ಇಸ್ಲಾಂಪುರ ಅನ್ನೋ ಗ್ರಾಮದ ಹೆಸರನ್ನು ಇದೀಗ ಈಶ್ವರಪುರವಾಗಿ ಮುರುನಾಮಕರಣ ಮಾಡಲು ಮಹಾರಾಷ್ಟ್ರ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ವಿಧಾನಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಲಾಗಿದೆ.
ಮುಂಬೈ (ಜು.18) ಬಿಜೆಪಿ ಆಡಳಿತ ಹಲವು ರಾಜ್ಯಗಳಲ್ಲಿ ಮರುನಾಮಕರಣ ಹೊಸದೇನಲ್ಲ. ಹಲವು ದಾಳಿಗಳಿಂದ ಬದಲಾಗಿದ್ದ ಹಲವು ಹೆರಗಳನ್ನು ಮರುನಾಮಕರಣ ಮಾಡಲಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನಿವಿಸ್ ಸರ್ಕಾರ ಇದೀಗ ಸಾಂಘ್ಲಿ ಜಿಲ್ಲೆಯ ಪ್ರಮುಖ ಪಟ್ಟಣದ ಹೆಸರು ಬದಲಿಸುತ್ತಿದೆ. ಇಸ್ಲಾಂಪುರ ಪಟ್ಟಣದ ಹೆಸರು ಇದೀಗ ಈಶ್ವರಪುರವಾಗಿ ಮರುನಾಮಕರಣ ಮಾಡಲು ಮಹರಾಷ್ಟ್ರ ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದ್ದು, ಈಗಾಗಲೇ ವಿಧಾನಸಭೆಯಲ್ಲೂ ಈ ಕುರಿತು ಮಹತ್ವದ ಘೋಷಣೆಯಾಗಿದೆ.
ಆಹಾರ ಮತ್ತು ನಾಗರೀಕರ ಸಚಿವ ಛಗನ್ ಬುಜಬಲ್ ಗುರುವಾರ ನಡೆಸಿದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದೀಗ ಕ್ಯಾಬಿನೆಟ್ ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳಹಿಸಲಾಗುತ್ತದೆ ಎಂದು ಛಗನ್ ಬುಜಬಲ್ ಹೇಳಿದ್ದಾರೆ.
ಶಿವ ಪ್ರತಿಷ್ಠಾನದಿಂದ ಸತತ ಹೋರಾಟ
ಇಸ್ಲಾಂಪುರವನ್ನು ಈಶ್ವಪುರ ಎಂದು ಮರುನಾಮಕರಣ ಮಾಡಲು ಶಿವ ಪ್ರತಿಷ್ಠಾನ ಹಿಂದೂ ಸಂಘಟನೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಕಳೆದ ಕೆಲ ದಶಕಗಳಿಂದಹೋರಾಟ ನಡೆಸುತ್ತಾ ಬಂದಿದ್ದಾರೆ. ಶಿವ ಪ್ರತಿಷ್ಠಾನ ಈ ಕುರಿತು ಸಾಂಗ್ಲಿ ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರಕ್ಕೂ ಹಲವು ಮನವಿ ಪತ್ರಗಳನ್ನು ಸಲ್ಲಿಸಿದೆ. ಇದೀಗ ಮಹಾಾರಾಷ್ಟ್ರ ಬಿಜೆಪಿ ಸರ್ಕಾರ ಮರುನಾಮಕರಣಕ್ಕೆ ಮುಂದಾಗಿದೆ. ಮರುನಾಮಕರಣವಾಗುವವರೆಗೆ ನಾವು ವಿಶ್ರಮಿಸುವುದಿಲ್ಲ ಎಂದು ಶಿವ ಪ್ರತಿಷ್ಠಾನದ ನಾಯಕ ಸಂಭಾಜಿ ಬಿಡೆ ಹೇಳಿದ್ದಾರೆ. ಸಾಂಗ್ಲಿ ಜಿಲ್ಲೆಯಲ್ಲಿ ಈ ಕುರಿತು ಹಲವು ಹೋರಾಟಗಳು ನಡೆದಿದೆ.
1986ರಿಂದ ಮರುನಾಮಕರಣ ಪ್ರಸ್ತಾವನೆ ನಿರ್ಲಕ್ಷ್ಯ
1986ರಲ್ಲಿ ಇಸ್ಲಾಂಪುರವನ್ನು ಈಶ್ವರಪುರವಾಗಿ ಮರುನಾಮಕರಣ ಮಾಡಲು ಹೋರಾಟ ತೀವ್ರಗೊಂಡಿತ್ತು. 1986ರಲ್ಲೇ ಈ ಕುರಿತು ಮನವಿ ಮಾಡಲಾಗಿತ್ತು. ಸುದೀರ್ಘ ವರ್ಷಗಳಿಂದ ಬಾಕಿ ಉಳಿದಿರುವ ಈ ಮನವಿ ಇದೀಗ ಈಡೇರುತ್ತಿದೆ ಎಂದು ಇಸ್ಲಾಂಪುರದ ಶಿವ ಸೇನೆ ನಾಯಕ ಹೇಳಿದ್ದಾರೆ.
ಉದ್ದವ್ ಸರ್ಕಾರದಿಂದ ಸಂಭಾಜಿ ನಗರ ಮರುನಾಮಕರಣ
ಉದ್ಧವ್ ಠಾಕ್ರೆ ಶಿವಸೇನೆ, ಶರದ್ ಪವಾರ್ ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯಾಗಿ ರಚಿಸಿದ್ದ ಅಘಾಡಿ ಸರ್ಕಾರ ಕೂಡ ಮರುನಾಮಕರಣ ಮಾಡಿತ್ತು. ಅಧಿಕಾರದ ಕೊನೆಯ ದಿನ ಉದ್ಧವ್ ಠಾಕ್ರೆ, ಔರಂಗಬಾದ್ ಹೆಸರನ್ನು ಸಂಭಾಜಿ ನಗರವಾಗಿ ಮರುನಾಮಕರಣ ಮಾಡಿತ್ತು. ಈ ಆದೇಶ ಭಾರಿ ಸದ್ದು ಮಾಡಿತ್ತು. ಮಹಾರಾಷ್ಟ್ರದಲ್ಲಿ ಮರುನಾಮಕರಣ ಹೊಸದಲ್ಲ. ಈ ಪೈಕಿ ಉತ್ತರ ಪ್ರದೇಶದ ಯೋಗಿ ಆದಿತ್ಯಾಥ್ ಸರ್ಕಾರ ಅತೀ ಹೆಚ್ಚು ಮರುನಾಮಕರಣ ಮಾಡಿದೆ.
