ಮುಂಬೈ[ಫೆ.16]: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಪಿಆರ್‌, ಎನ್‌ಆರ್‌ಸಿ ಬಗ್ಗೆ ರಾಜ್ಯದಲ್ಲಿನ ಆಡಳಿತಾರೂಢ ಶಿವಸೇನೆ- ಕಾಂಗ್ರೆಸ್‌- ಎನ್‌ಸಿಪಿ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಈ ಮೂರೂ ವಿಷಯಗಳ ಬಗ್ಗೆ ಎಂಎನ್‌ಎಸ್‌ ನಾಯಕ ರಾಜ್‌ಠಾಕ್ರೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಮಹಾಅಘಾಡಿ ಸರ್ಕಾರದ ಭಾಗವಾದ ಬಳಿಕ ಶಿವಸೇನೆಗೆ ಅಂಟಿಕೊಂಡ ಹಿಂದೂ ವಿರೋಧಿ ಕಳಂಕದ ಲಾಭವನ್ನು ಪಡೆಯುವ ಯತ್ನ ಆರಂಭಿಸಿದ್ದಾರೆ.

ಹಿಂದುತ್ವ 'ರಾಜ್'ಕಾರಣಕ್ಕೆ ಠಾಕ್ರೆ: ಮೊದಲ ಟಾರ್ಗೆಟ್ ಅಕ್ರಮ ವಲಸಿಗರೇ!

ಈ ನಿಟ್ಟಿನಲ್ಲಿ ಭಾನುವಾರ ಮುಂಬೈನಲ್ಲಿ ಬೃಹತ್‌ ರಾರ‍ಯಲಿ ಆಯೋಜಿಸಿದ್ದ ಎಂಎನ್‌ಎಸ್‌ ನಾಯಕ ರಾಜ್‌ ಠಾಕ್ರೆ, ‘ದೇಶದಲ್ಲಿ ಬೀಡುಬಿಟ್ಟಿರುವ ಅಕ್ರಮ ಬಾಂಗ್ಲಾದೇಶಿಗಳು ಹಾಗೂ ಪಾಕಿಸ್ತಾನಿಯರನ್ನು ದೇಶದಿಂದ ಹೊರದಬ್ಬಬೇಕೆಂದು ಗುಡುಗಿದ್ದಾರೆ. ಜೊತೆಗೆ ಮುಂಬೈನಲ್ಲಿರುವ ಅಕ್ರಮ ವಲಸಿಗರನ್ನು ಹೊರದಬ್ಬಲು 48 ಗಂಟೆಗಳ ಕಾಲ ಕೇಂದ್ರ ಸರ್ಕಾರ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಇನ್ಮುಂದೆ ಕಲ್ಲಿಗೆ ಕಲ್ಲಿನಿಂದಲೇ ಮತ್ತು ಖಡ್ಗಕ್ಕೆ ಖಡ್ಗದಿಂದಲೇ ಉತ್ತರಿಸಲಾಗುತ್ತದೆ’ ಎಂದು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಈ ಮೂಲಕ ಕೇಂದ್ರದ ಸಿಎಎ ಹಾಗೂ ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿ ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’: ಉದ್ಧವ್‌ ವಿವಾದ

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ