ದೇಶದಲ್ಲಿ ಮೊದಲು, ಗೋವಿಗೆ ರಾಜ್ಯಮಾತೆ ಸ್ಥಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ!
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಹೀಗಾಗಿ ಗೋಮಾತೆಯನ್ನು ಪೂಜಿಸುತ್ತಾರೆ. ಇದೀಗ ಮಹಾರಾಷ್ಟ್ರ ಸರ್ಕಾರ ಈ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಮಹಾರಾಷ್ಟ್ರದಲ್ಲಿ ಇದೀಗ ಗೋವು ಅಧಿಕೃತ ರಾಜ್ಯಮಾತೆ ಎಂದು ಅಧಿಕೃತಗೊಳಿಸಿದೆ.
ನವದೆಹಲಿ(ಸೆ.30) ಹಿಂದೂಗಳು ಗೋವನ್ನು ಪೂಜಿಸುತ್ತಾರೆ. ಹಿಂದೂಗಳಿಗೆ ಗೋ ಮಾತ್ರವಲ್ಲ, ಗೋವಿನ ಹಾಲು, ಸೆಗಣಿ, ಗಂಜಲ ಸೇರಿದಂತೆ ಎಲ್ಲವೂ ಪವಿತ್ರ. ಹೀಗಾಗಿ ಬಿಜೆಪಿ ತನ್ನ ಪ್ರಣಾಳಿಕೆ ಸೇರಿದಂತೆ ಹಲೆವೆಡೆ ಗೋವಿನ ಕುರಿತು ಹೋರಾಟ ಮಾಡಿದೆ. ಕೆಲ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಇದೀಗ ಮಹಾರಾಷ್ಟ್ರದಲ್ಲಿ ಗೋವಿಗೆ ರಾಜ್ಯಮಾತೆ(ರಾಜ್ಯದ ತಾಯಿ) ಸ್ಥಾನಮಾನ ಅಧಿಕೃತಗೊಳಿಸಿದೆ.
ಮಹಾರಾಷ್ಟ್ರ ಮುುಖ್ಯಮಂತ್ರಿ ಏಕನಾಥ್ ಶಿಂಧೆ ಈ ಆದೇಶ ಹೊರಡಿಸಿದ್ದಾರೆ. ಗೋ ಮಾತೆ ಭಾರತೀಯ ಇತಿಹಾಸದಲ್ಲಿ ಸಾಂಸ್ಕೃತಿಕವಾಗಿ, ವೈಜ್ಞಾನಿಕಾವಾಗಿ, ಆಧ್ಯಾತ್ಮಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ವೇದಗಳ ಕಾಲದಿಂದಲ್ಲೂ ಗೋವಿನ ಪೂಜೆ ನಡೆಯುತ್ತಿತ್ತು. ಪವಿತ್ರ ಗೋಮಾತೆಯನ್ನು ರಾಜ್ಯದ ಅಧಿಕೃತ ರಾಜ್ಯಮಾತ ಎಂದು ಏಕನಾಥ್ ಶಿಂಧೆ ಘೋಷಿಸಿದ್ದಾರೆ.
ಭಕ್ತರು ನೀಡಿದ್ದ ಹಸುಗಳು ಕಸಾಯಿಖಾನೆಗೆ! ನೀರಮಾನ್ವಿ ಯಲ್ಲಮ್ಮ ದೇವಸ್ಥಾನದ ಅರ್ಚಕರ ವಿರುದ್ಧ ಭಕ್ತರು ಆಕ್ರೋಶ!
ಭಾರತದ ಅಮೂಲ್ಯ ಗೋವಿನ ತಳಿಯನ್ನು ನಾವು ಪೂಜಿಸುತ್ತೇವೆ. ಗೋ ನಮಗೆ ತಾಯಿ. ಗೋವಿನ ಹಾಲು ಪ್ರತಿಯೊಬ್ಬರ ಆರೋಗ್ಯಕ್ಕೆ ಅತೀ ಮುಖ್ಯ. ಗೋವಿನ ಸೆಗಣಿ ಹಾಗೂ ಗಂಜಲ ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿದೆ. ಹಲವು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಪೂಜ್ಯನೀಯ ಗೋಮಾತೆಯನ್ನು ರಾಜ್ಯದ ಅಧಿಕೃತ ರಾಜ್ಯಮಾತೆಯಾಗಿ ಘೋಷಿಸಿದ್ದೇವೆ ಎಂದು ಎಕನಾಥ್ ಶಿಂಧೆ ಹೇಳಿದ್ದಾರೆ.
ಭಾರತದಲ್ಲಿ ದೇಶಿಯ ತಳಿಗಳು ಸಂಖ್ಯೆ ಕುಸಿಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಶಿಂಧೆ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಅಧಿಕೃತ ಆದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಭಾರತೀಯ ಗೋ ತಳಿಗಳನ್ನು ಸಂರಕ್ಷಿಸುವ, ಬೆಳೆಸುವ ಕೆಲಸವಾಗಬೇಕು. ರೈತರಿಗ ದೇಶಿ ತಳಿಗಳ ಸಾಕಾಣಿಕಿಗೆ ಪ್ರೋತ್ಸಾಹ ಸಿಗಬೇಕು ಎಂದು ಶಿಂಧೆ ಹೇಳಿದ್ದಾರೆ.
ಶಿವಮೊಗ್ಗ: ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 37 ಗೋವುಗಳ ರಕ್ಷಣೆ
ಮಹಾರಾಷ್ಟ್ರ ಬಿಜೆಪಿ ಸರ್ಕಾರದ ನಿರ್ಧಾರ ರಾಜಕೀಯ ನಡೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆ ಆಗಮಿಸುತ್ತಿದೆ. ಹೀಗಾಗಿ ಸರ್ಕಾರ ಈ ಆದೇಶ ಹೊರಡಿಸಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇತ್ತ ಹಲವು ಹಿಂದೂ ಸಂಘಟನೆಗಳು ಈ ನಿರ್ಧಾರವನ್ನು ಸ್ವಾಗತಿಸಿದೆ. ಗೋವಿಗೆ ರಾಜ್ಯಮಾತೆ ಸ್ಥಾನಮಾನ ಯಾವತ್ತೋ ನೀಡಬೇಕಿತ್ತು. ಆದರೆ ತಡವಾದರೂ ಇದೀಗ ಸರಿಯಾದ ಸ್ಥಾನಮಾನ ಸಿಕ್ತಿದೆ ಎಂದು ಸಂಘಟನೆಗಳು ಹರ್ಷ ವ್ಯಕ್ತಪಡಿಸಿದೆ. ಮತ್ತೊಂದೆಡೆ ಇವೆಲ್ಲಾ ಚುನಾವಣಾ ಗಿಮಿಕ್ ಎಂದು ಕೆಲ ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಆದರೆ ಚುನಾವಣೆ ಸಮೀಪ ಬಿಜೆಪಿ ಶಿವಸೇನೆ ನೇತೃತ್ವದ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.