Asianet Suvarna News Asianet Suvarna News

ಶಿವಸೇನೆಯಿಂದ ಮುಸ್ಲಿಂ ಮಹಿಳೆಯರಿಗೆ ಉಚಿತ ಬುರ್ಖಾ ಹಂಚಿಕೆ; ಶಿಂಧೆ ಬಣದ ವಿರುದ್ಧ ಸಂಜಯ್ ರಾವುತ್ ಕೆಂಡ!

ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕರು ಒಂದೆಡೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಹಂಚುತ್ತಿದೆ ಇನ್ನೊಂದೆಡೆ  ಶಾಲಾ-ಕಾಲೇಜುಗಳಲ್ಲಿ ಬುರ್ಖಾ ಧರಿಸುವುದನ್ನು ವಿರೋಧಿಸುತ್ತಿದ್ದಾರೆ ಎಂದು ಸಂಸದ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.

Maharashtra politics mp sanjay raut target ekanath shinde shivasene burkha hijab distrubution rav
Author
First Published Sep 9, 2024, 2:06 PM IST | Last Updated Sep 9, 2024, 2:10 PM IST

ಮಹಾರಾಷ್ಟ್ರ (ಸೆ.9) ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕರು ಒಂದೆಡೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಹಂಚುತ್ತಿದೆ ಇನ್ನೊಂದೆಡೆ  ಶಾಲಾ-ಕಾಲೇಜುಗಳಲ್ಲಿ ಬುರ್ಖಾ ಧರಿಸುವುದನ್ನು ವಿರೋಧಿಸುತ್ತಿದ್ದಾರೆ ಎಂದು ಸಂಸದ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.

ಶಿವಸೇನೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ  ಹಂಚುತ್ತಿರುವುದು ಇದೇ ಮೊದಲು. ಮುಂಬೈನ ಬೈಕುಲ್ಲಾ ಪ್ರದೇಶದ ಹಲವಡೆ ಬುರ್ಖಾ ಹಂಚುವ ಕುರಿತು ಶಿಂಧೆ ಗುಂಪಿನ ಶಾಸಕಿ ಯಾಮಿನಿ ಜಾಧವ್ ಹೋರ್ಡಿಂಗ್ ಹಾಕಿಸಿದ್ದಾರೆ.  ಬುರ್ಖಾ ಮುಸ್ಲಿಂ ಮಹಿಳೆಯರಿಗಷ್ಟೇ ಅಲ್ಲ ಪಕ್ಷ ತೊರೆದಿರುವ ಶಾಸಕರಿಗೂ ತೊಡಿಸಬೇಕು. ಏಕೆಂದರೆ ಮುಂಬರುವ ಚುನಾವಣೆಯಲ್ಲಿ ಬುರ್ಖಾ ಧರಿಸಿ ಸಾರ್ವಜನಿಕ ಕಣ್ಣುತಪ್ಪಿಸಿ ಓಡಾಡಬೇಕಾಗುತ್ತೆ. ಸಾರ್ವಜನಿಕರ ಕೈಗೆ ಸಿಕ್ಕರೆ ಶೂ ಕಿತ್ತು ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Maharashtra politics mp sanjay raut target ekanath shinde shivasene burkha hijab distrubution rav

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ; ಪರಾರಿಯಾಗಿದ್ದ ಶಿಲ್ಪಿ ಜಯದೀಪ್ ಅರೆಸ್ಟ್

ಶಿಂಧೆ ಬಣದ ನಾಯಕರು ಎಂತಹ ಕಪಟಿಗಳೆಂದರೆ. ಚುನಾವಣೆಯಲ್ಲಿ ಗೆಲ್ಲಲು ಯಾವ ಹಂತಕ್ಕೂ ಇಳಿಯಬಲ್ಲರು. ಒಂದು ಕಡೆ ಮುಸ್ಲಿಂ ವೋಟು ಬ್ಯಾಂಕ್‌ಗೆ ಬುರ್ಖಾ ಹಂಚುತ್ತಿದ್ದಾರೆ. ಇನ್ನೊಂದೆಡೆ ಶಾಲಾ ಕಾಲೇಜುಗಳಲ್ಲಿ ಬುರ್ಖಾ ಧರಿಸುವುದನ್ನು ವಿರೋಧಿಸುತ್ತಿದ್ದಾರೆ ಎಂದು ಶಿಂಧೆ ಬಣದ ವಿರೋಧಾಭಾಸ ಎತ್ತಿ ತೋರಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾಮಿನಿ ಜಾಧವ್ ಮುಸ್ಲಿಂ ಪ್ರಾಬಲ್ಯವಿರುವ ಬೈಕುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರನ್ನು ಓಲೈಕೆ ಮಾಡಲು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಿಂದೆ ಯಾವತ್ತೂ ಶಿವಸೇನೆಯಿಂದ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಹಂಚುವ ಕೆಲಸ ಮಾಡಿದ್ದಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios