ಮುಂಬೈ(ಆ.19) ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾದ ಮಹಾರಾಷ್ಟ್ರ, ಜಾಗತಿಕವಾಗಿ 5ನೇ ಸ್ಥಾನಕ್ಕೆ ಏರಿದೆ! ಹೌದು. ಮಹಾರಾಷ್ಟ್ರವನ್ನು ಒಂದು ದೇಶವಾಗಿ ಪರಿಗಣಿಸಿ, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚು ಕೊರೋನಾ ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಮಹಾರಾಷ್ಟ್ರ 5ನೇ ಸ್ಥಾನಕ್ಕೆ ತಲುಪಿದೆ.

ಪಿಎಂ ಕೇ​ರ್ಸ್‌ ನಿಧಿ ವಿವಾದ: ಕೇಂದ್ರಕ್ಕೆ ಗೆಲುವು, ಪ್ರತಿಪಕ್ಷಗಳಿಗೆ ಮುಖಭಂಗ!

ರಾಜ್ಯದಲ್ಲಿ ಮಂಗಳವಾರ 11119 ಹೊಸ ಕೇಸು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6,15,477ಕ್ಕೆ ತಲುಪಿದೆ. ಜೊತೆಗೆ ನಿನ್ನೆ 422 ಜನರು ಸೋಂಕಿತರು ಸಾವನ್ನಪ್ಪಿದ್ದು, ಇದರೊಂದಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 20687ಕ್ಕೆ ತಲುಪಿದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ವಿಶ್ವದಲ್ಲಿ ಟಾಪ್‌ 5 ಮತ್ತು ಸಾವಿನ ಸಂಖ್ಯೆಯಲ್ಲಿ 9ನೇ ಸ್ಥಾನ ತಲುಪಿದೆ.

ರಾಜ್ಯದಲ್ಲಿ ಒಂದೇದಿನ ಕೊರೋನಾಕ್ಕೆ 139 ಬಲಿ: 7665 ಕೇಸ್!

ಪ್ರಸಕ್ತ ಅಮೆರಿಕ (56 ಲಕ್ಷ), ಬ್ರೆಜಿಲ್‌ (33 ಲಕ್ಷ), ಭಾರತ (27 ಲಕ್ಷ) ಮತ್ತು ರಷ್ಯಾ (9.3 ಲಕ್ಷ) ದೇಶಗಳು ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಟಾಪ್‌ 4 ದೇಶಗಳಾಗಿವೆ. ನಂತರದಲ್ಲಿ 6.15 ಲಕ್ಷ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರವಿದೆ. ವಿಶೇಷವೆಂದರೆ ದ. ಆಫ್ರಿಕಾಕ್ಕಿಂತಲೂ ಮಹಾರಾಷ್ಟ್ರದಲ್ಲಿ ಹೆಚ್ಚು ಸೋಂಕಿತರು ಇದ್ದಾರೆ. ದ. ಆಫ್ರಿಕಾದಲ್ಲಿ ಈವರೆಗೆ 5.89 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಸಾವಿನ ಪಟ್ಟಿಯಲ್ಲಿ 1.73 ಲಕ್ಷ ಸಾವಿನೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿ, 1.08 ಲಕ್ಷ ಸಾವಿನೊಂದಿಗೆ ಬ್ರೆಜಿಲ್‌ 2ನೇ ಸ್ಥಾನ ಮತ್ತು 57000 ಸಾವಿನೊಂದಿಗೆ ಮೆಕ್ಸಿಕೋ 3ನೇ ಸ್ಥಾನದಲ್ಲಿದೆ.

ಭಾರೀ ಏರಿಕೆ: ಮಹಾರಾಷ್ಟ್ರದಲ್ಲಿ ಕೊರೋನಾ ಕೇಸ್‌ಗಳು 1 ಲಕ್ಷ ಗಡಿದಾಟಲು 96 ದಿನಗಳು ಬೇಕಾಗಿದ್ದವು. ಬಳಿಕ 22 ದಿನಕ್ಕೆ 2 ಲಕ್ಷ , 14 ದಿನಕ್ಕೆ ಮೂರು ಲಕ್ಷ, 11 ದಿನಕ್ಕೆ 4 ಲಕ್ಷ, 10 ದಿನಕ್ಕೆ 5 ಲಕ್ಷ ಹಾಗೂ 9 ದಿನದಲ್ಲಿ 6 ಲಕ್ಷಕ್ಕೆ ಪ್ರಕರಣಗಳು ಏರಿಕೆ ಕಂಡಿವೆ.