ಬೆಂಗಳೂರು(ಆ.19): ರಾಜ್ಯದಲ್ಲಿ ಮಂಗಳವಾರ 7,665 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದಾಖಲೆಯ 139 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 4,201ಕ್ಕೆ ಏರಿಕೆಯಾಗಿದೆ.

ಮಂಗಳವಾರ ರಾಜ್ಯದಲ್ಲಿ ಒಂದು ದಿನದ ಗರಿಷ್ಠ ಸಾವು ವರದಿಯಾಗಿದ್ದು, ಕಳೆದ ಭಾನುವಾರ ಒಂದೇ ದಿನ 124 ಮಂದಿ ಸಾವನ್ನಪ್ಪಿದ್ದು ಈವರೆಗಿನ ದಾಖಲೆಯಾಗಿತ್ತು.

ರಾಜ್ಯದ ಆಕ್ಸಿಜನ್ ಬೇಡಿಕೆ ನೀಗಿಸಲು ಪ್ರಧಾನಿಗೆ ಮನವಿ

ಮಂಗಳವಾರ 7,665 ಸೋಂಕು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2.41 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಮಂಗಳವಾರ ಬರೋಬ್ಬರಿ 8,387 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ ಒಂದೂವರೆ ಲಕ್ಷ ಗಡಿ ದಾಟಿ 1.57 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದಂತೆ 79,782 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆಯಲ್ಲಿದ್ದು ಈ ಪೈಕಿ ಬೆಂಗಳೂರಿನಲ್ಲಿ 329 ಮಂದಿ ಸೇರಿದಂತೆ ಒಟ್ಟು 697 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 2,242 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 94,106ಕ್ಕೆ ಏರಿಕೆಯಾಗಿದೆ. ಮಂಗಳವಾರ 49 ಮಂದಿ ಸಾವನ್ನಪ್ಪಿದ್ದು, ಬೆಂಗಳೂರು ನಗರದಲ್ಲಿನ ಒಟ್ಟು ಸಾವಿನ ಸಂಖ್ಯೆ ಒಂದೂವರೆ ಸಾವಿರ ಗಡಿ ದಾಟಿ 1,532ಕ್ಕೆ ಏರಿಕೆಯಾಗಿದೆ.

ಕೊರೋನಾ ಕೇಸ್‌: ಮಹಾರಾಷ್ಟ್ರ ವಿಶ್ವದಲ್ಲೇ ನಂ.5!

ಬಳ್ಳಾರಿಯಲ್ಲಿ ಸೋಂಕು ಹೆಚ್ಚಳ:

ಬೆಂಗಳೂರು ಹೊರತುಪಡಿಸಿದರೆ ಬಳ್ಳಾರಿಯಲ್ಲಿ 673 ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕು 15,180ಕ್ಕೆ ಏರಿಕೆಯಾಗಿದೆ. ಅಲ್ಲದೆ ಮಂಗಳವಾರ 9 ಮಂದಿ ಬಲಿಯಾಗಿದ್ದು, ಈವರೆಗೆ ಬಳ್ಳಾರಿಯಲ್ಲಿ 178 ಮಂದಿ ಕೊರೋನಾದಿಂದ ಮೃತಪಟ್ಟಂತಾಗಿದೆ.

ಉಳಿದಂತೆ ಬಾಗಲಕೋಟೆ 171, ಬೆಳಗಾವಿ 395, ಬೆಂಗಳೂರು ಗ್ರಾಮಾಂತರ 123, ಬೀದರ್‌ 99, ಚಾಮರಾಜನಗರ 21, ಚಿಕ್ಕಬಳ್ಳಾಪುರ 82, ಚಿಕ್ಕಮಗಳೂರು 145, ಚಿತ್ರದುರ್ಗ 41, ದಕ್ಷಿಣ ಕನ್ನಡ 279, ದಾವಣಗೆರೆ 332, ಧಾರವಾಡ 279, ಗದಗ 186, ಹಾಸನ 177, ಹಾವೇರಿ 109, ಕಲಬುರಗಿ 229, ಕೊಡಗು 16, ಕೋಲಾರ 71, ಕೊಪ್ಪಳ 142, ಮಂಡ್ಯ 174, ಮೈಸೂರು 357, ರಾಯಚೂರು 171, ರಾಮನಗರ 115, ಶಿವಮೊಗ್ಗ 318, ತುಮಕೂರು 46, ಉಡುಪಿ 421, ಉತ್ತರ ಕನ್ನಡ 80, ವಿಜಯಪುರ 64, ಯಾದಗಿರಿಯಲ್ಲಿ 107 ಪ್ರಕರಣ ವರದಿಯಾಗಿದೆ.

ಆಸ್ಪತ್ರೆ ಕಾಂಪೌಂಡ್‌ ನಿಂದ ಬಿದ್ದು ಕೊರೋನಾ ಸೋಂಕಿತ ಸಾವು

ಹಾಸನದಲ್ಲಿ 4 ತಿಂಗಳ ಮಗು ಕೊರೋನಾಗೆ ಬಲಿ:

ಮಂಗಳವಾರ ಹಾಸನದಲ್ಲಿ 4 ತಿಂಗಳ ಗಂಡು ಮಗು ಕೊರೋನಾ ಸೋಂಕಿಗೆ ಬಲಿಯಾಗಿದೆ. ಐಎಲ್‌ಐ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಗು ಸೇರಿ ಒಟ್ಟು 7 ಮಂದಿ ಹಾಸನದಲ್ಲಿ ಮಂಗಳವಾರ ಕೊರೋನಾಗೆ ಬಲಿಯಾಗಿದ್ದಾರೆ.

ಉಳಿದಂತೆ ಬೆಂಗಳೂರು 49, ಧಾರವಾಡ 10, ಬಳ್ಳಾರಿ 9, ಬಾಗಲಕೋಟೆ 1, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 3, ಬೀದರ್‌ 8, ಚಾಮರಾನಗರ 1, ದಕ್ಷಿಣ ಕನ್ನಡ 9, ದಾವಣಗೆರೆ 1, ಗದಗ 2, ಹಾವೇರಿ 3, ಕಲಬುರಗಿ 2, ಕೊಪ್ಪಳ 1, ಮಂಡ್ಯ 2, ಮೈಸೂರು 6, ರಾಯಚೂರು 4, ಉತ್ತರ ಕನ್ನಡ 1, ವಿಜಯಪುರ 3, ಯಾದಗಿರಿಯಲ್ಲಿ 3 ಸಾವು ವರದಿಯಾಗಿದೆ