* ರಾಜ್ಯದಲ್ಲಿ ಮಹಾ ಅಘಾಡಿ ಸರ್ಕಾರ ಪತನ* ಠಾಕ್ರೆಗೆ ಶಾಕ್‌ ಕೊಟ್ಟಿದ್ದ ಶಿಂಧೆಯಿಂದ ಇದೀಗ ಮತ್ತೊಂದು ಪೆಟ್ಟು* ಶಿವಸೇನೆಯ ಕವಕ್ತಾರೆ ಶಿಂಧೆ ಬಣಕ್ಕೆ

ಮುಂಬೈ(ಜು.13): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಮತ್ತೊಂದು ಹೊಡೆತವಾಗಿ, ಪಕ್ಷದ ವಕ್ತಾರ ಮತ್ತು ಮುಂಬೈನ ಮಾಜಿ ಕೌನ್ಸಿಲರ್ ಶೀತಲ್ ಮಾತ್ರೆ ಮಂಗಳವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳಯಕ್ಕೆ ಸೇರಿದರು. ಶಿಂಧೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮುಂಬೈನ ಮೊದಲ ಮಾಜಿ ಶಿವಸೇನೆ ಕೌನ್ಸಿಲರ್ ಶೀತಲ್ ಮ್ಹಾತ್ರೆಯವರು 2012 ಮತ್ತು 2017 ರಲ್ಲಿ ಉತ್ತರ ಮುಂಬೈನ ಉಪನಗರದ ದಹಿಸರ್‌ನಲ್ಲಿ ವಾರ್ಡ್ ಸಂಖ್ಯೆ 7 ಅನ್ನು ಪ್ರತಿನಿಧಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರ ಸಂಪುಟದಲ್ಲಿ ಬಿಜೆಪಿಯ 25, ಶಿಂಧೆ ಟೀಮ್‌ನ 12 ಸಚಿವರು?

ಮ್ಹಾತ್ರೆ ಅವರು ಕೆಲವು ಶಿವಸೇನಾ ಕಾರ್ಯಕರ್ತರೊಂದಿಗೆ ಮಂಗಳವಾರ ರಾತ್ರಿ ಶಿಂಧೆ ಅವರ ನಿವಾಸಕ್ಕೆ ತೆರಳಿ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಠಾಕ್ರೆ ನೇತೃತ್ವದ ಶಿವಸೇನೆ ಅಲಿಬಾಗ್-ಪೆನ್ ಪ್ರದೇಶಕ್ಕೆ ಸಂಪರ್ಕ್ ಸಂಯೋಜಕರಾಗಿ (ಸಂಯೋಜಕ) ಮ್ಹಾತ್ರೆ ಅವರನ್ನು ನೇಮಿಸಿತ್ತು. 

Scroll to load tweet…

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದಲ್ಲಿ ಇಂಧನ ಅಗ್ಗ!

ಇನ್ನು ಕೆಲವೇ ತಿಂಗಳುಗಳಲ್ಲಿ ಶಿವಸೇನೆ ಹಿಡಿತದಲ್ಲಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಚುನಾವಣೆ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಹೀಗಿರುವಾಗಲೇ ಮ್ಹಾತ್ರೆ ಶಿಂಧೆ ಬಣ ಸೇರಿರುವುದು ಶಿವಸೇನೆಗೆ ಬಹುದೊಡ್ಡ ಹೊಡೆತ ನೀಡಲಿದೆ. ಇನ್ನು ಕಳೆದ ತಿಂಗಳು ಶಿಂಧೆ ಅವರ ಬಂಡಾಯದಿಂದಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು ಎಂಬುದು ಗಮನಾರ್ಹ.