ನವದೆಹಲಿ(ಮೇ.07):  ಕೊರೋನಾ ವೈರಸ್ ಸಂಖ್ಯೆ ಹೆಚ್ಚಳದಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದರೆ ಕೇಂದ್ರ ಸರ್ಕಾರ ಇದೀಗ ದೆಹಲಿಯಲ್ಲಿ ಉದ್ಭವಿಸಿದ ಆಕ್ಸಿಜನ್ ಸಮಸ್ಯೆಯನ್ನು ನಿವಾರಿಸುವಲ್ಲಿ ಕೇಂದ್ರ ಯಶಸ್ವಿಯಾಗಿದೆ. ವಿದೇಶಗಳಿಂದ ಬಂದ ಆಕ್ಸಿಜನ್, ಉತ್ಪಾದಕ ಘಟಕ, ನೈಟ್ರೋಜನ್ ಪರಿವರ್ತಿಸಿ ಆಕ್ಸಿಜನ್ ಸೇರಿದಂತೆ ಹಲವು ಕ್ರಮಗಳಿಂದ ದೆಹಲಿಯಲ್ಲಿ ಆಮ್ಲಜನಕ ಸಮಸ್ಯೆ ಅಂತ್ಯಗೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸೋಂಕಿತರಿಗಿಂತ ಚೇತರಿಕೆ ಪ್ರಮಾಣವೇ ಹೆಚ್ಚು!.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಅಂತ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.  ಯಾರೂ ಕೂಡ ಬೆಡ್ ಇಲ್ಲದೆ, ಆಕ್ಸಿಜನ್ ಇಲ್ಲದೆ ಸಮಸ್ಯೆ ಎದುರಿಸುವುದಿಲ್ಲ. ದೆಹಲಿ ಎಲ್ಲಾ ಕೊರತೆಗಳನ್ನ ನೀಗಿಸಿಕೊಂಡಿದೆ ಎಂದಿದ್ದಾರೆ.

ಮುಂದಿನ 3 ತಿಂಗಳಲ್ಲಿ ದೆಹಲಿಯಲ್ಲಿ ಸಂಪೂರ್ಣ ವ್ಯಾಕ್ಸಿನೇಷನ್ ನಡೆಸಲು ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ತ್ವರಿತಗತಿಯಲ್ಲಿ ಲಸಿಕೆ ನೀಡಿ ದೆಹಲಿಯನ್ನು ಕೊರೋನಾ 3ನೇ ಅಲೆಯಿಂದ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ!

ದೆಹಲಿ ಆಕ್ಸಿಜನ್ ಸಮಸ್ಯೆ ಅಂತ್ಯವಾಗಿದೆ. ಆದರೆ ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಹಾಹಾಕಾರ ಇನ್ನೂ ಇದೆ. ಹೀಗಾಗಿ ಕೇಂದ್ರ ಸರ್ಕಾರ ಇತರ ರಾಜ್ಯಗಳ ಸಮಸ್ಯೆಯನ್ನು ಶೀಘ್ರದಲ್ಲೇ ಅಂತ್ಯಗೊಳಿಸಬೇಕಿದೆ.