Woman Dies Instantly as Boulder Crushes Car Sunroof in Tragic Tamhini Ghat Accident ತಮ್ಹಿನಿ ಘಾಟ್‌ನಲ್ಲಿ ಚಲಿಸುತ್ತಿದ್ದ ಕಾರಿನ ಸನ್‌ರೂಫ್ ಮೇಲೆ ಬಂಡೆ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮುಂಬೈ (ಅ.30): ಭೀಕರ ಅಪಘಾತವೊಂದರಲ್ಲಿ, ಚಲಿಸುತ್ತಿದ್ದ ಕಾರಿನ ಮೇಲೆ ದೊಡ್ಡ ಬಂಡೆಯೊಂದು ಬಿದ್ದಿದೆ. ಕಾರ್‌ನ ಸನ್‌ರೂಫ್ ಮೇಲೆ ಬಂಡೆ ಬಿದ್ದ ಪರಿಣಾಮವಾಗಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಮಹಾರಾಷ್ಟ್ರದ ಘಾಟ್ ಪ್ರದೇಶದ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ.
ಮಹಿಳೆಯೊಬ್ಬರು ಪುಣೆಯಿಂದ ಮಂಗಾವ್‌ಗೆ ತಮ್ಮ ವೋಕ್ಸ್‌ವಾಗನ್ ವರ್ಟಸ್ ಕಾರ್‌ನಲ್ಲಿ ಪ್ರಯಾಣ ಮಾಡುವಾಗ ಕಾರ್‌ನ ಮೇಲೆ ದೊಡ್ಡ ಬಂಡೆ ಬಿದ್ದಿತು. ಕಾರ್‌ನ ಸನ್‌ರೂಫ್ ಮೇಲೆ ಬಂಡೆ ಬಿದ್ದಿದ್ದ ಪರಿಣಾಮವಾಗಿ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯೆ ನೇರವಾಗಿ ಬಂಡೆ ಬಡಿದಿದೆ. ಬಂಡೆ ನೇರವಾಗಿ ಮಹಿಳೆಯ ತಲೆಗೆ ಬಡಿದ ಪರಿಣಾಮವಾಗಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಮೃತ ಮಹಿಳೆಯನ್ನು 43 ವರ್ಷದ ಸ್ನೇಹಲ್ ಗುಜರಾತಿ ಎಂದು ಗುರುತಿಸಲಾಗಿದೆ.
ಮುಂಬೈನಲ್ಲಿ ಪ್ರತ್ಯೇಕ ಘಟನೆ
ಪ್ರತ್ಯೇಕ ಘಟನೆಯಲ್ಲಿ, ಬುಧವಾರ ಬೆಳಿಗ್ಗೆ ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್ ಬೆಂಕಿಗೆ ಆಹುತಿಯಾಯಿತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೆದ್ದಾರಿಯ ನಾಗ್ಪುರ ಲೇನ್‌ನಲ್ಲಿ ಈ ಘಟನೆ ಸಂಭವಿಸಿದೆ. ಅದರಲ್ಲಿ ಚಾಲಕ ಮತ್ತು ಸಹಾಯಕರ ಜೊತೆಗೆ 12 ಪ್ರಯಾಣಿಕರಿದ್ದರು. ಚಾಲಕ ತಕ್ಷಣ ಬಸ್ ಅನ್ನು ಖಾಲಿ ಮಾಡಿ ಪ್ರಯಾಣಿಕರ ಜೀವಗಳನ್ನು ಉಳಿಸಿದ್ದಾನೆ.
ಈ ತಿಂಗಳ ಆರಂಭದಲ್ಲಿ, ಅಕ್ಟೋಬರ್ 18 ರಂದು ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಮಿನಿ ಟ್ರಕ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು 15 ಜನರು ಗಾಯಗೊಂಡಿದ್ದರು.
ಸುಮಾರು 40 ಜನರನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್ ಯಾತ್ರಾ ಸ್ಥಳದಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
