Asianet Suvarna News Asianet Suvarna News

ಶಿವಮೊಗ್ಗ‌: ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 37 ಗೋವುಗಳ ರಕ್ಷಣೆ

ಶಿಕಾರಿಪುರ ತಾಲೂಕು ಶಿರಾಳಕೊಪ್ಪದಿಂದ ಮಂಗಳೂರಿನ ಬಿ.ಸಿ ರಸ್ತೆಗೆ ಗೋವುಗಳು ರವಾನೆಯಾಗುತ್ತಿದ್ದವು ಎಂದು ತಿಳಿದು ಬಂದಿದೆ. 407 ಐಷರ್ ವಾಹನವನ್ನ ತಡೆದ ಭಜರಂಗದಳ ಯುವಕರು ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಾರ್ಪಲ್ ಸಮೇತ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನ ರವಾನೆ ಮಾಡಲಾಗಿದೆ. ಟಾರ್ಪಲ್  ಬಿಚ್ಚಿ ನೋಡಿದಾಗ ಹೋರಿ, ಕರು, ಎತ್ತುಗಳನ್ನ ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸಲಾಗುತ್ತಿತ್ತು.

37 Protection of Cows in Shivamogga grg
Author
First Published Sep 28, 2024, 9:13 AM IST | Last Updated Sep 28, 2024, 9:13 AM IST

ಶಿವಮೊಗ್ಗ‌(ಸೆ.28): ಕಸಾಯಿ ಖಾನೆಗೆ ಸಾಗಿಸುತ್ತಿದ್ದ 37 ಗೋವುಗಳನ್ನ ರಕ್ಷಿಸಿದ ಘಟನೆ ಶಿವಮೊಗ್ಗದ ಉಷಾ  ನರ್ಸಿಂಗ್ ಹೋಂ ಬಳಿ ನಿನ್ನೆ(ಶುಕ್ರವಾರ) ತಡರಾತ್ರಿ ನಡೆದಿದೆ. 37 ಗೋವುಗಳನ್ನು ಸಾಗಿಸುವ ವೇಳೆ ಭಜರಂಗದಳದ ಕಾರ್ಯಕರ್ತರು ತಡೆದು ರಕ್ಷಿಸಿದ್ದಾರೆ.  

ಶಿಕಾರಿಪುರ ತಾಲೂಕು ಶಿರಾಳಕೊಪ್ಪದಿಂದ ಮಂಗಳೂರಿನ ಬಿ.ಸಿ ರಸ್ತೆಗೆ ಗೋವುಗಳು ರವಾನೆಯಾಗುತ್ತಿದ್ದವು ಎಂದು ತಿಳಿದು ಬಂದಿದೆ. 407 ಐಷರ್ ವಾಹನವನ್ನ ತಡೆದ ಭಜರಂಗದಳ ಯುವಕರು ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನಕ್ಕೆ ಟಾರ್ಪಲ್ ಮುಚ್ಚಿ ಗೋವುಗಳನ್ನ ಸಾಗಿಸಲಾಗುತ್ತಿತ್ತು. ಟಾರ್ಪಲ್ ಸಮೇತ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನ ರವಾನೆ ಮಾಡಲಾಗಿದೆ. ಟಾರ್ಪಲ್  ಬಿಚ್ಚಿ ನೋಡಿದಾಗ ಹೋರಿ, ಕರು, ಎತ್ತುಗಳನ್ನ ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸಲಾಗುತ್ತಿತ್ತು.

Shivamogga: ಶಿವಮೊಗ್ಗಕ್ಕೆ ಹಲವು ರೈಲ್ವೆ ಅಭಿವೃದ್ಧಿಯ ಭರವಸೆ ನೀಡಿದ ವಿ.ಸೋಮಣ್ಣ

ಠಾಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಜಯನಗರ ಪೊಲೀಸ್ ಠಾಣೆಯ ಎದುರು ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ರಕ್ಷಿಸಿದ 37 ಗೋವುಗಳನ್ನು ನಗರದ ಮಹಾವೀರ ಗೋಶಾಲೆಗೆ ಬಿಡಲಾಗಿದೆ‌. ಭಜರಂಗದಳದ ರಾಜೇಶ್ ಗೌಡ ಅಂಕುಶ್ ಮೊದಲಾದವರ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ. 

Latest Videos
Follow Us:
Download App:
  • android
  • ios