ಔರಂಗಬಾದ್‌ನಲ್ಲಿ ಸಂಪೂರ್ಣ ಲಾಕ್‌ಡೌನ್; ಅಗತ್ಯ ವಸ್ತು, ತುರ್ತು ಸೇವೆ ಮಾತ್ರ ಲಭ್ಯ!
ಕಳೆದ ವರ್ಷ ಲಾಕ್‌ಡೌನ್ ಹೇರಿದ ಬಳಿಕ ಹಂತ ಹಂತವಾಗಿ ತೆರವುಗೊಳಿಸಲಾಗಿತ್ತು. ಬಲಿಕ ಸಂಪೂರ್ಣ ಲಾಕ್‌ಡೌನ್ ಇಲ್ಲ ಎಂದು ಖಚಿತಪಡಿಸಲಾಗಿತ್ತು. ಆದರೆ ಕೊರೋನಾ ನಿಯಂತ್ರಕ್ಕೆ ಸಿಗದ ಕಾರಣ ಇದೀಗ ಮತ್ತೆ ಔರಂಗಬಾದ್ ಸಂಪೂರ್ಣ ಲಾಕ್‌ಡೌನ್ ಆಗಿದೆ. ಇದೀಗ ಇತರ ರಾಜ್ಯಕ್ಕೂ ವಾರ್ನಿಂಗ್ ನೀಡಿದೆ.
ಔರಂಗಬಾದ್(ಮಾ.27): ದೇಶದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ ಕೊರೋನಾ ಮಾತ್ರ ಮಿತಿ ಮೀರಿ ಹರಡುತ್ತಿದೆ. ನಿಯಂತ್ರಣಕ್ಕೆ ಇದೀಗ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಿದೆ. ಮಾರ್ಚ್ 30 ರಿಂದ ಎಪ್ರಿಲ್ 8ರ ವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
ಕೊರೋನಾ 2ನೇ ಅಲೆ ಮೊದಲ ಅಲೆಗಿಂತ ಭಯಾನಕ; 10 ದಿನದ ಪ್ರಕರಣವೇ ಸಾಕ್ಷಿ!.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ ಔರಂಗಬಾದ್, ಮುಂಬೈ ಸೇರಿದಂತೆ ಕೆಲ ಪ್ರದೇಶದಲ್ಲಿ ಕೊರೋನಾ ಮೀತಿ ಮೀರಿದೆ. ಹೋಳಿ ಹಬ್ಬದ ಬೆನ್ನಲ್ಲೇ ಔರಂಗಬಾದ್ ಸಂಪೂರ್ಣ ಲಾಕ್‌ಡೌನ್ ಆಗಲಿದೆ ಎಂದು ಔರಂಗಬಾದ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅಗತ್ಯ ವಸ್ತು ಹಾಗೂ ತುರ್ತು ಸೇವೆ ಹೊರತು ಪಡಿಸಿದೆರೆ ಇನ್ಯಾವ ಸೇವೆಗಳು ಇರುವುದಿಲ್ಲ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್‌ಡೌನ್ ರೀತಿಯಲ್ಲೇ ಇರಲಿದೆ ಎಂದು ಜಿಲ್ಲಾಡಳಿತ ಹೇಳಿದೆ. ಇನ್ನು ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ನೈಟ್ ಕರ್ಫ್ಯೂ ಇಂದಿನಿಂದ ಜಾರಿಯಾಗುತ್ತಿದೆ.
ಶಾಂಪಿಂಗ್ ಮಾಲ್, ಗಾರ್ಡನ್, ಬೀಚ್, ಸಿನಿಮಾ ಥಿಯೇಟರ್ ಸೇರಿದಂತೆ ಕೆಲ ಜನಸಂದಣಿ ಪ್ರದೇಶಗಳು ರಾತ್ರಿ 8 ರಿಂದ ಬೆಳಗ್ಗೆ 7 ಗಂಟೆ ವರೆಗೆ ಮುಚ್ಚಲು ಆದೇಶಿಸಿದೆ. ಜನಸಂದಣಿ ಹೆಚ್ಚಿರುವ ಹಾಗೂ ಕೊರೋನಾ ಹರಡುವ ಸಾಧ್ಯತೆ ಇರುವ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲಿಸಲು ಆದೇಶ ಹೊರಡಿಸಲಾಗಿದೆ.