* ಅನಾಥರಾದ ಮಕ್ಕಳ ಯೋಗಕ್ಷೇಮಕ್ಕಾಗಿ ಪ್ರತೀ ಜಿಲ್ಲೆಗೂ ಕಾರ್ಯಪಡೆ ರಚನೆ* ಮಹಾರಾಷ್ಟ್ರ ಸರ್ಕಾರದ ದಿಟ್ಟ ನಿರ್ಧಾರ* ಕಾರ್ಯಪಡೆಯಲ್ಲಿ ಪೌರ ಸಂಸ್ಥೆಗಳ ಆಯುಕ್ತರು, ಪೊಲೀಸ್‌ ಮುಖ್ಯಸ್ಥರು, ಜಿಲ್ಲೆಯ ಗ್ರಾಮೀಣ ಆರೋಗ್ಯಾಧಿಕಾರಿಗಳು

ಮುಂಬೈ(ಮೇ.11): ಕೊರೋನಾ ವೈರಸ್‌ನಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳ ಯೋಗಕ್ಷೇಮಕ್ಕಾಗಿ ಪ್ರತೀ ಜಿಲ್ಲೆಗೂ ಕಾರ್ಯಪಡೆ ರಚನೆಗಾಗಿ ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.

ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿರುವ ಈ ಕಾರ್ಯಪಡೆಯಲ್ಲಿ ಪೌರ ಸಂಸ್ಥೆಗಳ ಆಯುಕ್ತರು, ಪೊಲೀಸ್‌ ಮುಖ್ಯಸ್ಥರು, ಜಿಲ್ಲೆಯ ಗ್ರಾಮೀಣ ಆರೋಗ್ಯಾಧಿಕಾರಿಗಳು ಇರಲಿದ್ದಾರೆ. ಕೊರೋನಾದಿಂದಾಗಿ ಮಕ್ಕಳ ಪೋಷಕರು ಸಾವಿಗೀಡಾಗುತ್ತಿರುವುದರಿಂದ ಮಕ್ಕಳು ಅನಾಥರಾಗುತ್ತಿದ್ದಾರೆ. ಇದು ಹೊಸ ಸಾಮಾಜಿಕ ಸಮಸ್ಯೆಗೆ ನಾಂದಿಯಾಡುತ್ತಿದೆ.

ಹೀಗಾಗಿ ಅಂಥ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ನೀಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona