ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ, ಮಹಾರಾಷ್ಟ್ರದ ‘ಮಾಝಿ ಲಡ್ಕಿ ಬಹಿನ್‌ ಯೋಜನೆ’ಯ ಪುನರ್‌ ಪರಿಶೀಲನೆ ನಡೆಸಲಾಗಿದೆ. ಈ ಪರಿಶೀಲನೆ ಬಳಿಕ, 14,000 ಪುರುಷರು ಸೇರಿದಂತೆ ಒಟ್ಟು 92 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.

ಮುಂಬೈ: ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 1.5 ಸಾವಿರ ರು. ಹಣಕಾಸು ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ‘ಮಾಝಿ ಲಡ್ಕಿ ಬಹಿನ್‌ ಯೋಜನೆ’ಯಿಂದ 92 ಲಕ್ಷ ಅನರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ. ಇವರಲ್ಲಿ 14 ಸಾವಿರ ಪುರುಷರೂ ಇದ್ದರು ಎಂಬುದು ಗಮನಾರ್ಹ.

ಆರಂಭದಲ್ಲಿ ಯೋಜನೆಯಡಿ 2.4 ಕೋಟಿ ಫಲಾನುಭವಿಗಳಿದ್ದರು. ಯೋಜನೆ ಕುರಿತು ಪುನರ್‌ ಪರಿಶೀಲನೆ ನಡೆಸಿದ ಬಳಿಕ ಆದಾಯ ತೆರಿಗೆ ಪಾವತಿಸುತ್ತಿರುವವರು, ಅನರ್ಹರೂ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಇ-ಕೆವೈಸಿ ಮಾಡಿದ ತರುವಾಯ ಶೇ.38ರಷ್ಟು ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.

14, 000 ಮಂದಿ ಪುರುಷರು

ಸುಮಾರು 50ರಿಂದ 55 ಲಕ್ಷ ಮಂದಿ ಮಹಿಳೆಯರು ನಿಗದಿತ ಅವಧಿ (8 ತಿಂಗಳು)ಯೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳುವಲ್ಲಿ ವಿಫಲವಾಗಿದ್ದರೆ, 12 ಲಕ್ಷ ಮಂದಿ ತೆರಿಗೆ ವ್ಯಾಪ್ತಿಗೆ ಸೇರಿದವರಿದ್ದರು. ಅದೇ ರೀತಿ 4.5 ಲಕ್ಷ ಮಹಿಳೆಯರು 65 ವರ್ಷಕ್ಕಿಂತ ಹೆಚ್ಚಿನವರಾಗಿದ್ದರೆ, 14, 000 ಮಂದಿ ಪುರುಷರು ಮಹಿಳೆಯರ ಹೆಸರಿನಲ್ಲಿ ಯೋಜನೆಯ ಲಾಭ ಪಡೆಯುತ್ತಿದ್ದರು.

ರಾಜ್ಯದಲ್ಲಿ ಬೀಡ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಅಂದರೆ 28 ಲಕ್ಷ ಮಹಿಳೆಯರನ್ನು ಅನರ್ಹರೆಂದು ಘೋಷಿಸಲಾಗಿದೆ.

ಇದನ್ನೂ ಓದಿ: ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನಸಾಗರ: ಟೋಕನ್ ವ್ಯವಸ್ಥೆ ವಿರುದ್ಧ ಅಸಮಾಧಾನ

ಇದನ್ನೂ ಓದಿ: ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?