ಎಕನಾಥ್ ಶಿಂಧೆ ಬಣದ ಶಿವಸೇನೆ ನಾಯಕ ಮೇಲೆ ಮಹಾರಾಷ್ಟ್ರ ಬಿಜೆಪಿ ಶಾಸಕ ಏಕಾಏಕಿ ಗುಂಡಿನ ದಾಳಿ ನಡೆಸಿಲಾಗಿದೆ. ಪೊಲೀಸ್ ಠಾಣೆಯಲ್ಲೇ ಈ ಘಟನೆ ನಡೆದಿದ್ದು, ತನಿಖೆಗೆ ಆದೇಶ ನೀಡಲಾಗಿದೆ. 

ಮುಂಬೈ(ಫೆ.03) ಮಹಾರಾಷ್ಟ್ರದ ಶಿವಸೇನೆ ಶಾಸಕನ ಹತ್ಯೆ ರಾಜಕೀಯದಲ್ಲೂ ಬಿರುಗಾಳಿ ಸೃಷ್ಟಿಸಿದೆ. ಏಕನಾಥ್ ಶಿಂಧೆ ಬಣ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ, ಇತ್ತ ಇದೇ ಎರಡು ಪಕ್ಷದ ನಾಯಕರು ನಡುವಿನ ವೈರತ್ವ ಗುಂಡಿನ ದಾಳಿ ಹಂತಕ್ಕೆ ತಲುಪಿದ್ದು ದುರಂತ. ಏಕನಾಥ್ ಶಿಂಧೆ ಬಣದ ಶಾಸಕ ಮಹೇಶ್ ಗಾಯಕ್ವಾಡ್ ಮೇಲೆ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶಿವಸೇನೆ ಶಾಸಕ ಮಹೇಶ್ ಹಾಗೂ ಆತನ ಆಪ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಈ ದಾಳಿ ನಡೆದಿದೆ.

ಪೂರ್ವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ನಾಯಕರು ಅಭ್ಯರ್ಥಿಗಳಾಗಿದ್ದರು. ಇವರಿಬ್ಬರ ನಡುವಿನ ವೈರತ್ವಕ್ಕೆ ಸುದೀರ್ಘ ಇತಿಹಾಸವಿದೆ. ಆದರೆ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಮಹೇಶ್ ಗಾಯಕ್ವಾಡ್ ಹಾಗೂ ಆತನ ಆಪ್ತರ ಮೇಲೆ ಗಣಪತ್ ಗಾಯಕ್ವಾಡ್ ಗುಂಡಿನ ದಾಳಿ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಲವು ಗುಂಡುಗಳು ಮಹೇಶ್ ಗಾಯಕ್ವಾಡ್ ದೇಹ ಹೊಕ್ಕಿದೆ. ಪೊಲೀಸ್ ಠಾಣೆ ಸಿಸಿಟಿವಿಯಲ್ಲಿ ದಾಳಿ ಕೃತ್ಯ ದಾಖಲಾಗಿದೆ.

ಹಾಡಹಗಲೇ ಮಾಲ್ಡೀವ್ಸ್ ಪ್ರಾಸಿಕ್ಯೂಟರ್ ಜನರಲ್ ಮೇಲೆ ದಾಳಿ: ಕ್ರೂರವಾಗಿ ಇರಿದ ಕಿಡಿಗೇಡಿಗಳು

ತೀವ್ರ ಗಾಯಗೊಂಡಿರುವ ಮಹೇಶ್ ಗಾಯಕ್ವಾಡ್ ಹಾಗೂ ಅಪ್ತರನ್ನು ಥಾಣೆ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹೇಶ್ ಗಾಯಕ್ವಾಡ್ ತೀವ್ರವಾಗಿ ಗಾಯಗೊಂಡಿದ್ದು, ತುರ್ತು ನಿಘಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಇನ್ನಿಬ್ಬರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. 

Scroll to load tweet…

ಮಹೇಶ್ ಗಾಯಕ್ವಾಡ್ ಹಾಗೂ ಗಣಪತ್ ಗಾಯಕ್ವಾಡ್ ಇಬ್ಬರು ಹಿಲ್ ಲೈನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ದೂರು ದಾಖಲಿಸುವ ವಿಚಾರದಲ್ಲಿ ಇಬ್ಬರು ಠಾಣೆ ಮೆಟ್ಟಿಲೇರಿದ್ದರು. ಠಾಣೆಯಲ್ಲಿ ಕುಳಿತಿದ್ದ ಮಹೇಶ್ ಗಾಯಕ್ವಾಡ್ ನೋಡಿದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಆಕ್ರೋಶ ಹೆಚ್ಚಾಗಿದೆ. ತನ್ನಲ್ಲಿದ್ದ ರಿವಾಲ್ವರ್ ತೆಗೆದು ಗುಂಡಿನ ಮಳೆ ಸುರಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ನಿರಂತರ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಓಡೋಡಿ ಬಂದ ಪೊಲೀಸರು ಗಣಪತ್ ಗಾಯಕ್ವಾಡ್ ಬಂಧಿಸಿದ್ದಾರೆ. 

Tumakuru: ಬೀದಿ ರೌಡಿಗಳಂತೆ ರಸ್ತೆಯಲ್ಲೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು: ಇವರ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲು

ಈ ಘಟನೆ ಕುರಿತು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಇತ್ತ ಉದ್ಧವ್ ಠಾಕ್ರೆ ಬಣ ಘಟನೆಯನ್ನು ಖಂಡಿಸಿದೆ. ತ್ರಿಬಲ್ ಎಂಜಿನ್ ಸರ್ಕಾರದಲ್ಲಿ ಶಾಸಕರಿಗೆ ಭದ್ರತೆ ಇಲ್ಲ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡಬೇಕಿದ್ದ ಶಾಸಕನ ಮೇಲೆ ಬಿಜಪಿ ಶಾಸಕ ಗುಂಡಿನ ದಾಳಿ ನಡೆಸಿದ್ದಾರೆ. ಬಿಜೆಪಿಯ ಗೂಂಡಾಗಿರಿ ಬಹಿರಂಗವಾಗಿದೆ ಎಂದು ಉದ್ಧವ್ ಠಾಕ್ರೆ ಬಣದ ಆನಂದ್ ದುಬೆ ಹೇಳಿದ್ದಾರೆ.