ಕೊರೋನಾ 2ನೇ ಅಲೆ ಮೊದಲ ಅಲೆಗಿಂತ ಭಯಾನಕ; 10 ದಿನದ ಪ್ರಕರಣವೇ ಸಾಕ್ಷಿ!
ಭಾರತದಲ್ಲಿ ಕೊರೋನಾ ವೈರಸ್ 2ನೇ ಅಲೆ ಆರಂಭವಾಗಿದೆ ಅನ್ನೋ ಮಾತುಗಳು ಬಲಗೊಳ್ಳುತ್ತಿದೆ. ಕಾರಣ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ನಡುವೆ ತಜ್ಞರು ಮತ್ತೊಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ. ಇದರ ಪ್ರಕಾರ ಭಾರತದಲ್ಲಿ ಮೊದಲ ಕೊರೋನಾ ಅಲೆಗಿಂತ 2ನೇ ಅಲೆ ಭಯಾನಕವಾಗಿದೆ. ಕಾರಣ ಏನು? ಇಲ್ಲಿದೆ ವಿವರ.
ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಿಸಿದೆ. ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೆ ಪರಸ್ಥಿತಿ ನಿಯಂತ್ರಕ್ಕೆ ಬರುತ್ತಿಲ್ಲ.
ಕೊರೋನಾ ಮೊದಲೆ ಅಲೆಗಿಂತ 2ನೇ ಅಲೆ ಅತೀ ಭಯಾನಕ ಎಂದು ತಜ್ಞರು ಹೇಳಿದ್ದಾರೆ. ಕಾರಣ ಭಾರತದಲ್ಲಿ ಕಳೆದ 10 ದಿನದಲ್ಲಿನ ಕೊರೋನಾ ಪ್ರಕರಣಗಳೇ ಇದಕ್ಕೆ ಸಾಕ್ಷಿ.
ಶುಕ್ರವಾರ(ಮಾ.27) ಭಾರತದಲ್ಲಿ ಒಟ್ಟು 62,000 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. 10 ದಿನಕ್ಕೂ ಮೊದಲು ಭಾರತದಲ್ಲಿ ಪ್ರತಿ ದಿನ ಸರಾಸರಿ 30,000 ಹೊಸ ಪ್ರಕರಣಗಳು ವರದಿಯಾಗಿತ್ತು. ಇದೇ ಕಾರಣಕ್ಕೆ 2ನೇ ಅಲೆ ಅತೀ ಭಯಾನಕ ಎಂದಿದ್ದಾರೆ.
ಕೊರೋನಾ ಮೊದಲ ಅಲೆಯಲ್ಲಿ ಪ್ರತಿ ದಿನ 30,000 ಹೊಸ ಕೊರೋನಾ ಪ್ರಕರಣಗಳಿಂದ 60,000 ತಲುಪಲು 23 ದಿನ ತೆಗೆದುಕೊಂಡಿತ್ತು. ಆದರೆ 2ನೇ ಅಲೆಯಲ್ಲಿ ಕೇವಲ 10 ದಿನದಲ್ಲೆ ಈ ಸಂಖ್ಯೆ ತಲುಪಿದೆ.
2ನೇ ಅಲೆ ಕಾರಣ ಕೆಲ ರಾಜ್ಯದ ಕೆಲ ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ. ಕಾರ್ಯಕ್ರಮ, ಜಾತ್ರೆ, ಉತ್ಸವಗಳಿಗೆ ಜನ ಸಂದಣಿ ಮಿತಿ ಹೇರಲಾಗಿದೆ. ಆದರೆ ಕೊರೋನಾ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿಲ್ಲ.
ಕೊರೋನಾ ವ್ಯಾಕ್ಸಿನ್ ಅಭಿಯಾನ ಮತ್ತಷ್ಟು ಚುರುಕುಗೊಂಡಿದ್ದರೂ, ದೇಶದಲ್ಲಿ ಕೊರೋನಾ ಆರ್ಭಟ ತಗ್ಗುತ್ತಿಲ್ಲ. ಎಪ್ರಿಲ್ 1 ರಿಂದ 45 ವರ್ಷದ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು ಕೇಂದ್ರ ಮುಂದಾಗಿದೆ
ಹಂತ ಹಂತವಾಗಿ ಕೊರೋನಾ ಲಸಿಕೆ ನೀಡುತ್ತಿರುವ ಕೇಂದ್ರ ಸರ್ಕಾರ ಆರಂಭದಲ್ಲಿ ಆಸ್ಪತ್ರೆ ಸಿಬ್ಬಂಧಿ, ಕೊರೋನಾ ವಾರಿಯರ್ಸ್‌ಗೆ ನೀಡಲಾಗಿತ್ತು. ಬಳಿಕ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು.