದ ಕೊರೋನಾ ಪ್ರಕರಣಗಳಲ್ಲಿ ಕೆಲ ರಾಜ್ಯಗಳ ಕೊಡುಗೆ ಹೆಚ್ಚಿನ ಪ್ರಮಾಣದ್ದಾಗಿದೆ. ಅದರಲ್ಲೂ ಮಹಾರಾಷ್ಟ್ರ, ಕರ್ನಾಟಕ, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ. ಲಾಕ್‌ಡೌನ್ ಹೇರಲಾಗಿದೆ. ಕಠಿಣ ನಿಯಮ ಜಾರಿಯಲ್ಲಿದ್ದರೂ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿಲ್ಲ. 

ಕರ್ನಾಟಕ ಲಾಕ್​ಡೌನ್: ಏನಿರತ್ತೆ? ಏನಿರಲ್ಲ? ಇಲ್ಲಿದೆ ಹೊಸ ಗೈಡ್‌ಲೈನ್ಸ್

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36 ಲಕ್ಷ. ಇದರಲ್ಲಿ ಮಹಾರಾಷ್ಟ್ರ ಪಾಲು ಪ್ರಮುಖವಾಗಿದೆ. ಆದರೆ ಮುಂಬೈನಲ್ಲಿ ಪ್ರಕರಣ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 3,039 ಹೊಸ ಪ್ರಕರಣ ಹಾಗೂ 71 ಸಾವು ಸಂಭವಿಸಿದೆ. ಆದರೆ ನಿಜಕ್ಕೂ ಅಪಾಯದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಕರ್ನಾಟಕ:
ಕಳೆದ 24 ಗಂಟೆಯಲ್ಲಿ  48,781 ಹೊಸ ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. 592 ಸಾವು ಸಂಭವಿಸಿದೆ. ಈ ಮೂಲಕ ಕರ್ನಾಟಕದ ಕೊರೋನಾ ಸಂಖ್ಯೆ 18.38 ಲಕ್ಷ ಕ್ಕೇರಿದೆ. ನಿಯಂತ್ರಣ ತಪ್ಪಿರುವ ಕಾರಣ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಾಗಿದೆ.

ಕೇರಳ:
ಕೇರಳದಲ್ಲಿ ಕೊರೋನಾ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೇರಳದಲ್ಲಿ 38,460 ಕೇಸ್ ದಾಖಲಾಗಿದ್ದರೆ, 54 ಮಂದಿ ಕೊರೋನಾಗ ಬಲಿಯಾಗಿದೆ. ಇನ್ನು ಕೇರಳದಲ್ಲೂ ಲಾಕ್‌ಡೌನ್ ಹೇರಲಾಗಿದೆ.

ತಮಿಳುನಾಡು:
ಹೊಸ ಸರ್ಕಾರ ರಚನೆಯಾಗಿರುವ ತಮಿಳುನಾಡಿಲ್ಲಿ ಕಳೆದ 24 ಗಂಟೆಯಲ್ಲಿ 26,465 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. 197 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲೂ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.

ದೆಹಲಿ ಆಕ್ಸಿಜನ್ ಸಮಸ್ಯೆ ಅಂತ್ಯ, 3 ತಿಂಗಳಲ್ಲಿ ಸಂಪೂರ್ಣ ಲಸಿಕೆ ಅಭಿಯಾನ!

ದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ 19,832 ಪ್ರಕರಣ ದಾಖಲಾಗಿದೆ. 341 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸಕ್ರೀಯ ಪ್ರಕರಣ ಸಂಖ್ಯೆ 91,035ಕ್ಕೇರಿದೆ.

ರಾಜಸ್ಥಾನ
ಕಳೆದ 24 ಗಂಟೆಯಲ್ಲಿ ರಾಜಸ್ಥಾನದಲ್ಲಿ 18,231 ಕೇಸ್ ದಾಖಲಾಗಿದೆ. ಇನ್ನು 164 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಒಟ್ಟು ಕೊರೋನಾ ಸಂಖ್ಯೆ  7.20 ಲಕ್ಷಕ್ಕೇರಿದೆ. 

Follow Us:
Download App:
  • android
  • ios