ಮುಂಬೈ(ಡಿ.25): ಮಹರಾಷ್ಟ್ರ ನಗರಾಭಿವೃದ್ಧಿ ಸಚಿವ ಎಕನಾಥ್ ಶಿಂಧೆ ಕಾರು ಅಪಘಾತವಾಗಿದೆ. ವಾಶಿ ಟೋಲ್‌ಗೇಟ್ ಬಳಿ ಸಚಿವ ಎಕನಾಥ್ ಶಿಂಧೆ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸಚಿವರ ಕೈ ಸೇರಿದಂತೆ ಸಣ್ಣ ಪುಟ್ಟ ಗಾಯಗಳಾಗಿದೆ.

ಕರ್ನಾಟಕ ಮಾಜಿ ಸಚಿವರ ಅಪಹರಣ ಯತ್ನ? ಕಾರು ಫಾಲೋ ಮಾಡಿದ ಅಪರಿಚಿತರು

ಕಾರ್ಯಕ್ರಮದ ನಿಮಿತ್ತ ಎಕನಾಥ್ ಶಿಂಧೆ ಮುಂಬೈನಿಂದ ವಾಶಿಗೆ ತೆರಳಿದ್ದರು. ಸಂಜೆ 4.30ಕ್ಕೆ ವಾಶಿಯಿಂದ ಮತ್ತೆ ಮುಂಬೈಗೆ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ಈ ಕುರಿತು ನವಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಸಚಿವರ ಫಾರ್ಚುನರ್ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.

ಟೋಲ್ ಗೇಟ್ ಬಳಿ ಕಾರು ಅಪಘಾತವಾಗಿದೆ. ಆದರೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಸುರಕ್ಷಿತವಾಗಿದ್ದೇನೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಸಚಿವರ ಕಾರು ಅಪಘಾತ ಪ್ರಕರಣ ಕೆಲ ಕಾಲ ಆತಂಕ ಸೃಷ್ಟಿಸಿತ್ತು.